PLEASE LOGIN TO KANNADANET.COM FOR REGULAR NEWS-UPDATES


  4 ದಿನಗಳ  ಎಸ್.ಎಫ್.ಐ    ರಾಜ್ಯ ಮಟ್ಟದ ಅಧ್ಯಯನ ಶಿಬಿರ
ಕೊಪ್ಪಳ ನಗರದಲ್ಲಿ ಎಸ್.ಎಫ್.ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರ ನಾಳೆಯಿಂದ (೧೬.೦೬.೧೨-೧೯.೦೬.೧೨) ನಾಲ್ಕು ದಿನಗಳ ಕಾಲ ನಗರದ ಪಾನಘಂಟಿ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ.
ಅಧ್ಯಯನ ಶಿಬಿರದ ಭಾಗವಾಗಿ ನಾಳೆ ೧೬.೦೬.೧೨) ಬೆಳಗ್ಗೆ ೧೧.೩೦ ಗಂಟೆಗೆ ಶಿಕ್ಷಣ ಹಕ್ಕು ಕಾಯ್ದೆ ಮತ್ತು ಪ್ರಾದೇಶಿಕ ಅಸಮಾನತೆ-ಕಲಂ ೩೭೧-ಅಭಿವೃದಿ ಎಂಬ ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಸಂಕಿರಣದ ಉದ್ಘಾಟನೆಯನ್ನು ಎಸ್.ಎಫ್.ಐ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ|| ವಿ. ಶಿವದಾಸನ್ ಮಾಡಲಿದ್ದಾರೆ. ವಿಷಯ ಮಂಡನೆಯನ್ನು ಹಂಪಿ ವಿ.ವಿ.ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ|| ಹೆಚ್.ಡಿ. ಪ್ರಶಾಂತ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ. ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ್. ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಎಸ್.ಎಫ್.ಐ ರಾಜ್ಯ ಅಧ್ಯಕ್ಷ ಅನಂತ್ನಾಯ್ಕ್.ಎನ್ ವಹಿಸಿ ಕೊಳ್ಳಲಿದ್ದಾರೆ.
ಅಂದು ಸಂಜೆ ೬.೩೦ಕ್ಕೆ ಮಂಗಳೂರಿನ ಖ್ಯಾತ ವಿಚಾರವಾದಿಗಳಾದ ಡಾ|| ನರೇಂದ್ರ ನಾಯಕ್ ರವರಿಂದ ವೈಜ್ಞಾನಿಕಮನೋಧರ್ಮ-ಪವಾಡಬಯಲು ಕಾರ್ಯಕ್ರಮ ನಡೆಯಲಿದೆ.
ಕೊಪ್ಪಳ ವಿಶೇಷ : ಕರ್ನಾಟಕ ರಾಜ್ಯದಲ್ಲಿ ಎಸ್.ಎಫ್.ಐ ನ ಬಲಿಷ್ಟ ಜಿಲ್ಲೆಗಳಲ್ಲಿ ಕೊಪ್ಪಳವೂ ಒಂದು. ಜಿಲ್ಲೆಯಲ್ಲಿ ಡೊನೇಶನ್ ಹಾವಳಿ. ಕಾಲೇಜುಗಳಲ್ಲಿ ಬ್ರಷ್ಟಾಚಾರ ಬಯಲು ಮಾಡಿದ್ದು, ಹಾಸ್ಟೇಲ್ ಗಳಿಗೆ ಗುಣ ಮಟ್ಟದ ಆಹಾರ ಮತ್ತು ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕೊಡಿಸುವಲ್ಲಿ ಎಸ್.ಎಫ್.ಐ ಪ್ರಮುಖ ಪಾತ್ರವಹಿಸಿದೆ. ಸರಕಾರಿ ಶಾಲಾ  ಕಾಲೇಜುಗಳಿಗೆ ಮೂಲ ಸೌಲಭ್ಯ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶಿಕ್ಷಣ ವಿರೋಧಿ ನೀತಿಗಳ ವಿರುದ್ದ ಜಿಲ್ಲೆಯಲ್ಲಿ ಪ್ರಭಲ ಹೋರಾಟ ನಡೆಸಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಕಾರ್ಯಕರ್ತರಿಗೆ ಹೊಸ ಚೈತನ್ಯ ತಂದಿದೆ. ಸಂಘಟನೆ ಬಲಿಷ್ಟಗೊಳ್ಳುವಲ್ಲಿ ಕೊಪ್ಪಳದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಸಹಕಾರಿಯಾಗಲಿದೆ ಎಂದು ಜಿಲ್ಲಾಧ್ಯಕ್ಷ  ಗುರುರಾಜ್ ದೇಸಾಯಿ ತಿಳಿಸಿದ್ದಾರೆ

Advertisement

0 comments:

Post a Comment

 
Top