ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಸರ್ವಶಿಕ್ಷಣ ಅಭಿಯಾನದ ಸಹಯೋಗದಲ್ಲಿ ದಿನಾಂಕ ೨೦/೦೭/೨೦೧೨ ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಹ್ಯಾಟಿ ಇಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ ಹನುಮಪ್ಪ ಮೂಲಿಮನಿ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿ ಗಳಾಗಿ ಶ್ರೀಮತಿ ಭಾರತಿ ಚಿಮ್ಮಲಗಿ ಸಹ ಶಿಕ್ಷಕರು ವಹಿಸಿಕೊಂಡಿದ್ದರು. ಸಹ ಅತಿಥಿಗಳಾಗಿ ಭೀರಪ್ಪ ಕಿನ್ನೂರಿ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಶ್ರೀಮತಿ ವೀರಮ್ಮ ಪವಾರ ವಿಜ್ಞಾನ ಶಿಕ್ಷಕರು, ಯಂಕರಡ್ಡಿ ಯಡ್ರಮ್ಮನಹಳ್ಳಿ ಉಪಾಧ್ಯಕ್ಷರು ಎಸ್.ಡಿ.ಎಂ.ಸಿ ಹ್ಯಾಟಿ, ತಿಪ್ಪಣ.ಎಸ್.ಕೆ, ಆಗಮಿಸಿದ್ದರು
ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಭೀರಪ್ಪ ಕಿನ್ನೂರಿ ನೆರವೇರಿಸಿದರು ತಮ್ಮ ಉದ್ಘಾಟನಾ ಭಾಷಣದಲ್ಲಿ ಆಡಿ,ಮಾಡಿ,ನೋಡಿ ಕಲಿ, ಎಂಬ ಜಾನ್‌ಡೂಯಿ ಯವರ ಮಾತಿನಂತೆ ಈ ಕಾರ್ಯಕ್ರಮವು ಮಕ್ಕಳ ಪಾಲಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಕುಮಾರಿ ಪದ್ಮಾವತಿ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡುವುದರೊಂದಿಗೆ ಪ್ರಾರಂಭಿಸಲಾಯಿತು. ಶ್ರೀ ಮಂಜುನಾಥ.ಆರ್.ಯು.ರವರು ಸ್ವಾಗತಿಸಿದರು, ಮುತ್ತುರಾಜ ಕನ್ನೂರ ವಿಜ್ಞಾನ ಶಿಕ್ಷಕರು ನಿರೂಪಿಸಿದರು. ಕಳಕಪ.ಎಮ್. ರವರು ವಂದಿಸಿದರು
0 comments:
Post a Comment