PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ತಿರುಳ್ಗನ್ನಡ   ಕಲೆ, ಸಾಹಿತ್ಯ, ಮತ್ತು ಸಾಂಸ್ಕೃತಿಕ  ಪ್ರತಿಷ್ಠಾನವು ಆಗಷ್ಟ ೨೬ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ತಿರುಳ್ಗನ್ನಡ  ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ ಆಯ್ಕೆ ಮಾಡಲಾಗಿದೆ ಎಂದು ತಿರುಳ್ಗನ್ನಡ   ಕಲೆ, ಸಾಹಿತ್ಯ, ಮತ್ತು ಸಾಂಸ್ಕೃತಿಕ  ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ  ಮಹೇಶಬಾಬು ಸುರ್ವೆ ಹಾಗೂ ತಿರುಳ್ಗನ್ನಡ   ಕಲೆ, ಸಾಹಿತ್ಯ, ಮತ್ತು ಸಾಂಸ್ಕೃತಿಕ  ಪ್ರತಿಷ್ಠಾನದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಎಚ್.ಎಸ್.ಪಾಟೀಲರು  ಕೊಪ್ಪಳ ಜಿಲ್ಲೆಯ ರಂಗಭೂಮಿ, ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕವಿ ಗವಿಸಿದ್ದ.ಎನ್.ಬಳ್ಳಾರಿ, ಕೊಪ್ಪಳ ಶ್ರೀ ಗವಿಸಿದ್ದೇಶ್ವರರು, ಕೊಪ್ಪಳ ಶ್ರೀ ಗವಿಮಠ, ಶಿವಶಾಂತವೀರ ಮಹಾಸ್ವಾಮಿಗಳು, ಕೊಪ್ಪಳ ಜಿಲ್ಲಾ ಸಾಹಿತ್ಯ ಸಂಸ್ಕೃತಿ ದರ್ಶನ ಗ್ರಂಥಗಳನ್ನು ಹೊರತಂದಿದ್ದಾರೆ. ಗವಿದೀಪ್ತಿ, ಶಾಂತಪ್ರಭೆ, ತಿರುಳ್ಗನ್ನಡ , ಕೊಪ್ಪಳ ಜಿಲ್ಲಾದರ್ಶನ, ಪಾರಸೀಕವೀಂದ್ರರರು, ಕೊಪಣಸಿರಿ ಗ್ರಂಥಗಳನ್ನು ಸಂಪಾದಿಸಿದ್ದಾರೆ. 
ಒಟ್ಟಾರೆ ಇವರು ಸಮಗ್ರ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ತಿರುಳ್ಗನ್ನಡ  ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಮಹೇಶಬಾಬು ಸುರ್ವೆ ಹಾಗೂ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಯಿತು. ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಎಂ.ಸಾಧಿಕಲಿ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಸಿದ್ದಪ್ಪ ಹಂಚಿನಾಳ, ಪ್ರಕಾಶ ದೇಸಾಯಿ, ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ, ಪತ್ರಕರ್ತರ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷರಾದ  ಹೆಚ್.ಎಸ್.ಹರೀಶ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಹನುಮಂತಪ್ಪ ಹಳ್ಳಿಕೇರಿ, ವೈ.ಬಿ.ಜೂಡಿ, ನಾಗಲಿಂಗಯ್ಯ ಮಠಪತಿ, ಹನುಮಂತಪ್ಪ.ಎಸ್.ಅಬ್ಬಿಗೇರಿ, .ಕಾರ್ಯನಿರತ ಪತ್ರಕರ್ತರ  ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಸುಣಗಾರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top