PLEASE LOGIN TO KANNADANET.COM FOR REGULAR NEWS-UPDATES


-ಹಿರೇಗೌಡರ, 
ಕೊಪ್ಪಳ : ಯುವಕರು ಟಿ.ವಿ ಚಾನಲ್ ಗಳ್ಲಿ ಬರುವಂತ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗಿ ನಮ್ಮ ಮುಗ್ದ ಹಳ್ಳಿ ಕಲೆಗಳಾದ ಬಯಲಾಟ, ಜಾನಪದಗಳು, ಮುಗ್ಗರಿಸಿ ಹೋಗಿವೆ ಬರಗಾಲದಲ್ಲಿಯೂ ಕೂಡಾ ಮಳೆಯ ಕೃಪೆಗಾಗಿ ಗುಡ್ಲಾನೂರಿನ ಹೊಳಿಬಸವೇಶ್ವರ ಬಯಲಾಟಸಂಘ ೩೯ ನೇ ಪ್ರಯೋಗದತ್ತ ಶ್ರೀ ದೇವಿ ಮಹಾತ್ಮೆ ಬಯಲಾಟ ಸಾಗಿ ಬಂದಿರುವುದು ಶ್ಲಾಘನೀಯ ಎಂದು ತಾಲೂಕ ಪಂಚಾಯತಿ  ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಮಾತನಾಡಿದರು. ಅವರು ಕೊಪ್ಪಳ ತಾಲೂಕಿನ ಗುಡ್ಲಾನೂರಿನ ಶ್ರೀ ಹೊಳಿಬಸವೇಶ್ವರ ಭಯಲಾಟ ಸಂಘ ಇವರು ಕನ್ನಡ ಮತ್ತು ಸಂಸ್ಕೃತಿ ಇವರ ಸಹಕಾರದಲ್ಲಿ ಏರ್ಫಡಿಸಿದ ಶ್ರೀ ಶಿವಪುತ್ರಪ್ಪ ಮಾಸ್ತಾರ ತಳವಾರ ಇವರ ಸಂಗೀತ ನಿರ್ದೆಶನದಲ್ಲಿ. ಶ್ರೀದೆವಿ ಮಹಾತ್ಮೆ ಅರ್ಥಾತ್ ಶುಂಭ ನಿಶುಂಬರ ವಧಾ ಎಂಬ ಬಯಲಾಟ ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಬಯಲಾಟಕಲೆ ಉಳಿಸಿ ಬೆಳೆಸುವುದರಲ್ಲಿ ಯುವಕರ ಪಾತ್ರ ಮುಖ್ಯ ಎಂದರು. ತಾಲುಕಾ ಪಂಚಾಯತ ಸದಸ್ಯ ಮುದೇಗೌಡರ ಮಾಲಿ ಪಾಟೀಲ ಮಾತನಾಡಿ ಬಯಲಾಟಗಳು ಮನೋರಂಜನೆಯ ಜೊತೆಗೆ ಭಕ್ತಿ, ನೀತಿ, ನ್ಯಾಯ, ಧರ್ಮದ ಸಂಸ್ಕಾರ ಕೊಡುವುದಲ್ಲದೆ ನಮ್ಮದೇಶದ ಜಾನಪದ ಕಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ದೊಡ್ಡನಗೌಡ ಪೋಲಿಸಪಾಟೀಲ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಮಾಸ್ತಾರ ಕಣಗಲ್ ಗ್ರಾಮ ಪಂಚಾಯತ ಉಪಾಧ್ಯಕ್ಷ ಸಿದ್ದಪ್ಪ ಉರಿಜೋಳ, ಗ್ರಾ.ಪಂ ಸದಸ್ಯರಾದ ಬಸವರಾಜ ಅಂಗಡಿ, ರಾಜ್ಯ ಯುವಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ, ಗ್ರಾಮದ ಹಿರಿಯರಾದ ಮಾದೇವಯ್ಯ ಹಿರೇಮಠ, ಕೊಟ್ರಯ್ಯ ಹಿರೇಮಠ, ಸಿದ್ದಲಿಂಗಪ್ಪ ಉಳ್ಳಾಗಡ್ಡಿ, ಪತ್ರೆಪ್ಪ ಮುಂಡಾಸದ ಅಬ್ದುಲ್ ಕಲಾಂ ಯುವಕ ಸಂಘದ ಅಧ್ಯಕ್ಷ ಖಾಸಿಂ ಸಾಬ್ ಕೊಲಕಾರ,  ಬಡಕಪ್ಪ ಮಾಸ್ತಾರ ಬಳ್ಳಾರಿ, ಈರಪ್ಪ ಮಾಸ್ತಾರ ಹ್ಯಾಟಿ, ಗವಿಸಿದ್ದಪ್ಪ ಅಂಗಡಿ, ಇತರರು ವೇಧಿಕೆಯಲ್ಲಿ  ಉಪಸ್ಥಿತರಿದ್ದರು. ಬಸವರಾಜ ಉಳ್ಳಾಗಡ್ಡಿ ಸ್ವಾಗತಿಸಿ ವಂಧನಾರ್ಪಣೆಯನ್ನು ಸಲ್ಲಿಸಿದರು.   

Advertisement

0 comments:

Post a Comment

 
Top