PLEASE LOGIN TO KANNADANET.COM FOR REGULAR NEWS-UPDATES


ರಾಷ್ಟ್ರೀಯ ಮುಷ್ಕರಕ್ಕೆ ಬೆಂಬಲಿಸಿ 
ಕೊಪ್ಪಳ. ಸೆ: ೨೦, ಡೀಸೆಲ್ ಬೆಲೆ ಏರಿಸಿ, ಅನಿಲ ಸಿಲಿಂಡರ್ ಸಬ್ಸಿಡಿಗೆ ಮಿತಿ ವಿಧಿಸಿ ಜನರ ಬದುಕಿಗೆ ಹಚ್ಚಿದ ಬೆಂಕಿ ಆರುವ ಮುನ್ನ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರೂರ ಕ್ರಮದ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ಭಾರತ ಕಮ್ಯೂನಿಸ್ಟ ಪಕ್ಷ ನಿರ್ಧರಿಸಿದ್ದು ರಾಜ್ಯದ ಜನತೆಯ ಬೆಂಬಲಕ್ಕಾಗಿ ಮನವಿ ಮಾಡಿ ಸಿಪಿಐದಿಂದ ನಗರದ ಸಾಹಿತ್ಯ ಭವನದಿಂದ ತಹಶೀಲ್ ಕಾರ್ಯಾಲಯದವರೆಗೆ ಮೆರವಣಿಗೆಯಲ್ಲಿ ತೇರಳಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸೆಪ್ಟೆಂಬರ್ ೨೦, ೨೦೧೨ರಂದು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ರಾಜ್ಯದಾದ್ಯಂತ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಸಣ್ಣ-ಪುಟ್ಟ ವ್ಯಾಪರಸ್ಥರು ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದೆ.
ರಾಜ್ಯ ಮಂಡಳಿಯ ಕೆರೆ ಮೇರೆಗೆ ನಡೆಯುಲಿರುವ ಪ್ರತಿಭಟನೆ ಬೆಂಬಲಿಸಿ ಚಳವಳಿಯನ್ನು ರೂಪಿಸಿರುವ ಕೊಪ್ಪಳ ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷವು ಕೇಂದ್ರ ಸರ್ಕಾರವನ್ನು ತತ್ತಕ್ಷಣ ವಜಾಮಾಡುವಂತೆ ಒತ್ತಾಯಿಸುತ್ತದೆ. ಶ್ರೀಮಂತರ ಪರ ಅಧಿಕಾರ ನಡೆಸುತ್ತಿರುವ ಕೇಂದ್ರದಲ್ಲಿಯ ಕಾಂಗ್ರೆಸ್ ಸರ್ಕಾರದ ಹಾಗೂ ರಾಜ್ಯದಲ್ಲಿನ ಕೋಮುವಾದಿ ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ತತ್ತರಿಸಿ ಹೋಗಿರುವ ಜನತೆಯು ಜನಪರ ಚಳುವಳಿಗೆ ಬೆಂಬಲಕ್ಕೆ ನಿಂತಿದ್ದಾರೆ.
ಸ್ವಲ್ಪವು ಬಡವರ ಪರ ಕಾಳಜಿ ಇರದ ಕೇಂದ್ರ ಸರ್ಕಾರವು ಪ್ರತಿ ಘಂಟೆಗೊಮ್ಮೆ ತಪ್ಪಿದರೆ ಪ್ರತಿದಿನಕೊಮ್ಮೆ ಡೀಸೆಲ್, ಪೆಟ್ರೋಲ್, ಅನಿಲ ಸಿಲಿಂಡರ್ ಬೆಲೆಗಳ ಹೆಚ್ಚಿಸುತ್ತ ಜನ ಸಾಮಾನ್ಯರ ಜೀವನದ ಜೊತೆ ಚಲ್ಲಾಟವಾಡುತ್ತಿದೆ. ಸಾಕಷ್ಟು ಹಗರಣಗಳಿಗೆ ಸಿಕ್ಕಿರುವ ಮನಮೋಹನ್‌ಸಿಂಗ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. 
ಆಳುವ ಹೊಣೆಗೇಡಿ ಪಕ್ಷಗಳ ಬೇಜವಾಬ್ದಾರಿತನದಿಂದಾಗಿ, ಬೆಲೆ ಏರಿಕೆಯಿಂದಾಗಿ, ಜನರಿಗೆ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆ. ಇದಲ್ಲದೆ ರಾಜ್ಯದಲ್ಲಿ ಭೀಕರ ಬರ, ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕಾದ ಕೇಂದ್ರ-ರಾಜ್ಯ ಸರ್ಕಾರಗಳು ಅನಾಗತ್ಯವಾಗಿ ಆರೋಪ-ಪ್ರತ್ಯಾರೋಪದಲ್ಲಿ ತೋಡಗಿವೆ. ಅಂದು ಭರವಸೆ ಮಾತುಗಳ ನಂಬಿ ಮತ ಚಲಾಯಿಸಿದ ಮತದಾರರು ಅಂದರೆ ಜನತೆಯು ಭ್ರಷ್ಟಾಚಾರದಲ್ಲಿ, ಅವ್ಯವಹಾರದಲ್ಲಿ ತೊಡಗಿರುವ ಸರ್ಕಾರಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಸದಾ ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಸಿಪಿಐದೊಂದಿಗೆ ಕೈಜೋಡಿಸಿರುವ ಜನತೆಯು ಇಂದಿನ ಸಾಂಕೇತಿಕ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಆಳುವ ಸರ್ಕಾರಗಳು ತಮ್ಮ ಜನವಿರೋಧಿ ಧೋರಣೆಯನ್ನು ಬದಲಿಸಿಕೊಳ್ಳದಿದ್ದಲ್ಲಿ ಪಕ್ಷವು ಗಂಭೀರ ಸ್ವರೂಪದ ಹೋರಾಟಗಳನ್ನು ರೂಪಿಸಬೇಕಾಗುತ್ತದೆ.
: ಬೇಡಿಕೆಗಳು :
* ಚಿಲ್ಲರೆ ಮಾರುಕಟ್ಟೆಗೆ ವಿದೇಶಿ ನೇರಬಂಡವಾಳ ಹೂಡಿಕೆಯನ್ನು ಪಕ್ಷವು ವಿರೋಧಿಸುತ್ತದೆ.
* ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ (ಸಿಲೆಂಡರ್) ಬೆಲೆ ಏರಿಕೆಯನ್ನು ತಡೆಗಟ್ಟಿ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಹಾಗೂ ಅಡುಗೆ ಅನಿಲ ಬಳಕೆಗೆ ಹೇರಿರುವ ನಿರ್ಬಂಧನೆ ಸಡಿಲಿಸಬೇಕು.
* ಕೊಪ್ಪಳ ಜಿಲ್ಲೆದ್ಯಂತ ಸಂಪೂರ್ಣ ನೀರಾವರಿ ಯೋಜನೆ ಜಾರಿಯಾಗಲಿ.
* ಕಾರ್ಖಾನೆಗಳ ಸ್ಥಾಪನೆ ಹೆಸರಿನಲ್ಲಿ ಭೂಕಬಳಿಕೆ ನಿಲ್ಲಲ್ಲಿ.
* ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿ, ಅಂಗನವಾಡಿ ಉದ್ಯೋಗಿಗಳನ್ನು, ಬಿಸಿಯೂಟ ತಯಾರಿಕರನ್ನು, ಆಶಾ ಕಾರ್ಯಕರ್ತೆರನ್ನು  ಖಾಯಂಗೊಳಿಸಬೇಕು.
* ಉದ್ಯೋಗ ಖಾತ್ರಿಯನಲ್ಲಿ ಅವ್ಯವಹಾರದ ಸಮಗ್ರ ತನಿಖೆ ನಡೆಯಬೇಕು, ವರ್ಷ ಪೂರ್ತಿ ಕೃಷಿ ಕಾರ್ಮಿಕರಿಗೆ ಖಾತ್ರಿ ಯೋಜನೆಯಡಿ  ಉದ್ಯೋಗ ಸಿಗುವಂತಾಗಬೇಕು.
* ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್. ಎ. ಗಫಾರ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ  ಬಸವರಾಜ ಶೀಲವಂತರ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೋಲಿ, ಅಖಿಲ ಭಾರತ ಕಿಸಾನ ಸಭಾ ಜಿಲ್ಲಾ ಸಂಚಾಲಕ ನನ್ನುಸಾಬ ನೀಲಿ, ಶಿವಪ್ಪ ಹಡಪದ, ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಮತ್ತು ವರ್ಕರ್‍ಸ್ ಯುನಿಯನ್ ವಿಭಾಗಿಯ ಪ್ರಧಾನ ಕಾರ್ಯದರ್ಶಿ ಎ.ಬಿ. ದಿಂಡೂರ್, ಆಟೋ ಸಂಘದ ಮುಖಂಡ ಮಖಬೂಲ್ ರಾಯಚೂರು, ಪ್ರಗತಿಪರ ಸಂಘಟನೆಯ ಮುಖಂಡ ಮೈಲಪ್ಪ ಬಿಸರಳ್ಳಿ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಬಿಸಿಯೂಟ ತಯಾರಕರ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮೇಸ್ತ್ರಿ, ಅಂ.ಕಾರ್ಯಕರ್ತೆ ಶೈಲಜಾ ಸಸಿಮಠ, ಮನೆ ಕೆಲಸಗಾರರ ಸಂಘದ ರಜೀಯಾ ಬೇಗಂ, ಮಹಿಳಾ ಹೋರಾಟರಾದ ಶಿವಮ್ಮ, ರತ್ನಮ್ಮ, ಅಮರಮ್ಮ, ಕಮಲಾ, ಸುವರ್ಣ, ಶೈಲಾ, ಶೋಭಾ, ಸಂಗಮ್ಮ, ಖಾಜಾಬಿ, ಶಶಿಕಲಾ, ಶಂಕ್ರಮ್ಮ, ಕಟ್ಟಡ ಕಟ್ಟುವ ಮತ್ತು ಬಾರ ಬೆಂಡಿಂಗ್ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ತಳಕಲ್ ಘಟಕದ ಅಧ್ಯಕ್ಷ ಬಾಬುಸಾಬ ಬ್ಯಾಡಗಿ, ಹುಸೇನ ಮೌಲಾಸಾಬ ಸಬರದ, ಸೋಮಪ್ಪ ಎಟ್ಟಿ ಮತ್ತಿತರರು ಭಾಗವಹಿಸಿದ್ದರು.

Advertisement

0 comments:

Post a Comment

 
Top