PLEASE LOGIN TO KANNADANET.COM FOR REGULAR NEWS-UPDATES


 ವಿವಿಧ ಸಮಿತಿ ರಚನೆ
ಕೊಪ್ಪಳ. ಮೇ. : ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪತ್ರಕರ್ತರು, ಚಲನಚಿತ್ರ ನಿರ್ದೆಶಕರು, ಸಾಂಸ್ಕೃತಿಕ ಸಂಘಟಕ ರಮೇಶ ಸುರ್ವೆರವರು ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಜೂನ್ ೯ ಮತ್ತು ೧೦ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಸಲಾಗುತ್ತಿದೆ ಎಂದು ಪ್ರಧಾನ ಸಂಯೋಜಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಪ್ರಧಾನ ಸಂಚಾಲಕರಾಗಿ ಸ್ವರಭಾರತಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಇರುತ್ತಾರೆ. 
ವೇದಿಕೆ ಸಮಿತಿಗೆ ಡಾ. ಮಹಾಂತೇಶ ಮಲ್ಲನಗೌಡರ (ಅಧ್ಯಕ್ಷರು), ಸಿದ್ದಲಿಂಗಸ್ವಾಮಿ ಚಕ್ಕಡಿ, ಡಾ. ಕೆ.ಬಿ. ಬ್ಯಾಳಿ, (ಉಪಾಧ್ಯಕ್ಷರು), ಹೇಮರಾಜ ವೀರಾಪೂರ, ಹನುಮಂತರಾವ್ ವಕೀಲರು (ಕಾರ್ಯದಶಿಗಳು), ತಿಮ್ಮನಗೌಡ್ರ ಎಪಿಎಂಸಿ, ಶಿವನಗೌಡ ಪಾಟೀಲ ಹಲಗೇರಿ, ಶಿವಪ್ರಸಾದ ಹಾದಿಮನಿ, ಶರಣಬಸಪ್ಪ ದಾನಕೈ, ಶ್ರೀನಿವಾಸ ಚಿತ್ರಗಾರ, ಶಾಂತಾದೇವಿ ಹಿರೇಮಠ, ವಿಜಯಲಕ್ಷ್ಮೀ ಕೊಟಗಿ, ಅನುಸೂಯಾ ವಾಲ್ಮೀಕಿ, ಸರೋಜಾ ಬಾಕಳೆ, ನಾಗೇಶ ಹಿರೇಮಠ ಸೋನು (ಸದಸ್ಯರು)
ಊಟೋಪಚಾರ ಸಮಿತಿಗೆ ಯಂಕನಗೌಡ್ರ ಡಿ. ಪಾಟೀಲ ಹೊರತಟ್ನಾಳ (ಅಧ್ಯಕ್ಷರು), ವಿರುಪಾಕ್ಷಯ್ಯ ಗದುಗಿನಮಠ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಾಲಿ (ಉಪಾಧ್ಯಕ್ಷರು), ಶಿವಾನಂದ ಹೊದ್ಲೂರ (ಕಾರ್ಯದರ್ಶಿಗಳು) ನಾಗರಾಜ ಡೊಳ್ಳಿನ, ಎ.ಪಿ.ಅಂಗಡಿ, ವಿಠ್ಠಲ ಮಾಲೀಪಾಟೀಲ, ಶಶಿಕುಮಾರ ಅರ್ಕಲ್, ಪಾರ್ವತಿ ವಾಲ್ಮೀಕಿ, ವೀರಭದ್ರಯ್ಯ ಭೂಸನೂರಮಠ, ರಾಕೇಶ ಕಾಂಬ್ಳೇಕರ, ರಾಮಣ್ಣ ಕಂದಾರಿ (ಸದಸ್ಯರು) ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಗತ ಸಮಿತಿ, ಪ್ರಚಾರ ಮತ್ತು ಸೌಕರ್ಯ ಸಮಿತಿ, ಸಾಂಸ್ಕೃತಿಕ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ, ಜೂನ್ ಒಂದರಂದು ವಿವಿಧ ಸಮಿತಿಗಳ ಸಭೆಯನ್ನು ಕರೆಯಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.


Advertisement

0 comments:

Post a Comment

 
Top