ಅಹಿಂದ ವರ್ಗಗಳು ರಾಜಕೀಯ ಇಚ್ಚಾಶಕ್ತಿ ತೋರಿಸಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳವಣಿಗೆ ಆದಾಗ ಮಾತ್ರ ಸಾಮಾಜಿಕ ನ್ಯಾಯ ಸಿಗುವಂತಾಗುತ್ತದೆ. ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಸ್ವಾಭಿಮಾನದ ಬದುಕು ಸಾಗಿಸಿ ಒಗ್ಗೂಡಿ ಮುಖ್ಯವಾಹಿನಿಗೆ ಬರಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಹೇಳಿದರು.
ಅವರು ತಾಲೂಕಿನ ಇರಕಲ್‌ಗಡಾ ಗ್ರಾಮದ ಹಳ್ಳಿಮರದ ಹನುಮಪ್ಪ ಹನುಮನಹಟ್ಟಿ ರಸ್ತೆ ಕಲಾಮಂದಿರ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ ಸಂವೀಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ಅವರ ೧೨೧ನೇ ಜನ್ಮ ದಿನಾಚರಣೆಯ ಅಂಗವಾಗಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಐಕ್ಯತೆ ಜಿಲ್ಲಾ ಮಟ್ಟದ ವಿಚಾರ ಸಂಕೀರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದ ಮಾತನಾಡಿದ ಅವರು, ರಾಜಕಾರಣಿಗಳ ಆಮೀಷಕ್ಕೆ ಬಲಿಯಾಗಿ ತಮ್ಮ ಮತಗಳ ಮಾರಾಟ ಮಾಡದೇ ಯೋಗ್ಯ ನಾಯಕರನ್ನು ಆಯ್ಕೆ ಮಾಡುವಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ವರ್ಗ ಶ್ರಮಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು, ಶೋಷಿತರ ಪಾಲಿಗೆ ಧ್ವನಿಯಾಗಿ ತಮ್ಮ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಬೇಕೆಂದು ಲಕ್ಷ್ಮೀ ನಾರಾಯಣ ನಾಗವಾರ ಸಲಹೆ ಮಾಡಿದರು.
ವೇದಿಕೆಯ ಮೇಲೆ ರಾಜ್ಯ ಖಜಾಂಚಿ ಅಯ್ಯಪ್ಪ ಆರೋಲಿ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ, ದಲಿತ ಮುಖಂಡರಾದ ಪ್ರಕಾಶ ಕೆಲೂರು, ಜೀವನಹಳ್ಳಿ ವೆಂಕಟೇಶ, ಶಿವಾಜಿ ಬನವಾನ್, ಗಂಗಾವತಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಪೊಲೀಸ್ ಪಾಟೀಲ್, ಜಿ.ಪಂ.ಸದಸ್ಯ ಕೆ.ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್ ಮುಖಂಡ ಮಲ್ಲೇಶಪ್ಪ ಗುಮಗೇರಿ, ಜಿಲ್ಲಾ ಸಂಚಾಲಕ ಶರಣಪ್ಪ ಲೇಬಗೇರಿ, ಸಂಘಟನಾ ಸಂಚಾಲಕ ಭೀಮಣ್ಣ ಗಂಗಾವತಿ, ಹನುಮಂತ ಇಂಡಿ, ಗಾಳೆಪ್ಪ ತೊಂಡಿಹಾಳ, ತಾಲೂಕ ಸಮಿತಿ ಸಂಚಾಲಕ ನರಸಪ್ಪ ಚೆನ್ನದಾಸರ, ರಾಮಣ್ಣ ಕಾರಬಾರಿ, ಯಮನೂರಪ್ಪ ಕಟ್ಟಿಮನಿ, ರೇಣಪ್ಪ ರಾಮನಹಳ್ಳಿ, ದ್ಯಾಮಪ್ಪ ಕಟ್ಟಿಮನಿ, ರಾಮಣ್ಣ ಜೋತಬಿಲ್ಲೆ, ಯಮನೂರಪ್ಪ ಕಲ್ಮೊಗ್ಗಿ, ರವಿ ಬಾಬು, ಪರಶುರಾಮು ಸೋಮನಾಳ, ದೇವೆಂದ್ರ ಇಳಗಿನೂರ, ಬಸವರಾಜ ಕಲ್ಲೂರ, ಚೆನ್ನಬಸಪ್ಪ ರ‍್ಯಾವಣಕಿ, ಸಂಗಪ್ಪ ಜೋಗಣ್ಣವರ, ಪ್ರಕಾಶ ರಾಜೂರು ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳಾದ ಶಿವಮ್ಮ ಪೂಜಾರ, ಹನುಮಂತಮ್ಮ, ಈರಮ್ಮ ಇನ್ನು ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಹಿಂದುಳಿದ ಅಲ್ಪಸಂಖ್ಯಾತರ ಮತ್ತು ದಲಿತ ವರ್ಗಗಳ ಜನರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.
0 comments:
Post a Comment