PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ, ಮೇ. ೨೩. ಕರ್ನಾಟಕ ಚಲನಚಿತ್ರ ಅಕಾಡೆಮಿಯ, ಕೊಪ್ಪಳ ಜಿಲ್ಲಾ ಬೆಳ್ಳಿಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮುಂಬಯಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ಆಯ್ಕೆಯಾಗಿದ್ದಾರೆ.
ಜಗತ್ತಿನ ಶ್ರೇಷ್ಟ ಸಿನಿಮಾ ತರಬೇತಿ ಅಕಾಡೆಮಿಯಾದ ನ್ಯೂಯಾರ್ಕ ಫಿಲಂ ಅಕಾಡೆಮಿ ಮುಂಬಯಿಯಲ್ಲಿ ಜೂನ್ ೧೮ ರಿಂದ ೩೦ ರವರೆಗೆ ನಡೆಯುವ  ಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ನಗರದ ಉತ್ಸಾಹಿ ಯುವಕ, ಕಿರುಚಿತ್ರ ನಿರ್ಮಾಪಕ ಮಂಜುನಾಥ ಜಿ. ಗೊಂಡಬಾಳ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವದು ಹರ್ಷ ತಂದಿದೆ. ಈಗಾಗಲೆ ಅವರು ಐದಾರು ಕಿರುಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದು, ಚಲನಚಿತ್ರಕ್ಕೆ ಸಂಬಂದಿಸಿದ ಕಾರ್ಯಗಳನ್ನು ಮಾಡುತ್ತಿದ್ದಾರೆ, ಜಿಲ್ಲೆಯಲ್ಲಿ ಚಲನಚಿತ್ರದ ಕುರಿತು ಹೆಚ್ಚು ಹೆಚ್ಚು ಕಾರ್ಯಗಳನ್ನು ಕ್ರಿಯಾಶೀಲವಾಗಿ ಮಾಡಲು ಈ ತರಬೇತಿ ಅನುಕೂಲಕರವಾಗಲಿದ್ದು, ಎರಡು ವಾರಗಳ ಈ ತರಬೇತಿಯಿಂದ ಡಿಪ್ಲಮೊ ಇನ್ ಫಿಲಂ ಮೇಕಿಂಗ್ ಸರ್ಟಿಫಿಕೇಟ್ ಪಡೆಯಲಿದ್ದಾರೆ.
ಇವರ ಸಾಧನೆಗೆ ಜಿಲ್ಲೆಯ ಅನೇಕರು ಹರ್ಷವ್ಯಕ್ತಪಡಿಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳಿಯ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ನಾಟಕಕಾರ ಎಸ್. ವಿ. ಪಾಟೀಲ ಗುಂಡೂರು, ವಿನೂತನ ಶಿಕ್ಷಣ ಸಂಸ್ಥೆಯ ಸಿದ್ದಲಿಂಗಯ್ಯ ಹಿರೇಮಠ, ಬೆಳ್ಳಿ ಮಂಡಲ ಸಹ ಸಂಚಾಲಕ ರುದ್ರಪ್ಪ ಭಂಡಾರಿ, ಮಾಜಿ ಕಸಾಪ ಅಧ್ಯಕ್ಷ ಜಿ.ಎಸ್.ಗೊನಾಳ, ಪತ್ರಕರ್ತ ಎಸ್. ಎ. ಗಫಾರ್, ರಂಗನಾಥ ಕೋಳೂರು, ವೀರ ಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ವಿಜಯ ಅಮೃತರಾಜ್, ಡಾ. ಕೆ.ಬಿ.ಬ್ಯಾಳಿ, ರವಿತೇಜ ಅಬ್ಬಿಗೇರಿ, ವಿಠ್ಠಲ ಮಾಲಿಪಾಟೀಲ, ಶ್ರೀನಿವಾಸ ಪಂಡಿತ್, ಇಂದಿರಾ ಭಾವಿಕಟ್ಟಿ, ಸರೋಜಾ ಬಾಕಳೆ, ಉಮೇಶ ಸುರ್ವೆ, ಗವಿಸಿದ್ದಪ್ಪ ಕರ್ಕಿಹಳ್ಳಿ, ಶಿವನಗೌಡ ಪಾಟೀಲ, ಶಬ್ಬೀರ ಸಿದ್ದಕಿ, ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

Advertisement

0 comments:

Post a Comment

 
Top