ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಹಿತ್ಯಿಕ ಚಟುವಟಿಕೆಗಳ ಉದ್ದೇಶದಿಂದ ಕೊಪ್ಪಳದಲ್ಲಿ ತಿರುಳ್ಗನ್ನಡ ಕ್ರಿಯಾ ಸಮಿತಿಯ ಕೇಂದ್ರ ಘಟಕವನ್ನು ಬರುವ ಜುಲೈ ೨೨ ರಂದು ಉದ್ಘಾಟಿಸಲಾಗುವುದು. ಇದೇ ಸಂದರ್ಭದಲ್ಲಿ ಧಾರವಾಡದ ಆಟ ಮಾಟ ತಂಡದಿಂದ ಶ್ರೀ ಕೃಷ್ಣ ಸಂಧಾನ ಅರ್ಥಾತ್.. ಆರ್ಥಾತ್.. ಆರ್ಥಾತ್ ಎಂಬ ಹಾಸ್ಯ ನಾಟಕವನ್ನು ಪ್ರರ್ದಶಿಸಲಾಗುವುದು ಎಂದು ತಿರುಳ್ಗನ್ನಡ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ರಾಜಶೇಖರ ಅಂಗಡಿ ತಿಳಿಸಿದ್ದಾರೆ.
ಜುಲೈ ೨೨ರಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಸಂಜೆ ೦೬.೦೫ಕ್ಕೆ ಸಮಿತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್ ಜಿ ಸಿದ್ರಾಮಯ್ಯ ಉದ್ಘಾಟಿಸಲಿದ್ದಾರೆ. ನಾಟಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಆಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಪ್ರೊ. ಕೃಷ್ಣಮೂರ್ತಿ ಬಿಳಿಗಿರಿ, ಗಂಗಾವತಿ ಸಮಾಜ ಸೇವಕರಾದ ವಿರುಪಾಕ್ಷಪ್ಪ ಸಿಂಗನಾಳ, ಕೊಪ್ಪಳದ ಸಮಾಜ ಸೇವಕರಾದ ಕೆ .ಎಂ. ಸೈಯದ್, ಕೊಪ್ಪಳ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಶಿಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಭಾಗ್ಯ, ಕುಕನೂರಿನ ಕೆ. ಆರ್ .ಕುಲಕರ್ಣಿ, ಉದ್ದಿಮೆದಾರ ಸತ್ಯನಾರಾಯಣಪ್ಪ ಹರಪನಹಳ್ಳಿ, ಶಿಕ್ಷಕರಾದ ಶಿವಲಿಂಗಪ್ಪ್ಪ ಪಟ್ಟೇದ ಮತ್ತು ರಾಮಣ್ಣ ತಳವಾರ ಆಗಮಿಸಲಿದ್ದಾರೆ.
ತಿರುಳ್ಗನ್ನಡ ಕ್ರಿಯಾ ಸಮಿತಿಯು ಜಿಲ್ಲೆ ಮತ್ತು ತಾಲೂಕಾ ಘಟಕಗಳನ್ನು ಸ್ಥಾಪಿಸಲಾಗಿದೆ, ಇದೇ ಸಂದರ್ಭದಲ್ಲಿ ಮಹಿಳಾ ಘಟಕವು ಆಸ್ತಿತ್ವಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಕ್ರಿಯಾ ಸಮಿತಿಯಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಅಪರೂಪದ ನಾಟಕ;
ವರ್ತಮಾನದ ರಾಜಕೀಯ ಪರಿಸ್ಥಿತಿಯನ್ನು ವಿಡಂಬಿಸುವ ಶ್ರೀಕೃಷ್ಣ ಸಂಧಾನ ಅರ್ಥಾತ್.. ಅರ್ಥಾತ್.. ಅರ್ಥಾತ್.. ಎಂಬ ನಾಟಕವನ್ನು ಧಾರವಾಡದ ಆಟ ಮಾಟ ಸಾಂಸ್ಕೃತಿ ಪಥ ತಂಡದವರು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಿದ್ದಾರೆ.ಈ ಅಪರೂಪ ನಾಟಕಕ್ಕೆ ಉಚಿತ ಪ್ರವೇಶಾವಕಾಶವಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.
0 comments:
Post a Comment