ಜಿಲ್ಲಾ ಕಾರ್ಯಾಧ್ಯಕ್ಷ ನಜೀರ್‌ಸಾಬ್ ಮೂಲಿಮನಿ ಮಾತನಾಡಿ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಜಿಲ್ಲಾಧಿಕಾರಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕೆ ಗೇಡಿಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಕೆಲವೇ ಗೋಶಾಲೆಗಳಿದ್ದು, ಸಂಖ್ಯೆಗನುಗುಣವಾಗಿ ಇನ್ನೂ ಹೆಚ್ಚಿನ ಗೋಶಾಲೆಗಳು ಮಾಡಲು ರೈತರ ಬೇಡಿಕೆ ಇದೆ ಅಂತಹದರಲ್ಲಿ ದನಗಳು ೫ ಕೇ.ಜಿ. ಗಿಂತ ಹೆಚ್ಚಿಗೆ ಮೇವು ತಿನ್ನುತ್ತಿರುವುದರಿಂದ ಅನುದಾನದ ಬಳಕೆಗೆ ಲೆಕ್ಕ ಸಿಗುತ್ತಿಲ್ಲ. ಆದ್ದರಿಂದ ಮೇವು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂಬ ಹೇಳಿಕೆ ಖಂಡನಾರ್ಹವಾಗಿದೆ. ಇಂತಹ ಜಿಲ್ಲಾಧಿಕಾರಿಗಳು ಇಂತಹ ಪರಿಸ್ಥಿತಿಯಲ್ಲಿ ಈ ಜವಾಬ್ದಾರಿಯುತ ಸ್ಥಾನದಲ್ಲಿರುವುದು ಸೂಕ್ತವಲ್ಲ ಎಂದರು.
ಪ್ರಮುಖ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ರೈತ ಮುಖಂಡ ಭೀಮಸೇನ ಕಲಕೇರಿ, ಜಿಲ್ಲಾ ಉಪಾಧ್ಯಕ್ಷ ಶರಣಯ್ಯ ಮುಳ್ಳೂರಮಠ, ಫಕೀರಪ್ಪ ಗೋಂದಿ ಹೊಸಳ್ಳಿ, ಗೌರವಾಧ್ಯಕ್ಷ ತ್ರಿಲಿಂಗಪ್ಪ ಬೆಟಗೇರಿ, ಹಸಿರು ಸೇನೆ ಸಂಚಾಲಕ ನಿಂಗನಗೌಡ ಗ್ಯಾರಂಟಿ, ಶಿವಣ್ಣ ಇಂದರಗಿ, ಕಾಳಪ್ಪ ರಾಠೋಡ್ ಕನಕಪ್ಪ ಪೂಜಾರ್, ಬಸವರಾಜ ಜಬ್ಬಲಗುಡ್ಡ, ಯಮುನವ್ವ ನದಾಫ್, ಕರಿಯಮ್ಮ ಹೊಳೆಯಾಚೆ ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment