PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ.ಜಾತಿ ಉಪಯೋಜನೆಯಡಿ ಡಾ. ಬಿ.ಆರ್. ಅಂಬೇಡ್ಕರ್ ಭವನ, ಡಾ. ಬಾಬು ಜಗಜೀವನರಾಂ ಭವನ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರ ೩.೪೦ ಕೋಟಿ ರೂ.ಗಳಿಗೆ ಮಂಜೂರಾತಿ ನೀಡಿದ್ದು, ಈ ಪೈಕಿ ಮಂಜೂರಾತಿ ಮೊತ್ತದ ಶೇ. ೫೦ ರಷ್ಟು ಅಂದರೆ ೧. ೭೦ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
  ಕೊಪ್ಪಳ ತಾಲೂಕಿನ ಕೊಪ್ಪಳ ನಗರದಲ್ಲಿ ತಲಾ ೦೧ ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದ್ದು, ಈ ಪೈಕಿ ತಲಾ ೫೦ ಲಕ್ಷ ರೂ.ಗಳಂತೆ ೦೧ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.  ಗೊಂಡಬಾಳ, ಹ್ಯಾಟಿ, ಬಹದ್ದೂರಬಂಡಿ, ಬಸಾಪುರ ಮತ್ತು ಗುಡ್ಡದಹಳ್ಳಿ ಗ್ರಾಮಗಳಲ್ಲಿ ತಲಾ ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಈ ಪೈಕಿ ತಲಾ ೦೫ ಲಕ್ಷ ರೂ.ಗಳಂತೆ ಒಟ್ಟು ೨೫ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.  ದದೇಗಲ್ ಗ್ರಾಮದ ಅಪೂರ್ಣಗೊಂಡಿರುವ ಸಮುದಾಯ ಭವನ, ಕೊಪ್ಪಳ ನಗರದದ ಆದಿಜಾಂಬವ ಕಲ್ಯಾಣಮಂಟಪ, ಬೋವಿ ಸಮುದಾಯಭವನ, ಮೋಚಿ ಸಮುದಾಯಭವನ, ಗೌರಿ ಶಂಕರ ದೇವಸ್ಥಾನ ಬಳಿ ಸಮುದಾಯಭವನ, ಕುಂಚಿಕೋರ್ ಸಮುದಾಯಭವನ, ಹುಲಿಗಿ, ಅಗಳಕೇರಾ, ಹಿರೇಸಿಂದೋಗಿ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಲಾ ೦೫ ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಅಂಬೇಡ್ಕರ್, ಬಾಬುಜಗಜೀವನರಾಂ ಭವನ ಸೇರಿದಂತೆ ಇತರೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಸಹಕರಿಸಿದ ಸಮಾಜಕಲ್ಯಾಣ ಸಚಿವ ನಾರಾಯಣಸ್ವಾಮಿ ಸೇರಿದಂತೆ ಎಲ್ಲ ಗಣ್ಯರಿಗೆ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top