ಪ್ರಸಕ್ತ ಸಾಲಿಗಾಗಿ ಅಲ್ಪಸಂಖ್ಯಾತರ ೭ ನೇ ಮತ್ತು ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯ ಹೊಂದಿರುವ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೪೩ ಕೇಂದ್ರಗಳನ್ನು ಗುರುತಿಸಲಾಗಿದ್ದು, ಕೊಪ್ಪಳದಲ್ಲಿ ೧೭, ಕುಷ್ಟಗಿ-೦೪, ಗಂಗಾವತಿ-೦೬ ಹಾಗೂ ಯಲಬುರ್ಗದಲ್ಲಿ ೦೭ ಕೇಂದ್ರಗಳಿವೆ. ಗ್ರಾಮೀಣ ಪ್ರದೇಶದ ಕುಕನೂರಿನಲ್ಲಿ ೦೨, ಹನುಮಸಾಗರ-೦೪, ದೋಟಿಹಾಳ-೦೨, ಸಿದ್ದಾಪುರ-೧, ತಾವರಗೇರಾ-೨, ಕಲಾಲಬಂಡಿ-೧ ಮತ್ತು ವಡ್ಡರಹಟ್ಟಿಯಲ್ಲಿ-೧ ಕೇಂದ್ರ ಗುರುತಿಸಲಾಗಿದೆ. ೭ನೇ ತರಗತಿಗೆ ಬೋಧಿಸಬೇಕಾದ ಶಿಕ್ಷಕರು ಡಿ.ಇಡಿ ಪಾಸಾಗಿರಬೇಕು, ೧೦ನೇ ತರಗತಿಗೆ ಬೋಧಿಸಬೇಕಾದ ಶಿಕ್ಷಕರು ಬಿ.ಇಡಿ. ಪಾಸಾಗಿರಬೇಕು. ದಿನಂಪ್ರತಿ ಶಾಲಾ ಅವಧಿಯ ನಂತರ ಹಾಗೂ ರಜಾ ದಿನಗಳಂದು ಬೋಧಿಸಬೇಕು. ೭ನೇ ತರಗತಿ ಶಿಕ್ಷಕರಿಗೆ ಮಾಸಿಕ ಗರಿಷ್ಠ ರೂ. ೩೬೦೦, ೧೦ ನೇ ತರಗತಿ ಶಿಕ್ಷಕರಿಗೆ ಮಾಸಿಕ ಗರಿಷ್ಠ ರೂ. ೪೮೦೦ ಗಳ ಗೌರವಧನ ನೀಡಲಾಗುವುದು. ನಿರುದ್ಯೋಗಿ ಅರ್ಹ ಯುವಕ, ಯುವತಿಯರು ಹಾಗೂ ಆಸಕ್ತಿಯುಳ್ಳ ನಿವೃತ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಶಿಕ್ಷಕರು ಅರ್ಜಿ ಸಲ್ಲಿಸುವಂತಿಲ್ಲ. ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸಲು ಸಾಮರ್ಥ್ಯ ಇರುವವರು ಮಾತ್ರ ತಮ್ಮ ಸ್ವ-ವಿಳಾಸ, ಮೊಬೈಲ್ ನಂಬರ್, ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜಿಲ್ಲಾ ಬಿಸಿಎಂ ಅಧಿಕಾರಿಗಳಿಗೆ ಜು. ೨೪ ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಿಸಿಎಂ ಅಧಿಕಾರಿಗಳು, ಜಿಲ್ಲಾಡಳಿತ ಭವನ, ಕೊಪ್ಪಳ, ದೂರವಾಣಿ ಸಂ: ೦೮೫೩೯-೨೨೧೬೦೬ ಕ್ಕೆ ಸಂಪರ್ಕಿಸುವಂತೆ ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್ ತಿಳಿಸಿದ್ದಾರೆ.
0 comments:
Post a Comment