ಕೊಪ್ಪಳ, ೨೮- ತಾಲೂಕಿನ ಹೂವಿನಾಳ ಗ್ರಾಮದ ಕಟ್ಟಡ ನಿರ್ಮಾಣ ಮೇಸ್ತ್ರೀ ದೇವಯ್ಯ ತಂದೆ ಪತ್ರಯ್ಯ ಸಸಿಮಠ ಡೆಂಘೋ ಜ್ವರದಿಂದ ಮೃತಪಟ್ಟಿದ್ದು, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಶೋಕ ವ್ಯಕ್ತಿಪಡಿಸಿದೆ.
ಸಂಘ ಸದಸ್ಯನಾಗಿದ್ದ ದೇವಯ್ಯ ಸಸಿಮಠ ಸಂಘಟನೆಯ ಚಟುವಟಿಕಗಳಲ್ಲಿ ಸಕ್ರಿಯವಾಗಿದ್ದ ಮೊನ್ನೆ ಐದು ದಿನ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಡಾ|| ಲಕ್ಷ್ಮೀನಾರಾಯಣ ಅವರ ಆಸ್ಪತ್ರೆಯಲ್ಲಿ ಎರಡು ದಿನ ತೋರಿಸಿ ವೈದ್ಯರ ಶೀಫಾರಸಿನಂತರ ಬಳ್ಳಾರಿಯ ವಿಮ್ಸ್‌ನಲ್ಲಿ ಒಳರೋಗಿಯಾಗಿ ಸೇರಿಸಲಾಗಿತ್ತು.ಅಲ್ಲಿ ಐದನೇ ದಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಮೃತರು ತಂದೆ, ತಾಯಿ, ಆರು ವರ್ಷ ಮತ್ತು ಐದು ವರ್ಷ ಇಬ್ಬರು ಗಂಡು ಮಕ್ಕಳನ್ನು ಪತ್ನಿ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗರಲಿದ್ದಾರೆ.
ಅಂತ್ಯಕ್ರೀಯೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಬಹದ್ದೂರಬಂಡಿ ಗ್ರಾಮದ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾಹುಸೇನ ದಿದ್ದಿ, ದಾದಾಪೀರ ಎನ್. ಮಂಡಲಗೇರಿ ಮುಂತಾದವರು ಪಾಲ್ಗೊಂಡು ಶೋಕ ವ್ಯಕ್ತಪಡಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರಕುವ ಸೌಲಭ್ಯಗಳನ್ನು ಕೊಡಿಸುವುದಾಗಿ ಸಂಘದ ಅಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ ತಿಳಿಸಿದ್ದಾರೆ.
0 comments:
Post a Comment