PLEASE LOGIN TO KANNADANET.COM FOR REGULAR NEWS-UPDATES


ಮಂಗಳೂರಿನಲ್ಲಿ  
*ಟಿವಿ ವಾಹಿನಿಗಳ ಮೇಲೆ ಕೇಸು ದಾಖಲು      *ರೇವ್ ಪಾರ್ಟಿಯಲ್ಲ ಬರ್ತ್ ಡೇ ಪಾರ್ಟಿ: ಎಡಿಜಿಪಿ 
*ಹಿಂಜಾವೇ ಕೃತ್ಯ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ      
ಮಂಗಳೂರು, ಜು.29: ನಗರದ ಹೊರವಲಯದ ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಶನಿವಾರ ರಾತ್ರಿ ನಡೆದುದು ಬರ್ತ್ ಡೇ ಪಾರ್ಟಿಯೇ ಹೊರತು ರೇವ್ ಪಾರ್ಟಿಯಲ್ಲ. ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್, ಕೋಕಾ ಕೋಲಾ, ಆಹಾರದ ಪೊಟ್ಟಣಗಳು ಮಾತ್ರ ಪತ್ತೆಯಾಗಿವೆ. ಅಲ್ಲಿ ಯಾವುದೇ ಮಾದಕ ದ್ರವ್ಯ ಇದ್ದ ಕುರುಹುಗಳು ಇಲ್ಲ. ನಿನ್ನೆ ಇಲ್ಲಿಗೆ ದಾಳಿ ನಡೆಸಿದ ತಂಡದ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಪಿನ್ ಗೋಪಾಲಕೃಷ್ಣ ಹೇಳಿದ್ದಾರೆ. ಒಟ್ಟು ಘಟನೆಗೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ. ೨೨೯/ ೨೦೧೨ ಕಲಂ 229/ 2012 PÀ®A Sec:  13 (a) (b) of the Unlawful Activities (Prevention Act 1967) 1860 IPC SECTION  ೧೪೩, ೧೪೭, ೧೪೮, ೪೪೭, ೪೪೮, ೩೪೧, ೩೨೩, ೩೨೪, ೫೦೪, ೫೦೬,೩೫೪,೩೯೫ R/w 149 Sec: 2 (A) (B) KPDLP  ACT.  ರಂತೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿದೆ.
ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಂ ಸ್ಟೇಯಲ್ಲಿ ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್, ಶ್ರೀದೇವಿ ಕಾಲೇಜ್ ಹಾಗೂ ರೋಶನಿ ನಿಲಯಗಳ 13 ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಸಂಜೆ 6 ಗಂಟೆಯ ಹೊತ್ತಿಗೆ ಪಾರ್ಟಿ ಆರಂಭವಾಗಿದ್ದರೆ 6:30ರಿಂದ 7ಗಂಟೆಯ ಮಧ್ಯದ ಅವಧಿಯಲ್ಲಿ ಸುಮಾರು 15ರಿಂದ 20 ಮಂದಿಯ ತಂಡ ದಾಳಿ ನಡೆಸಿ ಪಾರ್ಟಿಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದೆ ಎಂದು ಎಡಿಜಿಪಿ ವಿವರ ನೀಡಿದರು. ದಾಳಿ ನಡೆಸಿದ ತಂಡ ಹೊರ ಬಂದು ರೇವ್ ಪಾರ್ಟಿ ನಡೆಯುತ್ತಿದೆ ಎಂದು ಗುಲ್ಲೆಬ್ಬಿಸಿದುದರಿಂದ ಸ್ಥಳೀಯ ಜನರು ಗುಂಪುಗೂಡಿದ್ದರು.
ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಂ ಸ್ಟೇಯಲ್ಲಿ ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್, ಶ್ರೀದೇವಿ ಕಾಲೇಜ್ ಹಾಗೂ ರೋಶನಿ ನಿಲಯಗಳ 13 ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಸಂಜೆ 6 ಗಂಟೆಯ ಹೊತ್ತಿಗೆ ಪಾರ್ಟಿ ಆರಂಭವಾಗಿದ್ದರೆ 6:30ರಿಂದ 7ಗಂಟೆಯ ಮಧ್ಯದ ಅವಧಿಯಲ್ಲಿ ಸುಮಾರು 15ರಿಂದ 20 ಮಂದಿಯ ತಂಡ ದಾಳಿ ನಡೆಸಿ ಪಾರ್ಟಿಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದೆ ಎಂದು ಎಡಿಜಿಪಿ ವಿವರ ನೀಡಿದರು.
ದಾಳಿ ನಡೆಸಿದ ತಂಡ ಹೊರ ಬಂದು ರೇವ್ ಪಾರ್ಟಿ ನಡೆಯುತ್ತಿದೆ ಎಂದು ಗುಲ್ಲೆಬ್ಬಿಸಿದುದರಿಂದ ಸ್ಥಳೀಯ ಜನರು ಗುಂಪುಗೂಡಿದ್ದರು.ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಬಿಪಿನ್ ತಿಳಿಸಿದರು.
ಹಿಂದೂ ಜಾಗರಣ ವೇದಿಕೆಯೇ?: ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಗೆ ದಾಳಿ ನಡೆಸಿದವರು ಯಾವುದಾದರೂ ನಿರ್ದಿಷ್ಟ ಸಂಘಟನೆಗೆ ಸೇರಿದವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಪಿನ್, ಹಿಂದೂ ಜಾಗರಣ ವೇದಿಕೆಯ ಸುಭಾಷ್ ಪಡೀಲ್ ನಾಯಕತ್ವದಲ್ಲಿ ದಾಳಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ನಾನು ಸುಭಾಷ್ ಪಡೆಲ್‌ನ ವಿಚಾರಣೆ ನಡೆಸಿದ್ದೇನೆ. ತಾವು ಕೇವಲ ಪ್ರತಿಭಟನೆ ನಡೆಸುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದೆವು. ಅಸಭ್ಯವಾಗಿ ವರ್ತಿಸುವ ಉದ್ದೇಶ ಇರಲಿಲ್ಲ. ಆದರೆ ನಮ್ಮೆಂದಿಗೆ ಬಂದಿದ್ದ ಕೆಲವರು ಮೇರೆ ಮೀರಿದ್ದಾರೆ ಎಂದು ಸುಭಾಷ್ ತಿಳಿಸಿದ್ದಾರೆ. ತಂಡದಲ್ಲಿ ತಪ್ಪು ಯಾರೆ ಮಾಡಿದರೂ ಅದಕ್ಕೆ ಅಲ್ಲಿದ್ದವರೆಲರೂ ಹೊಣೆಗಾರರಾಗುತ್ತಾರೆ. ಒಟ್ಟು ಪ್ರಕರಣದ ಕೂಲಂಕುಷ ತನಿಖೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಂಗಳೂರು ನಗರದಲ್ಲಿ ಪೊಲೀಸ್ ಭದ್ರತೆಗೆ ಆದ್ಯತೆ ನೀಡಲಾಗಿದ್ದು, ಅಶಾಂತಿ ಸೃಷ್ಟಿಯಾಗದಂತೆ ಎಚ್ಚರ ವಹಿಸಲಾಗಿದೆ. 200 ಮಂದಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದವರು ತಿಳಿಸಿದರು.ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

ನಾವು ನಮ್ಮ ಕೆಲಸ ಮಾಡಿ ತೋರಿಸುತ್ತೇವೆ: ಪಾರ್ಟಿ ವೇಳೆ ದಾಳಿ ನಡೆಸಿದ ತಂಡದ ಸದಸ್ಯರು ಪಾರ್ಟಿಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಗಾಜುಗಳನ್ನು ಪುಡಿಗೈದಿದ್ದಾರೆ. ಪಾರ್ಟಿಯಲ್ಲಿದ್ದ ವಿದ್ಯಾರ್ಥಿಗಳ 10 ಸಾವಿರ ರೂ. ನಗದು, ಬಂಗಾರದ ಚೈನ್ ಹಾಗೂ ಮೊಬೈಲ್‌ಗಳನ್ನೂ ಅಪಹರಿಸಿದ್ದಾರೆ. ಈ ಪ್ರಕರಣವನ್ನು ಇಲಾಖೆ ಮಾತ್ರವಲ್ಲ ಖುದ್ದು ಮುಖ್ಯಮಂತ್ರಿಯೂ ಕೂಡ ಗಂಭೀರವಾಗಿ ಪರಿಗಣಿಸಿದ್ದು, ದಾಳಿಕೋರರ ವಿರುದ್ಧ ಕೂಡಲೇ ಕ್ರಮಕ್ಕೆ ಸೂಚಿಸಿದ್ದಾರೆ. ನಾವು ನಮ್ಮ ಕೆಲಸ ಮಾಡಿ ತೋರಿಸುತ್ತೇವೆ ಎಂದ ಬಿಪಿನ್, ಪ್ರಕರಣಕ್ಕೆ ಸಂಬಂಧಿಸಿ ಸುಭಾಷ್ ಪಡೀಲ್, ರಾಜೇಶ್, ತಾರಾನಾಥ್, ಗಣೇಶ್, ಶರತ್, ವೇಣುಗೋಪಾಲ್, ಸಂದೀಪ್ ಶೆಟ್ಟಿ, ಹಾಗೂ ತಾರಾನಾಥ್ ಎಂಬವರನ್ನು ಬಂಧಿಸಲಾಗಿದೆ.
ದಾಳಿಯಲ್ಲಿದ್ದ ಇನ್ನೂ ಏಳೆಂಟು ಜನರ ಮಾಹಿತಿ ಸಂಗ್ರಹಿಸಲಾಗಿದೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ಬಂಧಿತರ ಮೇಲೆ ಮಹಿಳೆಯರ ಮೇಲೆ ಹಲ್ಲೆ, ಡಕಾಯಿತಿ, ಅಕ್ರಮ ಪ್ರವೇಶ, ಅಶಾಂತಿ ಉಂಟು ಮಾಡಿರುವುದು, ಸೊತ್ತು ಹಾನಿ ಮಾಡಿರವುದು ಸೇರಿದಂತೆ ಐಪಿಎಸ್ ಸೆಕ್ಷನ್ 143, 145, 147, 148, 447, 448, 341, 323, 324, 354, 359, 504, 506ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಾರ್ಟಿಯ ಮೇಲುಸ್ತುವಾರಿ ವಹಿಸಿದ್ದ ಇವೆಂಟ್ ಮ್ಯಾನೇಜ್‌ರ ವಿಜಯಕುಮಾರ್ ಎಂಬವರು ದೂರು ದಾಖಲಿಸಿದ್ದಾರೆ ಎಂದು ವಿವರ ನೀಡಿದರು.

Advertisement

0 comments:

Post a Comment

 
Top