PLEASE LOGIN TO KANNADANET.COM FOR REGULAR NEWS-UPDATESಕೊಪ್ಪಳ : ದಿಟ್ಟ ಬರಹಗಾರ,ನಿಷ್ಠುರ ಹೋರಾಟಗಾರ ಲಿಂಗಣ್ಣ ಸತ್ಯಂಪೇಟೆಯವರ ನಿಧನಕ್ಕೆ ಕೊಪ್ಪಳದ ತಿರುಳ್ಗನ್ನಡ ಕ್ರಿಯಾಸಮಿತಿ ಹಾಗೂ ಕವಿಸಮೂಹ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರು ಮಾತನಾಡಿ ಲಿಂಗಣ್ಣನವರು ಪ್ರಖರ ವೈಚಾರಿಕ ಪ್ರಜ್ಞೆಯ ಪತ್ರಕರ್ತರಾಗಿದ್ದರು,ಬಸವಮಾರ್ಗದ ಮೂಲಕ ತಮ್ಮ ಬರಹಗಳ ಮೂಲಕ ವೈಚಾರಿಕತೆಯನ್ನು ಹರಡಿದವರು ಎಂದು ಗುಣಗಾನ ಮಾಡಿದರು.  ವಿಠ್ಠಪ್ಪ ಗೋರಂಟ್ಲಿಯವರು ಮಾತನಾಡಿ ದುರಂತ ಸಾವಿಗೀಡಾದ ಲಿಂಗಣ್ಣ ಸತ್ಯಂಪೇಟೆ ಹೈದ್ರಾಬಾದ್ ಕರ್ನಾಟಕದ ದೊಡ್ಡ ಧ್ವನಿಯಾಗಿದ್ದರು. ಲಂಕೇಶ್ ಪತ್ರಿಕೆಯಲ್ಲಿ ನಂತರ ತಮ್ಮದೇ ಪತ್ರಿಕೆಯಲ್ಲಿ ಬರೆಯುತ್ತಿದ್ದ ದಿಟ್ಟ ಬರಹಗಳ ಮೂಲಕ ನಾಡಿನಾದ್ಯಂತ ಹೆಸರು ಮಾಡಿದ್ದರು. ನೇರ ನಿಷ್ಠುರ, ಯಾವುದೇ ಮುಲಾಜಿಲ್ಲದೇ ಮಾತನಾಡುತ್ತಿದ್ದ ಲಿಂಗಣ್ಣನವರು ಈ ರೀತಿ ಸಾವನ್ನಪ್ಪಿದ್ದು ದುರಂತಮಯ ಸಂಗತಿ. ಸ್ವಾಮಿಗಳ ಡಾಂಭಿಕತೆಯನ್ನು , ಯಂತ್ರ,ತಂತ್ರಗಳನ್ನು ವಿರೋಧಿಸುತ್ತಿದ್ದ ಸತ್ಯಂಪೇಟೆಯವರ ಸಾವು ನಿಜಕ್ಕೂ ಸಮಾಜಕ್ಕೆ ದೊಡ್ಡ ನಷ್ಟ ಎಂದು ಅಭಿಪ್ರಾಯಪಟ್ಟರು.  ಎ.ಪಿ.ಅಂಗಡಿ, ಶಾಂತಾದೇವಿ ಹಿರೇಮಠ,ಶರಣಪ್ಪ ಕೊತಬಾಳ, ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ ಲಿಂಗಣ್ಣ ಸತ್ಯಂಪೇಟೆಯವರ ಬದುಕು,ಬರಹವನ್ನು ಸ್ಮರಿಸಿದರು. ನಂತರ  ಮೃತರ ಗೌರವಾರ್ಥ  ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಕಾರ್‍ಯಕ್ರಮದಲ್ಲಿ ಯಶವಂತ್ ಮೇತ್ರಿ, ಶಿವಪ್ಪ,ಸುದೀಂದ್ರ ರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ವಂದಿಸಿದರು. 
ಲಿಂಗಣ್ಣ ಸತ್ಯಂಪೇಟೆಯವರ ನಿಧನಕ್ಕೆ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪ್ರಮೋದ್ ತುರ್ವಿಹಾಳ, ಅಲ್ಲಾಗಿರಿರಾಜ್ ,ಎನ್.ಜಡೆಯಪ್ಪ, ಶಿವಪ್ರಸಾದ ಹಾದಿಮನಿ,ಬಸವರಾಜ ಸಂಕನಗೌಡರ ಸೇರಿದಂತೆ ಸಕಲ ಕವಿಸಮೂಹ ಬಳಗ  ಸಂತಾಪ ವ್ಯಕ್ತಪಡಿಸಿದೆ. 

Advertisement

0 comments:

Post a Comment

 
Top