PLEASE LOGIN TO KANNADANET.COM FOR REGULAR NEWS-UPDATES


 
ಕೊಪ್ಪಳ,ಸೆ.೨೬: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದುಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣವನ್ನು ಕೇವಲ ಒಂದು ವಾರದಲ್ಲಿ  ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ  ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜರಾಂ ಯವರು ಭರವಸೆ ನೀಡಿದರು.
ಅವರು ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಸೆ.೨೩ ರಂದು ಬೆಳಿಗ್ಗೆ ೧೧ ಘಂಟೆಗೆ  ಗ್ರಾಮ ಪಂಚಾಯತಿಯ ಮಾಳೇಕೊಪ್ಪ ಗ್ರಾಮದಲ್ಲಿ ನಡೆದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆರಳ್ಳಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡುತ್ತಿದ್ದರು.
ಭೀಕರ ಬರಗಾಲ ಪರಸ್ಥಿತಿಯಲ್ಲಿ ತಾಲೂಕಿನ ಜನರು ಗೂಳೆ ಹೊಗುವದು ತಪ್ಪಿಸಲು ಈ ಯೋಜನೆಯನ್ನು ತುಂಬಾ ಉಪಯಕ್ತವಾಗಿದೆ ಮತ್ತು ಬಡಜನರು ಯಾವದೇ ಕಾರಣಕ್ಕು ಗೊಳೆ ಹೊಗುವದು ಅವಶ್ಯಕತೆ ಇಲ್ಲ. ಸರಕಾರ ಕೂಲಿ ಕಾರ್ಮಿಕರಿಗಾಗಿಯೇ ಈ  ಯೋಜನೆಯನ್ನು ಜಾರಿಗೆ ತಂದಿದೆ, ಜನರು ಈ ಯೋಜನೆಯ   ಸದುಪಯೋಗ ಪಡಿಸಿಕೋಳ್ಳಬೇಕು ಮತ್ತು  ಈ ಯೋಜನೆಯಲ್ಲಿ ದುಡಿದ ಕೂಲಿ ಕಾರ್ಮೀಕರಿಗೆ ಕೂಲಿ ಹಣವನ್ನು ಬೇಗನೆ ಪಾವತಿಸಲು ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟಿನ ಆದೇಶ ನೀಡಲಾಗಿದೆ. ಆದಾಗ್ಯ ಸಹ  ಅಧಿಕಾರಿಗಳ ನಿರ್ಲಕ್ಷ ವಹಿಸಿದರೆ ಆ  ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಇಓ ರಾಜಾರಾಂ ಅವರು ತಿಳಿಸಿದರು.
ಮಾಳೆಕೊಪ್ಪ ಗ್ರಾಮದ ಕೆರೆಳ್ಳಿ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಸಿ.ಇ.ಓ ರಾಜಾರಾಂ ಅವರು ಬೇಟಿ ನೀಡಿದ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಯವರು ಒಂದು ದಿನಕ್ಕೆ ೪೫೦ ಕೂಲಿಕಾರ್ಮಿಕರು ಕೆಲಸಕ್ಕಾಗಿ ಬರುತ್ತಿದ್ದಾರೆ. ಈಗಾಗಲೇ ಅನುಮೋದನೆಗೊಂಡಿರುವ ಕ್ರೀಯಾ ಯೋಜನೆಯ ೩ ಲಕ್ಷ ರೂಪಾಯಿಗಳು ಸಾಲುತ್ತಿಲ್ಲ ಮತ್ತು ದಿನದಿಂದ ದಿನಕ್ಕೆ ಕೂಲಿಕಾರ್ಮಿಕರು ಕೆಲಸಕ್ಕಾಗಿ ಬೇಡಿಕೆ ಬರುವುದರಿಂದ ಸದರಿ ಕಾಮಗಾರಿ ಮೊತ್ತವನ್ನು ಸುಮಾರು ೧೦ ರಿಂದ ೧೫ ಲಕ್ಷ ಹೆಚ್ಚಿಸಿಕೊಡಬೇಕೆಂದು ಪಂಚಾಯತ ಅಬಿವೃದ್ಧಿ ಅಧಿಕಾರಿಯವರು ಸಿ.ಇ.ಓ ಅಧಿಕಾರಿಯವರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಸಿ.ಇ.ಓ ಅಧಿಕಾರಿಯವರು ಕಾಮಗಾರಿ ಮೊತ್ತವನ್ನು ಹೆಚ್ಚಿಸಿ ಅನುಮೊದನೆ ಮಾಡಿಕೊಡುವುದಾಗಿ ಭರವಸೆ ನೀಡಿದರು.  
  ಈ ಸಂದರ್ಭದಲ್ಲಿ ಗ್ರಾಮ  ಪಂಚಾಯತಿಯ  ಅಭಿವೃದ್ಧಿ ಅಧಿಕಾರಿ ಕು.ರೇಣುಕಾ ಟಂಕದ ಹಾಲಿ, ಅಧ್ಯಕ್ಷರಾದ ಮುತ್ತಣ್ಣ ಗೊಂಡಬಾಳ, ಗ್ರಾ.ಪಂ.ಮಾಜಿ ಅದ್ಯಕ್ಷರಾದ ಈರಪ್ಪ, ಉಪಾದ್ಯಕ್ಷರಾದ ಖಾಜಾಬಿ ಸೋಂಪುರ, ಸದಸ್ಯರಾದ ಶಂಕ್ರಮ್ಮ ಜಂತ್ಲಿ ಗ್ರಾಮದ ಸಾರ್ವಜನಿಕರು ಹಾಜರಿದ್ದರು.

Advertisement

0 comments:

Post a Comment

 
Top