PLEASE LOGIN TO KANNADANET.COM FOR REGULAR NEWS-UPDATES

ಎನ್.ಎಸ.ಎಸ್. ಯೋಜನೆ ಅಡಿಯಲ್ಲಿ
ರಾಷ್ಟ್ರೀಯ ಸೆವಾ ಯೋಜನಾ ಘಟಕ ಸರಕಾರಿ ಪದವಿಪೂರ್ವ ಕಾಲೇಜು ಕಿನ್ನಾಳ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಹಯೋಗದೊಂದಿಗೆ ೧೦೮ ಆರೋಗ್ಯ ಮತ್ತು ತುರ್ತು ಸೇವೆಗಳ ಪ್ರಾತ್ಯಕ್ಷಿಕತೆಯನ್ನು ಏರ್ಪಡಿಸಲಾಗಿತ್ತು. 
ಈ ಕಾರ್ಯಕ್ರಮದಲ್ಲಿ ಎ. ಇ. ಟಿ. ವಿಜಯಕುಮಾರ ಅವರು ತುರ್ತು ಸೇವೆಗೆ ಹೇಗೆ ಕರೆಮಾಡಬೇಕು, ಯಾವ ಸಂದರ್ಭಗಳಲ್ಲಿ ಕರೆಮಾಡಬೇಕು, ಮತ್ತು ಕರೆ ಸ್ವೀಕರಿಸಿದ ೧೦೮ ಸಿಬ್ಬಂದಿ ಆಗಮಿಸಿ ವಿವಿದ ತುರ್ತು ಸೇವೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂದು ತಿಳಿಸಿದರು. ಹಾಗೆ ಮತ್ತೊಬ್ಬ ಎ. ಇ. ಟಿ ಪ್ರಕಾಶ ರವರು ೧೦೮ ವಾಹನದಲ್ಲಿರುವ ವಿವಿದ ಉಪಕರಣಮತ್ತು ಕಿಟ್‌ಗಳನ್ನು ಪ್ರದರ್ಶಿಸಿ ಉಪಯೋಗದ ಬಗ್ಗೆ ಮಾಹಿತಿ ನಿಡಿದರು. ಇದೆ ಸಂದರ್ಭದಲ್ಲಿ ವಾಹನ ಅಪಗಾತವಾದಾಗ ೧೦೮ ಸಿಬ್ಬಂದಿ ಹೇಗೆ ಉಪಚಾರ ಮಾಡುತ್ತಾರೆ ಎಂಬುದರಬಗ್ಗೆ ಲಗು ಪ್ರಾತ್ಯಕ್ಷಿಕತೆಯನ್ನು ವಿದ್ಯಾರ್ಥಿಗಳಿಗೆ ತೊರಿಸಿದರು. ಇವರಿಗೆ ಸಹಾಯಕರಾಗಿ ವಾಹನ ಚಾಲಕರಾದ ಮೆಹಬೂಬ್, ಕೆ. ಎ. ದಿಂಡೂರ, ಅಂದನಗೌ ಪೊ.ಪಾ, ಇದ್ದರು.
ಕಾರ್ಯಕ್ರಮದ ಆರಂಭದಲ್ಲಿ ಎನ್.ಎಸ.ಎಸ್. ಕಾರ್ಯಕ್ರಮಾಧಿಕಾರಿಯಾದ ವಾಸುದೇವ ಜಿ. ಅಡವಿಬಾವಿ ೧೦೮ ತುರ್ತು ಸೇವೆಗಳ ಅಗತ್ಯಕ್ಕೆ ಮತ್ತು ಇದರಿಂದಾಗುವ ಪ್ರಯೋಜನ ಹಾಗೂ ಅನಗತ್ಯ ಕರೆಗಳಿಂದಾಗುವ ಪರಿಣಾಮಗಳ ಕುರಿತು ವಿವರಣೆ ನೀಡಿದರು. ಪ್ರಾಚಾರ್ಯರಾದ ವಿ. ಹೆಚ್. ಮಂಡಸೊಪ್ಪಿ, ಉಪ ಪ್ರಾಚಾರ್ಯರಾದ ಮಾಲಾ ಪತ್ತಾರ, ಹಾಗೂ ಕಾಲೇಜಿನ ಉಪನ್ಯಾಸಕರಿಂದ ಪ್ರೌಢಶಾಲೆಯ ಶಿಕ್ಷಕ ವರ್ಗ, ವಿದ್ಯಾಥಿ ವಿದ್ಯಾಥಿನಿಯರು ಉಪಸ್ಥಿತರಿದ್ದರು.  ಕಾರ್ಯಕ್ರಮದ ಕೊನೆಯಲ್ಲಿ  ೧೦೮ ಸೇವೆಯ ಜಾಗೃತಿ  ಕುರಿತು ಕರ ಪತ್ರಗಳನ್ನು ಹಂಚಲಾಯಿತು 

Advertisement

0 comments:

Post a Comment

 
Top