PLEASE LOGIN TO KANNADANET.COM FOR REGULAR NEWS-UPDATES


 - ಸಂಗಮೇಶ ಬಾದವಾಡಗಿ 
ಕೊಪ್ಪಳ : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರ ಆಸ್ತಿ ಆಗಿರುವದರಿಂದ ಜಿಲ್ಲೆಯ ಸಮಸ್ತ ಆಜೀವ ಸದಸ್ಯರು ಹಾಗೂ ಕನ್ನಡ ಅಭಿಮಾನಿಗಳು ಪಾಲ್ಗೋಂಡು ಕ.ಸಾ.ಪ.ಕಾರ್ಯಕ್ರಮಗಳನ್ನು ಯಶಸ್ವಿಗೋಳಿಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸಂಗಮೇಶ ಬಾದವಾಡಗಿ ಕರೆನಿಡಿದರು 
ಸ್ಥಳೀಯ ಜ.ಚ.ನಿ. ಭವನದಲ್ಲಿ ಆಯೋಜಿಸಿದ ಜಿಲ್ಲಾ ಕ.ಸಾ.ಪ ೨೦೧೨-೧೫ ರ ಕಾರ್ಯಚಟುವಟಿಕೆಗಳ ಹಾಗೂ ಏಕರೂಪ ಸಮಾನ ಶಿಕ್ಷಣ ನೀತಿಯ ವಿಚಾರ ಸಂಕಿರಣವನ್ನು  ಉದ್ಘಾಟಿಸಿ ಮಾತನಾಡಿದ ಅವರು ಶತಮಾನೋತ್ಸವ ಅಂಚಿನಲ್ಲಿರುವ ಕ.ಸಾ.ಪ. ಸಂಸ್ಥೆ ಜನಪರ ಹೋರಾಟಗಳಿಗೆ ಆಧ್ಯತೆ ನೀಡುವುದರ ಜೊತೆಗೆ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಮುನ್ನಡೆಸಿಕೊಂಡು  ಹೋಗಲು ಕೇಂದ್ರ ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು ಯೋಜನೆಯನ್ನು ಈಗಾಗಲೇ ರೂಪಿಸಿ ಸಂಸ್ಥೆಯನ್ನು ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬರಲು ಶ್ರಮಿಸುತ್ತಿದ್ದಾರೆ. ಸಭೆಯಲ್ಲಿ ಕೆಲವರು ಗೈರು ಹಾಜರ ಆದುದ್ದನ್ನು ಗಮನಿಸಿ ಜಿಲ್ಲೆಯಲ್ಲಿ ಹಾಲಿ ಹಾಗೂ ಮಾಜಿ ಕ.ಸಾ.ಪ.ಪದಾಧಿಕಾರಿಗಳು ಒಟ್ಟೂ ಗೂಡಿ ಕ.ಸಾ.ಪ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೇನಿಡಿದರು. 
ಗವಿಮಠದ ಶ್ರೀ ಗವಿಸಿದ್ದೇಶ್ವರ  ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಸಾಹಿತ್ಯದ ಮೂಲಕ ಸ್ರಷ್ಟಿ ಚಿಂತನೆ ಗೈದು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಸಾಹಿತಿಗಳು ಚಿಂತಿಸಬೇಕಾಗಿದೆ ಎಂದರು. ಅಕ್ಬರ್ ಕಾಲಿಮಿರ್ಚಿಯವರು ಕವನಗಳು ಶರೀಫ ಸಾಹೇಬರನ್ನು ನೆನಪಿಸುತ್ತವೆ. 
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಾನಂದ ಕಡಪಟ್ಟಿ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾದ್ಯಾಪಕ ಡಾ. ಚಂದ್ರ ಪೂಜಾರಿಯವರು ಏಕ ರೂಪ ಸಮಾನ ಶಿಕ್ಷಣ ನೀತಿಯ ಬಗ್ಗೆ  ಮಾತನಾಡಿದರು. 
ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆಯನ್ನು ವಹಿಸಿದ್ದರು. 
ಚನ್ನಯ್ಯ ಹಿರೇಮಠ ಹಾಗೂ ಭಜಂತ್ರಿಯವರು ನಾಡಗೀತೆ ಹಾಡುವುದರ ಜೊತೆಗೆ ಸಂಗೀತ ಕಾರ್ಯಕ್ರಮ ನೆಡೆಸಿಕೊಟ್ಟರು. ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಶಿವಾನಂದ ಮೇಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಕಾಲಿಮಿರ್ಚಿ ಸ್ವಾಗತಿಸಿದರು, ಗೌರವ ಕೋಶಾಧ್ಯಕ್ಷರಾದ ಆರ್.ಎಸ್.ಸರಗಣಾಚಾರ ವಂದಿಸಿದರು. 

Advertisement

0 comments:

Post a Comment

 
Top