ಕೊಪ್ಪಳ:- ಅಗಷ್ಟ ೨೫ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಬೆಳಿಗ್ಗೆ-೯ ಗಂಟೆಗೆ ಮೈಸೂರಿನ ಕೌಸ್ತುಭ ಮಾಸಪತ್ರಿಕೆಯ ಸಂಪಾದಕರಾದ ಚುಟುಕು ಸಿರಿ ಶ್ರೀಮತಿ ರತ್ನಾ ಹಾಲಪ್ಪಗೌಡ ಅವರು ಚುಟುಕು ಧ್ವಜಾರೋಹಣ ನೆರವೇರಿಸುವರು.
ಸಮ್ಮೇಳನದ ಉದ್ಘಾಟನೆಯು ಬೆಳಿಗ್ಗೆ-೧೦-೩೦ಗಂಟೆಗೆ ನೆರವೇರುವುದು. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಅಳವಂಡಿಯ ಹಿರಿಯ ಸಾಹಿತಿಗಳಾದ ಶ್ರೀಮತಿ ವಿಮಲಾ ಭುಜಂಗಸ್ವಾಮಿ ಇನಾಮದಾರ ಸಮ್ಮೇಳನಾಧ್ಯಕ್ಷರಾಗಿರುತ್ತಾರೆ. ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಉದ್ಘಾಟಿಸಲಿದ್ದಾರೆ. ಕೊಪ್ಪಳದ ಶಾಸಕರಾದ ಶ್ರೀ ಸಂಗಣ್ಣ ಕರಡಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಜಿ.ಆರ್. ಅರಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಸ್. ರಾಜಾರಾಂ ಅವರು ಪುಷ್ಪಲತಾ ರಾಜಶೇಖರ ಏಳುಬಾವಿಯವರ ಚುಟುಕು ಚೈತ್ರ ಚುಟುಕು ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಗಿರಿಜಾಶಂಕರ ಪಾಟೀಲ ಅವರು ಮುನಿರಾಜ ಎ.ಈ. ಇವರ ಸೋನು (ಅಪ್ಪಟ ಬಂಗಾರ) ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಡೇವಿಡ್ ಸಿಮೆಯೋನ್ ಅವರು ವಿಮಲಾ ಇನಾಮದಾರರ ಬೆಳೆವ ಸಿರಿ ಮಕ್ಕಳ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ ಅವರು ವಿಮಲಾ ಇನಾಮದಾರರ ಚುಟುಕು ಗುಟುಕು ಚುಟುಕು ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸ್ವಾಗತಿಸಲಿದ್ದಾರೆ.
ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಬಿ. ಮಾದಯ್ಯ, ಗದಗಿನ ಸಾಹಿತಿಗಳಾದ ಮಂಜುನಾಥ ಬಮ್ಮನಕಟ್ಟಿ, ರಾಜ್ಯ ಮಟ್ಟದ ಬಸವಜ್ಯೋತಿ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ಸಾಹಿತಿಗಳಾದ ಡಾ. ಕರವೀರಪ್ರಭು ಕ್ಯಾಲಕೊಂಡ, ಸರ್ವಮಂಗಳಾ ಗುರನಗೌಡ ಪಾಟೀಲ,ಡಾ. ಅಚಿಜನಾ ಕೃಷ್ಣಪ್ಪ, ಉಮೇಶ ಬಳಿಗಾರ ಹುಬ್ಬಳ್ಳಿ, ಬಸವರಾಜ ಆಕಳವಾಡಿ, ಅಳವಂಡಿಯ ಕರ್ನಾಟಕ ವಿದ್ಯಾವರ್ಧಕ ಸಮಿತಿಯ ಕಾರ್ಯದರ್ಶಿಗಳಾದ ರೇವಣಸಿದ್ಧೇಶ್ವರಸ್ವಾಮಿ ಹಿರೇಮಠ, ರಾಯಚೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ, ಬಳ್ಳಾರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯು. ನಾಗೇಶ, ದಾವಣಗೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಿ.ಹೆಚ್. ರಾಜಶೇಖರ, ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಡಿ.ವಿ. ಬಡಿಗೇರ, ಗದಗಿನ ಮೆ|| ಶಾಬಾದಿಮಠ ಮಾಲಕರಾದ ಬಾಬಣ್ಣ ಎಸ್. ಶಾಬಾದಿಮಠ, ಪುರಸಭೆಯ ಮಾಜಿ ಅಧ್ಯಕ್ಷರಾದ ಲಲಿತಾ ಅಗಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ಸುಣಗಾರ, ಹುಬ್ಬಳ್ಳಿಯ ಅಖಿಲ ಭಾರತ ಬಂಜಾರ ಸಮಾಜದ ಅಧ್ಯಕ್ಷರಾದ ಪಾಂಡುರಂಗ ಪಮ್ಮಾರ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿ, ವಿನೂತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿದ್ಧಲಿಂಗಸ್ವಾಮಿ ಹಿರೇಮಠ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಬಿ. ವಿರುಪಾಕ್ಷಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್. ಪಾಟೀಲ, ಜಿಲ್ಲಾ ವಾರ್ತಾಧಿಕಾರಿಗಳಾದ ಬಿ. ವಿ. ತುಕಾರಾಂ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಕೆ.ಬಿ. ಬ್ಯಾಳಿ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಬಿ. ಕಲ್ಲೇಶ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕರಾದ ಎಸ್. ಬಾಲಾಜಿ, ತಿರುಳ್ಗನ್ನಡ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಅಂಗಡಿ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ ೧೨-೩೦ಕ್ಕೆ ಕೊಪ್ಪಳ ಜಿಲ್ಲೆಯ ಸಾಹಿತ್ಯ ಕುರಿತು ವಿಚಾರ ಸಂಕಿರಣ ಇದೆ. ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಬಿ.ವಿ. ಶಿರೂರ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಗವೀಶ ಹಿರೇಮಠ ಉಧ್ಘಾಟಿಸಲಿದ್ದಾರೆ. ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಶಂಕ್ರಯ್ಯಸ್ವಾಮಿ ಅಬ್ಬಿಗೇರಿಮಠ ಅವರು ಕೊಪ್ಪಳ ಜಿಲ್ಲೆಯ ಭಾಷಾ ವೈಶಿಷ್ಟ್ಯ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಗಂಗಾವತಿ ತಾಲ್ಲೂಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಪ್ಪ ಮೆಟ್ರಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಡೆದುಬಂದ ದಾರಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಅವರು ಜಿಲ್ಲೆಯ ಪ್ರಸ್ತುತ ಜ್ವಲಂತ ಸಮಸ್ಯೆಗಳು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಟಿವಿ ಜಿಲ್ಲಾ ವರದಿಗಾರರಾದ ಶರಣಪ್ಪ ಬಾಚಲಾಪೂರ ಕೊಪ್ಪಳ ಜಿಲ್ಲೆಯ ರಂಗಭೂಮಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಮಾರ್ಕಂಡೇಯ ಹಂದ್ರಾಳ ಕೊಪ್ಪಳ ಜಿಲ್ಲೆಯ ಜನಪದ ಸಾಹಿತ್ಯ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮೈಸೂರಿನ ಜಾನಪದ ಜಾನ್ಹವಿ ಡಾ. ಅನುಸೂಯಾ ಕೆಂಪನಹಳ್ಳಿ ಅವರು ಚುಟುಕು ಸಾಹಿತ್ಯ ಅಂದು ಇಂದು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್.ವ್ಹಿ. ಪಾಟೀಲ ಗುಂಡೂರ, ಗಜೇಂದ್ರಗಡ ಎಸ್.ಎಂ.ಭೂಮರಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಕುಂಬಾರ, ಸಾಹಿತಿಗಳಾದ ಸಯ್ಯದ್ ತಾಜುದ್ದೀನ್, ಡಾ. ವಿ.ಬಿ ರಡ್ಡೇರ್, ರವಿತೇಜ ಅಬ್ಬಿಗೇರಿ, ಡಾ. ದಸ್ತಗಿರಸಾಬ ದಿನ್ನಿ, ಎಸ್. ಶರಣೇಗೌಡ, ಬಿಜೆಪಿ ಮುಖಂಡ ಶ್ರೀಪಾದಪ್ಪ ಅಧಿಕಾರಿ, ಜೆ.ಡಿ.ಎಸ್. ಮುಖಂಡ ಹನುಮಂತಪ್ಪ ಕಿನ್ನಾಳ, ಹೊಸಪೇಟಿ ಆಕಾಶವಾಣಿಯ ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ, ಅಂಚೆ ಸಹಾಯಕ ದೇವರಾಜ ಎಸ್. ಬಪೂರ, ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ ೨-೩೦ ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ವಿಚಾರ ಸಂಕಿರಣವಿದೆ. ಹುಬ್ಬಳ್ಳಿಯ ಸಾಹಿತಿಗಳಾದ ಕೆ.ಶಾಂತಾ ಬಸವರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಡಾ. ಮಮ್ತಾಜಬೇಗಂ ಉದ್ಘಾಟಿಸಲಿದ್ದಾರೆ. ಚುಟುಕು-ಚುರುಕು ಕುರಿತು ವಿಜಯಲಕ್ಷ್ಮೀ ಮಹಾದೇವ ಕೊಟಗಿ, ಜಾನಪದ ಗೀತೆಗಳು ಕುರಿತು ಅನುಸೂಯಾ ಪಿ. ಜಹಗೀರದಾರ, ಹಾಡ ಬರೆದೆನವ್ವಾ ಕುರಿತು ಶಾಂತಾದೇವಿ ಹಿರೇಮಠ, ಬಿದಿಗೆಯ ಚಂದ್ರ ಕುರಿತು ಅರುಣಾ ನರೇಂದ್ರ, ಮಾಧುರ್ಯ ಕುರಿತು ಶಾರದಾ ಶ್ರಾವಣಸಿಂಗ್, ಅರಳು ಮಲ್ಲಿಗೆ ಕುರಿತು ರತ್ನಾಬಾಯಿ ಘೋರ್ಪಡೆ, ಬೆಳೆವಸಿರಿ ಕುರಿತು ಸ್ನೇಹಲತಾ ಜೋಶಿ, ಹನಿ,ಹನಿ, ಜೇನು ಕುರಿತು ಪುಷ್ಪಾ ರಾಜಶೇಖರ ಏಳುಬಾವಿ ಮಾತನಾಡಲಿದ್ದಾರೆ.
ಮಧ್ಯಾಹ್ನ ೩-೩೦ಕ್ಕೆ ಕವಿಗೋಷ್ಠಿ ನಡೆಯಲಿದ್ದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಈಶ್ವರ ಹತ್ತಿ ಉದ್ಘಾಟಿಸಲಿದ್ದಾರೆ.
ಸಂಜೆ ೬-೦೦ ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರವಾಸೋದ್ಯಮ ಸಚಿವರಾದ, ಬಿ.ಎಸ್.ಆನಂದಸಿಂಗ್ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್. ಗೋನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕರಾದ ಎಸ್. ಆರ್. ಪಾಟೀಲ, ಸಂಸದರಾದ ಶಿವರಾಮೇಗೌಡ, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ, ನಗರ ಸಭೆಯ ಅಧ್ಯಕ್ಷರಾದ ಸುರೇಶ ದೇಸಾಯಿ, ಉಪಾಧ್ಯಕ್ಷರಾದ ಅಮ್ಜದ್ ಪಟೇಲ್, ಸದಸ್ಯರಾದ ಇಂದಿರಾ ಬಾವಿಕಟ್ಟಿ, ಶಕುಂತಲಾ ಹುಡೇಜಾಲಿ, ವಕೀಲರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಸಂದ್ಯಾ ಮಾದಿನೂರ, ಸಿಂಧನೂರಿನ ಅಭಿಯಂತರರಾದ ವಿ.ಸಿ.ಪಾಟೀಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಆರ್. ಎಂ. ಪಾಟೀಲ, ಧಾರವಾಡದ ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರರಾದ ಆರ್.ಬಿ. ಸುಣಗಾರ, ಬಿ.ಜಿ.ಪಿ, ಮುಖಂಡರಾದ ಮಂಜುನಾಥ ಹಳ್ಳಿಕೇರಿ, ಸಿಂಧನೂರಿನ ರಾಮತೀರ್ಥಯ್ಯಸ್ವಾಮಿ ರಾಜಗುರು, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಅಲಬಣ್ಣ ಕಣವಿ, ಸಿಹಿನೀರು ಸ್ವಾಮಿಗಳಾದ ಕೆ. ಮರಿಸ್ವಾಮಿ ಹಿರೇಮಠ ಸಾಹಿತ್ಯ ಪ್ರೇಮಿಗಳಾದ ಹೇಮರಡ್ಡಿ ಬಿಸರಹಳ್ಳಿ, ಸಾಹಿತಿಗಳಾದ ಎಂ.ಎಸ್. ಸವದತ್ತಿ, ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬೀರಪ್ಪ ಅಂಡಗಿ ಚಿಲವಾಡಗಿ, ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ-೩೦ ಕೊಪ್ಪಳ-೫೮೩೨೩೧. ಸನಿಹವಾಣಿ: ೯೦೦೮೯೪೪೨೯೦
0 comments:
Post a Comment