ಬೆಂಗಳೂರು, ಆ.17: ಈಶಾನ್ಯ ರಾಜ್ಯಗಳ ಜನತೆ ಆತಂಕದಿಂದ ಕರ್ನಾಟಕ ಬಿಟ್ಟು ವಲಸೆ ಹೋಗುತ್ತಿರುವುದರ ಹಿಂದೆ ಸಂಘ ಪರಿವಾರದ ಕೈವಾಡವಿದ್ದು, ದೊಡ್ಡ ಮಟ್ಟದ ಕೋಮು ಸಂಘರ್ಷಕ್ಕೆ ಸಂಚು ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕುಗಳ ವಿಭಾಗ ಗಂಭೀರ ಆರೋಪ ಮಾಡಿದೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ಧನಂಜಯ, ಈಶಾನ್ಯ ರಾಜ್ಯಗಳ ಜನತೆ ಕರ್ನಾಟಕ ಬಿಟ್ಟು ತೆರಳುವಂತೆ ವ್ಯವಸ್ಥಿತವಾಗಿ ಗಾಳಿ ಸುದ್ದಿ ಹಬ್ಬಿಸಿರುವುದರ ಹಿಂದೆ ಆರೆಸ್ಸೆಸ್‌ನ ಕುತಂತ್ರ ಅಡಗಿದೆ ಎಂದು ದೂರಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ರಕ್ಷಣೆ ಹಾಗೂ ಉಪಾಹಾರ ನೀಡುವ ನೆಪದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಲಾಠಿ ಹಿಡಿದು ಮತ್ತಷ್ಟು ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆತಂಕಕಾರಿ ಎಸ್‌ಎಂಎಸ್ ಸಂದೇಶ ರವಾನೆಯ
ಹಿಂದೆ ಆರೆಸ್ಸೆಸ್‌ನ ಕೈವಾಡ ಸ್ಪಷ್ಟ ಎಂದು ಆಪಾದಿಸಿದರು. ಆರೆಸ್ಸೆಸ್ ಕಾರ್ಯಕರ್ತರು ಈಶಾನ್ಯ ರಾಜ್ಯದ ಜನತೆಗೆ ಮಾನಸಿಕ ಸ್ಥೈರ್ಯ ತುಂಬಲ ರೈಲ್ವೆ ನಿಲ್ದಾಣಕ್ಕೆ ಲಾಠಿ ಹಿಡಿದು ಹೋಗುವ ಅಗತ್ಯವೇನಿತ್ತು ಎಂದು ಖಾರವಾಗಿ ಪ್ರಶ್ನಿಸಿದ ಧನಂಜಯ, ಗೃಹ ಸಚಿವರಿಗೆ ರಕ್ಷಣೆ ಕಲ್ಪಿಸಲು ಆರೆಸ್ಸೆಸ್ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ತೆರಳಿರಬಹುದು ಎಂದು ಲೇವಡಿ ಮಾಡಿದರು.ರಾಜ್ಯದ ಪೊಲೀಸ್ ವ್ಯವಸ್ಥೆ ಅತ್ಯಂತ ಬಲಿಷ್ಟವಾಗಿದೆ.
ಆದರೂ, ಸಂಘ ಪರಿವಾರದವರು ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವಂತಹ ಸೂಕ್ಷ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಕಾರಕ್ಕೆ ಮಾಡುವ ಅವಮಾನ ಎಂದು ಟೀಕಿಸಿದ ಅವರು, ರೈಲ್ವೆ ನಿಲ್ದಾಣದಲ್ಲಿ ಲಾಠಿ ಹಿಡಿದ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರುಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಕೋಮು ಸಂಘರ್ಷ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭಕ್ಕೆ ಸಂಘ ಪರಿವಾರ ಸನ್ನಾಹ ನಡೆಸಿದೆ ಎಂದು ಧನಂಜಯ ಆರೋಪಿಸಿದರು. ಈ ಸಂದರ್ಭದಲ್ಲಿ ಘಟಕದ ಮುಖಂಡರಾದ ಗಿರೀಶ್ ಪಟೇಲ್, ಶಿವಣ್ಣ, ಪ್ರಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.
0 comments:
Post a Comment