PLEASE LOGIN TO KANNADANET.COM FOR REGULAR NEWS-UPDATES


 : ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಪ್ರಶಸ್ತಿ ದತ್ತಿನಿಧಿಯಡಿ ಜೈನಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಗ್ರಂಥವೊಂದಕ್ಕೆ ೬೦೦೦ ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಸ್ಪರ್ಧೆಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
  ೨೦೧೦ ಮತ್ತು ೨೦೧೧ ನೇ ವರ್ಷದಲ್ಲಿ ಕನ್ನಡದಲ್ಲಿ ಪ್ರಕಟವಾದ ಜೈನಧರ್ಮದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗೆ ಸಂಬಂಧಿಸಿದ ಪುಸ್ತಕವನ್ನು ಕಳುಹಿಸಬಹುದು.  ಪ್ರತಿ ಪ್ರವೇಶಕ್ಕೆ ಮೂರು ಪುಸ್ತಕಗಳನ್ನು ಕಳುಹಿಸಬೇಕಾಗಿದ್ದು, ಯಾರು ಬೇಕಾದರೂ ಸ್ಪರ್ಧಿಸಬಹುದು.  ಜೈನಧರ್ಮದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸಂಶೋಧನಾ ಗ್ರಂಥಗಳು, ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಅನುಸಾರವಾಗಿ ಸಂಪಾದಿಸಿದ ಪ್ರಾಚೀನ ಗ್ರಂಥಗಳು, ಇತರ ಭಾಷೆಗಳಿಂದ ಕನ್ನಡ ಅನುವಾದಗೊಂಡ ಗ್ರಂಥಗಳು, ಶಾಸ್ತ್ರ ಗ್ರಂಥಗಳಿಗೆ ಬರೆದ ಟೀಕಾ ಗ್ರಂಥಗಳು ಹಆಘೂ ಜೈನ ಜಾನಪದಾಧಿಗಮಕಕ್ಕೆ ಸಂಬಂಧಿಸಿದ ಗ್ರಂಥಗಳು ಪ್ರಶಸ್ತಿಯ ಪರಿಶೀಲನೆಗೆ ಅರ್ಹವಾಗಿರುತ್ತವೆ. ಈ ರೀತಿ ಕಳುಹಿಸಲಾದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಸ್ಪರ್ಧೆಗೆ ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮ ಇವರಿಗೆ ಜುಲೈ ೨೦ ರ ಒಳಗಾಗಿ ಕಳುಹಿಸಿಕೊಡಬೇಕು.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೦-೨೬೬೨೩೫೮೪ ಕ್ಕೆ ಸಂಪರ್ಕಿಸಬಹುದಾಗಿದೆ  

Advertisement

0 comments:

Post a Comment

 
Top