ಪಕ್ಕದ ಬಳ್ಳಾರಿ ಲೋಕಸಬಾ ಕ್ಷೇತ್ರದ ಮತಗಳ ಮರುಎಣಿಕೆ ಕಾರ್ಯ ಶನಿವಾರ ಆರಂಭ ಗೋಂಡು ಫಲಿತಾಂಶ ೨೦೦೯ರಂತೆ ಹೊರಬಂದು ಸಂಸದರಾಗಿರುವ ಜೆ.ಶಾಂತಾರು ಯತಾವತ್ತು ಗೆಲುವು ಸಾದಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡುವುದರ ಮೂಲಕ ಆಯ್ಕೆಯಾಗಿರುವುದಕ್ಕೆ ಕೊಪ್ಪಳದಲ್ಲಿ ಜೆ.ಶಾಂತಾರವರ ಪರ ಬಿ.ಎಸ್.ಆರ್..ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ನೇತೃತ್ವದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾರಿ ಹರ್ಷ ವ್ಯಕ್ತ ಪಡಿಸಿ ವಿಜಯೋತ್ಸವ ಆಚರಿಸಿದರು. ಮತದಾನದ ಮರುಎಣಿಕೆ ಫಲಿತಾಂಶ ಹೋರಬೀಳಿದ ಬಳಿಕ ಇಲ್ಲಿನ ಅಶೋಕ್ ಸರ್ಕಲ್ ನಂತರ ಶ್ರೀ ಬಸವೇಶ್ವರ ಸರ್ಕಲ್‌ಬಳಿ ಜಮಾಯಿಸಿದ ಭಾರಿಸಂಖ್ಯೆಯಲ್ಲಿ ಬಿ.ಎಸ್.ಆರ್..ಕಾಂಗ್ರೆಸ್ ಪಕ್ಷದ ಮದಾಧಿಕಾರಿಗಳಯ ಮತ್ತು ಕಾರ್ಯಕರ್ತರು ಅಲ್ಲದೆ ಸಯ್ಯದ್ ಫೌಂಡೇಶನ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಾರ್ವಜನೀಕರಿಗೆ ಸಿಹಿ ಹಂಚಿಸಿ ವಿಜಯೋತ್ಸವ ಆಚರಿಸಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಕೆ.ಎಂ.ಸಯ್ಯದ್‌ರವರು ಮಾತನಾಡಿ ಇದು ಸತ್ಯದ ಜಯ ನ್ಯಾಯದ ಗೆಲವು ಬಳ್ಳಾರಿ ಕ್ಷೇತ್ರಅಲ್ಲದೆ ಈ ನಾಡಿನ ಜನರ ವಿಶ್ವಾಸದ ಗೆಲವು ಇದಾಗಿದೆ. ಈ ಫಲಿತಾಂಶ ವಿರೋಧಿಗಳಿಗೆ ಮುಖಭಂಗ ಮಾಡಿದೆ. ಇದರಿಂದ ನಮ್ಮ ಬಿ.ಎಸ್.ಆರ್.ಪಕ್ಷದ ಮುಂದಿನ ಭವಿಷ್ಯಕ್ಕೆ ಇದೋಂದು ಒಳ್ಳೆಯ ದಾರಿದೀಪಯಾಗಿದೆ ಎಲ್ಲಡೆ ವಿಜಯೋತ್ಸವ ಆಚರಿಸುವುದರ ಮೂಲಕ ಬಿ.ಎಸ್.ಆರ್..ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಲ್ಲರು ಹರ್ಷವ್ಯಕ್ತ ಪಡಿಸಿದ್ದು ನಾಡಿನ ಜನಸಾಮಾನ್ಯರ ವಲವು ಈಗ ನಮ್ಮ ಪಕ್ಷದ ಕಡೆ ಹೆಚ್ಚು ಒಲವು ಕಂಡುಬಂದಿದೆ. ನಮ್ಮ ನಾಯಕ ಬಿ.ಶ್ರೀರಾಮುಲುರವರ ನಾಯಕತ್ವದಲ್ಲಿ ಭಾರಿ ಬದಲಾವಣೆ ಈ ನಾಡಿನಜನರು ನೋಡಲಿದ್ದಾರೆ ಎಂದು ಕೆ.ಎಂ.ಸಯ್ಯದ್ ಹರ್ಷವ್ಯಕ್ತ ಪಡಿಸಿ ಮರುಎಣಿಕೆಯಲ್ಲಿ ಜಯ ಸಾದಿಸಿದ ಸಂಸದೆ ಜೆ.ಶಾಂತಾರವರಿಗೆ ಅಭಿನಂದಿಸಿದರು.ಈ ಸಂದರ್ಭದಲ್ಲಿ ಹನುಮೇಶ ನಾಯಕ, ಶಾಮಿದಸಾಬ ಕಿಲ್ಲೆದಾರ, ಲಕ್ಷ್ಮಣ ಕಲ್ಲಣ್ಣನವರ, ದ್ಯಾಮನ ಗೌಡ, ಲಕ್ಷ್ಮಣ ಕವಲೂರ, ಮೈನುಸಾಬ ಕವಲೂರ, ಗವಿದಿದ್ದಪ್ಪ ಹಂಡಿ, ಚಂದ್ರು ರೋಣದ, ಬಸವರಾಜ ಜಮೇದಾರ, ತಿಪ್ಪೇಶ ಹೂಗಾರ್, ಮಾರುತಿ ಮಾಗಳದ್, ಮಲ್ಲಯ್ಯ ಮೋರನಾಳ, ಬಕ್ಷಿ ನದಾಫ್ ಹಾಗೂ ಬಿ.ಎಸ್.ಆರ್..ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಸಯ್ಯದ್ ಫೌಂಡೇಶನ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು
Home
»
»Unlabelled
» ಬಿ.ಎಸ್.ಆರ್.ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
Subscribe to:
Post Comments (Atom)
0 comments:
Post a Comment