PLEASE LOGIN TO KANNADANET.COM FOR REGULAR NEWS-UPDATES


 ಏಕರೂಪ ಸಮಾನ ಶಿಕ್ಷಣ ನೀತಿಗೆ ಒತ್ತಾಯಿಸಿ
ದಿ. ೨೧ ರಂದು ಜಿಲ್ಲಾಡಳಿತದ ಭವನದ ಮುಂದೆ ಧರಣಿ ಸತ್ಯಾಗ್ರಹ 

ಕೊಪ್ಪಳ : ರಾಜ್ಯ ಸರಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೩೪೧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬ ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಿರುವುರಿಂದ ಕನ್ನಡ ಭಾಷೆಯ ಮೇಲೆ ಆದ ಪರಿಣಾಮ ಈಗಾಗಲೆ ಬೀರಿರುವದರಿಂದ ರಾಜ್ಯ, ಜಿಲ್ಲೆ, ಹಾಗೂ ತಾಲೂಕ ಕ.ಸಾ.ಪ. ವತಿಯಿಂದ ದಿನಾಂಕ ೨೧ ರಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ಇಂದು ಕ.ಸಾ.ಪ ವತಿಯಿಂದ ಹಮ್ಮಿಕೊಳ್ಳಲಾಗಿದೆ, ಇಂದು  ನಡೆಯುವ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು  ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ವೀರಣ್ಣ ನಿಂಗೋಜಿ ವಹಿಸಿ ಮಾತನಾಡುತ್ತಾ ಧರಣಿ ಸತ್ಯಾಗ್ರಹವು ಜಿಲ್ಲಾ ಆಡಳಿತ ಭವನದ ಮುಂಬಾಗದಲ್ಲಿ ಜಿಲ್ಲೆಯ ಕ.ಸಾ.ಪ. ಆಜೀವ ಸದಸ್ಯರು, ಬುದ್ದಿ ಜೀವಿಗಳು, ಕನ್ನಡ ಪರ ಸಂಘ ಸಂಸ್ಥೆಗಳು, ಸಾಹಿತಿಗಳು, ಕನ್ನಡ ಅಭಿಮಾನಿಗಳು ಧರಣಿಯಲ್ಲಿ ಪಾಲ್ಗೊಂಡು ಏಕರೂ ಸಮಾನ ಶಿಕ್ಷಣ ನೀತಿಯನ್ನು  ಜಾರಿಗೊಳಿಸವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ  ಕರೆನಿಡಿದರು.  
ತಾಲೂಕಾ ಕ.ಸಾ.ಪ. ಅಧ್ಯಕ್ಷೆ ಸಾವಿತ್ರಿ ಮುಜುಮದಾರ, ಗೌರವ ಕಾರ್ಯದರ್ಶಿಗಳಾದ ಹುಸೇನ ಪಾಷಾ, ಗೌರವ ಕೋಶಾಧ್ಯಕ್ಷರಾದ ಮೈಲಾರಗೌಡ ಹೊಸಮನಿ, ಜಿಲ್ಲಾ ಕ.ಸಾ.ಪ. ಗೌರವ ಸಲಹೆಗಾರರಾದ ಬಸಣ್ಣ ಸಾಹುಕಾರ, ಸಂಜೀವ ಕರಡಕಲ್, ಟಿ.ಜಿ.ಚಂದ್ರುಶೇಖರ, ದೇವಪ್ಪ ಆರೇರ, ಮಹೇಶ ಟಂಕಸಾಲಿ, ಹೆಚ್.ಪಿ.ಭೀಮನಗೌಡ, ಹಾಗೂ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಅಭಿಮಾನಿಗಳು ಸದರಿ ಸತ್ಯಾಗ್ರಹಕ್ಕೆ ಪಾಲ್ಗೊಳಲು ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಅಕ್ಬರ.ಸಿ.ಕಾಲಿಮಿರ್ಚಿ ಹಾಗೂ ಶಿಕಾ ಬಡಿಗೇರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
 

Advertisement

0 comments:

Post a Comment

 
Top