ಕೊಪ್ಪಳ- ವೃತ್ತಿ ಗೌರವವನ್ನು ಕಾಪಾಡಿಕೊಳ್ಳುವದರ ಜೋತೆಗೆ ಶಿಕ್ಷಕರು ಸಮಾಜದಲ್ಲಿ ಆದರ್ಶವನ್ನು ಮೂಡಿಸುವದರೊಂದಿಗೆ ಘನತೆ ಗೌರವವನ್ನು ಕಾಪಾಡಿಕೊಂಡು ಶಿಕ್ಷಕರ ಧರ್ಮವನ್ನು ರಕ್ಷಿಸುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಾನಂದ ಕಡಪಟ್ಟಿ ಹೇಳಿದರು
ನಗರದ ಸರದಾರ ವಲ್ಲಭಭಾಯಿ ಪಟೇಲ ಶಿಕ್ಷಣ ಮಹಾವಿದ್ಯಲಯದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ, ಹಿಂದಿ ದಿನಾಚರಣೆ ಹಾಗೂ ಪ್ರಶಿಕ್ಷಣಾರ್ಥಿ ಪರಿಷತ್ತಿನ ಉದ್ಘಾಟನೆಯನ್ನು ನೆರೆವೆರಿಸಿz ಅವರು ಗುಡಿ ಗುಂಡಾರಗಳಲ್ಲಿ ದೇವರನ್ನು ಕಾಣುವದರ ಬದಲು ಶಿಕಕ್ಷರಾದವರಲ್ಲಿ ದೇವರನ್ನು ಕಾಣಬೇಕಾದರೆ ಆ ಶಿಕ್ಷಕ ತನ್ನ ಜೀವನದಲ್ಲಿ ಎಂತಹ ತ್ಯಾಗವನ್ನು ಮಾಡಿರಬೇಕೆಂದು ಉಹಿಸಲು ಅಸಾಧ್ಯವೆಂದರು.
ಭಾಗ್ಯ ನಗರದ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಸಿ.ವಿ. ಜಡಿ ಮಾತಾನಾಡಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗಬೇಕಾದರೆ ಶಿಕ್ಷಕ ವೃತ್ತಿಯಲ್ಲಿ ಮಾತ್ರ ಸಾದ್ಯ ಎಂದರು.
ಮಹಾವಿದ್ಯಲಯದ ಸಂಯೋಜಕರಾದ ಡಾ|| ಕೆ.ಬಿ.ಬ್ಯಾಳಿ ಮಾತಾನಾಡಿ ಉತ್ತಮ ಶಿಕ್ಷರಿಂದ ಮಾತ್ರ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಹಾಗೂ ಶಿಕ್ಷಕರಾದವರು ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕೆಂದರು.
ಯಲಬುರ್ಗಾ ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ, ಡಾ.ರಾಜಕುಮಾರ ಹಾಗೂ ಪ್ರಶಿಕ್ಷಣಾರ್ಥಿಗಳು ಮಾತನಾಡಿದರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ವೀರಣ್ಣ ನಿಂಗೋಜಿ ಹಾಗೂ ಮುನಿರಾಬಾದ ಹಿಂದಿ ಪ್ರಚಾರಕರಾದ ಎಮ್.ಹೆಚ್.ನಾಗರಾಜವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ಎ.ಹೆಚ್.ಬಳ್ಳಾರಿ ಸ್ವಾಗತಿಸಿದರು. ಆನಂದ ಸಾಳುಂಕೆ ಹಾಗೂ ದೇವೆಂದ್ರಪ್ಪ ನಿರೂಪಿಸಿದರು. ಶ್ರೀಮತಿ ಅಖೀಲಾ ವಂದಿಸಿದರು.
0 comments:
Post a Comment