PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಇತ್ತೀಚಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಹೆಮ್ಮೆಯ ಹಿರಿಯ ಲೇಖಕಿ ಶಾಂತಾದೇವಿ ಹಿರೇಮಠರಿಗೆ 'ಮಾತುಕತೆ' ಪುಸ್ತಕಕ್ಕಾಗಿ  ದಿ|| ಡಿ.ಮಾಣಿಕರಾವ್ ಸ್ಮರಣಾರ್ಥ- ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರಾದ ಪುಂಡಲೀಕ ಹಾಲಂಬಿ, ಮಾಜಿ ಕಸಾಪ ಅಧ್ಯಕ್ಷರಾದ ನಲ್ಲೂರ ಪ್ರಸಾದ ಪ್ರಶಸ್ತಿಯನ್ನು ಪ್ರದಾನ ಮಾಡಿ, ಸನ್ಮಾನಿಸಿದರು. ಹಿರಿಯ ಲೇಖಕ ಎಸ್.ಜಿ.ಸಿದ್ದಲಿಂಗಯ್ಯ , ಗೌರವ ಕಾರ್‍ಯದರ್ಶಿ ಸಂಗಮೇಶ ಬಾದವಾಡಗಿ,ಲೇಖಕಿಯರ ಸಂಘದ ಅಧ್ಯಕ್ಷಿಣಿ ಹಾಗೂ ಇತರ ಸಾಹಿತಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top