ಸರಕಾರಿ ಹಿರಿಯ ಪಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ
ಕೊಪ್ಪಳ : ಸರಕಾರಿ ಹಿರಿಯ ಪಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಅರ್ಥಪೂರ್ಣವಾಗಿ ೬೬ ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಮ.ಸಿ ಅಧ್ಯಕ್ಷರಾದ ನಿಂಗಜ್ಜ ಹಳಪೇಟೆ ನೆರವೇರಿಸಿದರು. ಜಯಪ್ರಕಾಶ ಸ್ವಾಗತಿಸಿದರು. ಗಣೇಶ ಬಣ್ಣದ ಮುಖ್ಯಗುರುಗಳು ಪ್ರಾಸ್ತಾವಿಕವಾಗಿ ಮಾತನಡಿದರು.
ಸ್ವಾತಂತ್ರ್ಯೋತ್ಸವ ಕುರಿತು ಗ್ರಾ.ಪಂ. ಉಪಾಧ್ಯಕ್ಷರಾದ ಮಾಬುಸಾಬ ಹೀರಾಳ, ಗ್ರಾ.ಪಂ. ಸದಸ್ಯರುಗಳಾದ ವೀರಬದ್ರಪ್ಪ ಗಂಜಿ, ಧರ್ಮಣ್ಣ ಕುದ್ರಿಮೋತಿ, ಮಾತನಾಡಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರನೀಡಿದರು. ಎಸ್.ಡಿಎಂ.ಸಿ ಅಧ್ಯಕ್ಷರಾದ ಸದಸ್ಯರಾದ ನಿಂಗಜ್ಜ ಹಳಪೇಟಿ, ಸದಸ್ಯರಾದ ಪರಸಪ್ಪ ಗಡಿಗಿ ಮಾತನಾಡಿದರು.
ಈ ಸಂದರ್ಬದಲ್ಲಿ ಗ್ರಾ. ಪಂ. ಸದಸ್ಯರಾದ ನಾಗರತ್ನ ಟಂಕಸಾಲಿ, ಶೋಭಾ ಎಲಿಗಾರ, ಎಸ್.ಡಿಎಂ.ಸಿ ಸದಸ್ಯರಾದ ಚಂದ್ರಶೇಖರ್ ಶಿಡ್ಲಗಟ್ಟಿ, ಸಿದ್ರಾಮಪ್ಪ ವಡ್ಡರ, ಈರಮ್ಮ ಬಜೆಂತ್ರಿ, ಯಶೋಧ ವನ್ನಾಲ, ಹನುಮವ್ವ ವಾಲ್ಕೀಕಿ, ಹಿರಿಯರಾದ ಈರಪ್ಪ ಜಾಲಿಹಾಳ, ಅಂದಾನಪ್ಪ ಮಂಗಳೂರ, ಶಾಲೆಯ ಶಿಕ್ಷಕರಾದ ಶೇಖರಪ್ಪ ದೈ.ಶಿ, ಜಲಜಾಕ್ಷೀ, ವಿಜಯಶ್ರೀ, ರೇಣುಕಾ, ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರಾಜಪ್ಪ ಎಂ ಸ.ಶಿ. ನೆರವೇರಿಸಿದರೆ ವಂದನಾರ್ಪಣೆಯನ್ನು ನಾಗಪ್ಪ ವಾಯ್. ಸ.ಶಿ. ನೆಡೆಸಿಕೊಟ್ಟರು.
0 comments:
Post a Comment