ಕರ್ನಾಟಕ ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರರ ಚುನಾವಣೆ ನಿಮಿತ್ಯ ಜೂ. ೧೦ ರಂದು ಮತದಾನ ನಡೆಯಲಿರುವುದರಿಂದ, ಸುಗಮ ಮತದಾನಕ್ಕಾಗಿ ಆಯಾ ದಿನದಂದು ನಡೆಯುವ ಸಂತೆ, ಜಾತ್ರೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ನಿಮಿತ್ಯ ಜೂ. ೧೦ ರಂದು ಬೆಳಿಗ್ಗೆ ೮ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನವು ಮುಕ್ತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳಬೇಕಾಗಿರುವುದರಿಂದ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಅಳವಂಡಿ, ಮುನಿರಾಬಾದ್ಯ ಡಾಂ, ಇರಕಲ್ಲಗಡ, ಕಾರಟಗಿ, ಸಿದ್ದಾಪುರ, ವೆಂಕಟಗಿರಿ, ಮರಳಿ, ಕನಕಗಿರಿ, ಹನುಮಸಾಗರ, ಹನುಮನಾಳ, ತಾವರಗೇರಾ, ಕುಕನೂರು, ಹಿರೇವಂಕಲಕುಂಟಾ, ಮಂಗಳೂರು ಇಲ್ಲಿ ನಡೆಯುವ ಸಂತೆ ಮತ್ತು ಜಾತ್ರೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರರ ಚುನಾವಣೆ ನಿಮಿತ್ಯ ಜೂ. ೧೦ ರಂದು ಮತದಾನ ನಡೆಯಲಿರುವುದರಿಂದ, ಶಾಂತಿಯುತ ಮತದಾನ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಮದ್ಯಪಾನ ಮತ್ತು ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಗಾಗಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಜೂ. ೯ ರಂದು ಬೆಳಿಗ್ಗೆ ೬ ಗಂಟೆಯಿಂದ ಜೂ. ೧೧ ರಂದು ಬೆಳಿಗ್ಗೆ ೦೬ ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ನಿಷೇಧಿತ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ವೈನ್ ಶಾಪ್, ಬಾರ್‌ಗಳನ್ನು ಮುಚ್ಚುವಂತೆ ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಅಬಕಾರಿ ಉಪ ಆಯುಕ್ತ ಮುಖಂಡತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು, ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ನಿಷೇಧಾಜ್ಞೆ ಜಾರಿ ಕುರಿತಂತೆ ತೀವ್ರ ನಿಗಾವಹಿಸಲು ಸೂಚನೆ ನೀಡಲಾಗಿದೆ .
0 comments:
Post a Comment