ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರಕಾರ ಚುನಾವಣೆ ಪೂರ್ವ ನೀಡಿರುವ ಭರವಸೆಗಳನ್ನು ಈಡೇರಿಸದೆ ಜನರಿಗೆ ವಂಚನೆ ಮಾಡಿರುವದರ ಜೊತೆಗೆ, ರಾಜ್ಯದಲ್ಲಿರುವ ಕೋಮುವಾದಿ ಶಕ್ತಿಗಳಿಗೆ ಪ್ರಚೋದನೆ ನೀಡಿ. ಅನಗತ್ಯ ಗಲಭೆಗಳಿಗೆ ಕಾರಣವಾಗುತ್ತಿದೆ.
ಮಂಗಳೂರ ನಗರದ ಪಡೀಲ್ ಬಳಿಯ ಬಡಿಲ್ ಗುಡ್ಡೇಯ ಮಾರನಿಂಗ್ ಮಿಷ್ಟ್ ಸ್ಟೇ-ಹೋಮ್ ಇಲ್ಲಿ ಯುವಕ, ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹುಟ್ಟುಹಬ್ಬ ಆಚರಿಸುವ ಸಂದರ್ಭದಲ್ಲಿ ಹಿಂದೂಜಾಗರಣವೇಧಿಕೆಯ ಕಾರ್ಯಕರ್ತರು ಅವರುಗಳ ಮೆಲೆ ದಾಳಿ ಮಾಡಿ ಅದರಲ್ಲೂ ಯುವತಿಯರ ಮೇಲೆ ದಾಳಿ ಮಾಡಿ ಹಿಗ್ಗಾ-ಮುಗ್ಗಾ ಬಡೆದಿರುವುದಿಲ್ಲದೆ. ಅವರುಗಳ ಬಟ್ಟೆಗಳನ್ನು ಹರಿದುಹಾಕಿ, ಅವರುಗಳನ್ನು ಏಳೆದಾಡಿ ಅವರಲ್ಲಿದ್ದ ಮೊಬೈಲ್ ಚಿನ್ನದ ವಸ್ತುಗಳನ್ನು ಕದ್ದಿದ್ದಾರೆ. ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ನಂತರ ಇಂತಹ ಪ್ರಕರಣಗಳು ಸಾಕಷ್ಟು ನಡೆದಿದ್ದು, ಈ ಕುರಿತಂತೆ ರಾಜ್ಯದಲ್ಲಿ ಪ್ರಗತಿಪರ ಸಂಘಟನೆಗಳು, ಜನಪರ ಸಂಘಟನೆಗಳು ಸರಕಾರದ ಕೋಮುವಾದಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿ, ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು ಭ್ರಷ್ಟ ಹಾಗೂ ಕೋಮುವಾದಿ ಬಿ.ಜೆ.ಪಿ. ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವದು ನಾಚಿಕೆಗೇಡಿನ ಸಂಗತಿ.
ರಾಜ್ಯದ ಜನತೆಗೆ ಹತ್ತು-ಹಲವಾರು ಸಮಸ್ಯೆಗಳಿದ್ದು, ಬರಪೀಡಿತ ಹಳ್ಳಿಗಳಲ್ಲಿನ ಜನತೆಯೂ ಕೆಲಸವನ್ನು ಹುಡುಕಿಕೊಂಡು ಗುಳೆ ಹೊರಟಂತ ಸಂದರ್ಭದಲ್ಲಿ ಜನರಿಗಾಗಿ, ಜಾನುವಾರುಗಳಿಗಾಗಿ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದ ಸರಕಾರವು ಕೋಮುವಾದಿ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಜನತೆಯ ನೆಮ್ಮದಿಯನ್ನು ಕೆಡಿಸುತ್ತಿರುವದು ಸರಿಯಲ್ಲ. ಕಾರಣ ರಾಜ್ಯಪಾಲರು ಕೋಮುವಾದಿಗಳಿಗೆ ಕುಮ್ಮಕ್ಕು ನೀಡುವ ಅಧಿಕಾರದಲ್ಲಿರುವ ಭ್ರಷ್ಟ ಬಿ.ಜೆ.ಪಿ. ಸರಕಾರವನ್ನು ವಜಾಗೊಳಿಸುವದರ ಜೊತೆಗೆ ರಾಜ್ಯದಲ್ಲಿ ತಲೆಎತ್ತಿ ನಿಂತಿರುವ, ಥೇಟ್ ರೌಡಿಗಳಂತೆ ವರ್ತಿಸುತ್ತಿರುವ ಕೋಮುವಾದಿ ಸಂಘಟನೆಗಳ, ಫ್ಯಾಸಿಸ್ಟ ಧೊರಣೆಯ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರ ವಿರುದ್ದ ಕಠಿಣ ಕ್ರಮಕೈಗೊಂಡು ರಾಜ್ಯದ ಜನತೆಯ ನೆಮ್ಮದಿಯನ್ನು ಕಾಪಾಡುವಂತೆ ಸಂಘಟನೆಗಳು ಒತ್ತಾಯಿಸುತ್ತವೆ.
ತಹಿಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ನಂತರ ಹಳೆ ಜಿಲ್ಲಾಧಿಕಾರಿ ಕಛೇರಿ ಹತ್ತಿರ ಸರ್ಕಲ್‌ನಲ್ಲಿ ಮುಖ್ಯಮಂತ್ರಿ ಜಗದೀಶ ಶಟ್ಟರ್ ಇವರ ಪ್ರತಿಕೃತಿ ದಹನ ಮಾಡಿದರು.
ನೇತೃತ್ವ ವನ್ನು ಎಸ್.ಎ.ಗಫಾರ್ ಜಿಲ್ಲಾ ಕಾರ್ಯದರ್ಶಿ , ಡಾ|| ಕೆ.ಎಸ್. ಜನಾರ್ಧನ, ಬಸವರಾಜ ಶೀಲವಂತರ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ನನ್ನುಸಾಬ ನೀಲಿ, ಶಿವಪ್ಪ ಹಡಪದ, ರಾಮಣ್ಣ ಕಂಬಾರ ಹಲಗೇರಿ, ಮಮತಾಜ ಬೇಗಂ ಕಂದಗಲ್ಲ, ಶೈಲಜಾ ಶಶಿಮಠ, ಜಿಲ್ಲಾ ಬಚಾವೂ ಆಂದೋಲನದ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಶೋಭಾ, ಮರ್ದಾನ ಗೂದಿ. ಸಂಗಮ್ಮ
0 comments:
Post a Comment