ಸಾರ್ವಜನಿಕರಿಗೆ ಸೂಚನೆ
ಸಾಮಾಜಿಕ ಆರ್ಥಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಇಚ್ಛೆಪಡದ ಕುಟುಂಬಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಎರಡು ಹಂತಗಳಲ್ಲಿ ತೆಗೆದುಕೊಂಡಿರುವ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-೨೦೧೧ ಮುಕ್ತಾಯದ ಹಂತ ತಲುಪಿದೆ. ಈಗ ಮೇಲ್ವಿಚಾರಕರಿಂದ ಮರು ಪರಿಶೀಲನಾ ಕಾರ್ಯ ನಡೆದಿದೆ. ಈ ಹಂತದಲ್ಲಿ ಗಣತಿ ವೇಳೆ ಉಪಸ್ಥಿತರಿಲ್ಲದ ಕುಟುಂಬದ ಮನೆಗಳು / ಬೀಗ ಹಾಕಿದ ಮನೆಗಳು/ ದೂರದ ಪ್ರದೇಶಘಳಿಗೆ ವಲಸೆ ಹೋಗಿದ್ದ ಕುಟುಂಬಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಗಣತಿ ಅಂಕಿ ಅಂಶಗಳ ಕರಡು ಪಟ್ಟಿ ಪ್ರಕಟಣೆಯನ್ನು ಜುಲೈ ೦೧ ರ ನಂತರ ಮಾಡಲಾಗುವುದು. ಸಾಮಾಜಿಕ ಆರ್ಥಿಕ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಛೆಪಡದ ಕುಟುಂಬಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಅರ್ಜಿ ನಮೂನೆಗಳನ್ನು ಜುಲೈ ೦೧ ರ ಒಳಗಾಗಿ ಆಯಾ ತಹಸಿಲ್ದಾರರ ಕಚೇರಿ, ನಗರ ಪ್ರದೇಶದವರು ನಗರಸಭೆ ಪೌರಾಯುಕ್ತರು, ಪಟ್ಟಣ ಪ್ರದೇಶದವರು ಆಯಾ ಪುರಸಭೆ/ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳ ಕಚೇರಿ ಯಲ್ಲಿ ಲಭ್ಯವಿರುವ ನಮೂನೆಯಲ್ಲಿ ನೀಡಬೇಕು. ಅಲ್ಲದೆ ನಮೂನೆಗಳು www.rdpr.kar.nic.in ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
0 comments:
Post a Comment