ಆ. ೨೪ ರಂದು
ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಅಧ್ಯಯನ ನಡೆಸಲು ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆ ಹಾಗೂ ಎಸ್‌ಎಫ್‌ಎಸಿ ಯ ವ್ಯವಸ್ಥಾಪಕ ನಿರ್ದೇಶಕ ಪ್ರವೇಶ್ ಶರ್ಮಾ ನೇತೃತ್ವದ ಐವರು ಅಧಿಕಾರಿಗಳ ಕೇಂದ್ರ ಬರ ಅಧ್ಯಯನ ತಂಡ ಆ. ೨೪ ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದೆ.
ಕೇಂದ್ರ ಬರ ಅಧ್ಯಯನ ತಂಡವು ಅಂದು ಬಿಜಾಪುರದಿಂದ ಹೆಲಿಕಾಪ್ಟರ್ ಮೂಲಕ ಕೊಪ್ಪಳ ಜಿಲ್ಲೆ ಕನಕಗಿರಿಗೆ ಆಗಮಿಸಲಿದ್ದು, ನಂತರ ಗಂಗಾವತಿ ಹಾಗೂ ಯಲಬುರ್ಗಾ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕೇಂದ್ರ ಬರ ಅಧ್ಯಯನ ತಂಡವು ಅದೇ ದಿನ ಸಂಜೆ ೫ ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಕೇಂದ್ರ ಬರ ಅಧ್ಯಯನ ತಂಡದಲ್ಲಿ ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆ ಹಾಗೂ ಎಸ್‌ಎಫ್‌ಎಸಿ ಯ ವ್ಯವಸ್ಥಾಪಕ ನಿರ್ದೇಶಕ ಪ್ರವೇಶ್ ಶರ್ಮಾ ಅವರನ್ನೊಳಗೊಂಡಂತೆ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ನಿರ್ದೇಶಕ ಎ. ನಂದಕುಮಾರ್, ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆ ಹೆಚ್ಚುವರಿ ಆಯುಕ್ತ ಡಾ. ಎಂ. ತಮಿಳ್‌ಸೆಲ್ವನ್, ಹಣಕಾಸು ಇಲಾಖೆ ಸಹಾಯಕ ನಿರ್ದೇಶಕ ಮುಕೇಶ್ ಶರ್ಮಾ ಹಾಗೂ ಬೆಂಗಳೂರಿನ ರಂಗಾರೆಡ್ಡಿ ಅವರು ಆಗಮಿಸಲಿದ್ದಾರೆ.
0 comments:
Post a Comment