ಮಾತು ತಪ್ಪಿದ ಹೈಕಮಾಂಡ್ : ವರಿಷ್ಠರ ವಿರುದ್ಧ ಬಿ.ಎಸ್.ಯಡಿಯೂರಪ್ಪ ಗರಂ
ಬೆಂಗಳೂರು, ಮೇ 18: ದಿಲ್ಲಿ ವರಿಷ್ಠರ ವಿರುದ್ಧ ಆಕ್ರೋಶವನ್ನು ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಾಗಿ ನೀಡಿರುವ ಭರವಸೆ ಇನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಹಳೆಯ ಕಚೇರಿಯಲ್ಲಿ ತನ್ನ ‘ಜನಸಂಪರ್ಕ’ ಕಚೇರಿಯನ್ನು ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು.
ಬಿಜೆಪಿ ತೊರೆಯುವ ನಿರ್ಧಾರವನ್ನು ಮುಂದೂಡಿರುವ ಯಡಿಯೂರಪ್ಪ, ಈ ಬಗ್ಗೆ ಯಾವುದೇ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸದೆ ಕೇವಲ ಸಾರ್ವಜನಿಕರು ತಾನು ರಾಜೀನಾಮೆ ನೀಡುವ ಕುರಿತು ಮಾತನಾಡುತ್ತಿದ್ದಾರೆ ಎಂದಷ್ಟೇ ಹೇಳಿದರು.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಧಾನಸೌಧ ಅಥವಾ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕುಳಿತು ಜನರ ಸಮಸ್ಯೆ, ದುಃಖ ದುಮ್ಮಾನಗಳನ್ನು ಆಲಿಸಬೇಕಿತ್ತು. ಆದರೆ ಅದನ್ನು ಅವರು ಮಾಡುತ್ತಿಲ್ಲ. ಆದ್ದರಿಂದ ತಾನು ಜನಸಂಪರ್ಕ ಕಚೇರಿ ಆರಂಭಿಸಿ ಜನರ ದುಃಖದುಮ್ಮಾನಗಳನ್ನು ಆಲಿಸಲು ಉದ್ದೇಶಿಸಿದ್ದೇನೆ ಎಂದವರು ನುಡಿದರು.
ಮುಂದಿನ ತಿಂಗಳ ಒಂದರಿಂದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತನ್ನ ನಿವಾಸವನ್ನು ತೆರವುಗೊಳಿಸುತ್ತಿದ್ದೇನೆ. ಇನ್ನು ಮುಂದೆ ಡಾಲರ್ಸ್ ಕಾಲನಿಯಲ್ಲಿರುವ ನಿವಾಸದಲ್ಲಿಯೇ ಇರಲು ನಿರ್ಧರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಜನರ ಸಂಪರ್ಕಕ್ಕಾಗಿ ಕಚೇರಿಯ ಅಗತ್ಯವಿತ್ತು. ಅದಕ್ಕೆ ಕಚೇರಿ ಆರಂಭಿಸಿದ್ದೇನೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.
ಹೊಸದಾಗಿ ಆರಂಭಿಸಿರುವ ಕಚೇರಿ ಪಕ್ಷಕ್ಕೆ ಪರ್ಯಾಯ ಶಕ್ತಿ ಕೇಂದ್ರವಲ್ಲ. ಹೊಸ ಕಚೇರಿ ಆರಂಭಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು. ಮುಂದಿನ ತಿಂಗಳ ಒಂದರಿಂದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸವನ್ನು ತೆರವುಗೊಳಿಸುತ್ತಿದ್ದೇನೆ. ಇನ್ನು ಮುಂದೆ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿಯೇ ಇರಲು ನಿರ್ಧರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಜನರ ಸಂಪರ್ಕಕ್ಕಾಗಿ ಕಚೇರಿಯ ಅಗತ್ಯವಿತ್ತು. ಅದಕ್ಕೆ ಕಚೇರಿ ಆರಂಭಿಸಿದ್ದೇನೆ ಎಂದರು.
ಹೊಸದಾಗಿ ಆರಂಭಿಸಿರುವ ಕಚೇರಿ ಪಕ್ಷಕ್ಕೆ ಪರ್ಯಾಯ ಶಕ್ತಿ ಕೇಂದ್ರವಲ್ಲ. ಹೊಸ ಕಚೇರಿ ಆರಂಭಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಯಡಿಯೂರಪ್ಪ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಕುಳಿತು ಜನರನ್ನು ಭೇಟಿ ಮಾಡಿದರೆ ಅದಕ್ಕೆ ಬೇರೆಯೇ ಅರ್ಥ ಬರುತ್ತದೆ. ಅದಕ್ಕಾಗಿ ಪ್ರತ್ಯೇಕ ಕಚೇರಿ ಆರಂಭಿಸಲು ನಿರ್ಧರಿಸಿದೆ ಎಂದರು. ನಗರಕ್ಕಾಗಮಿಸಲಿರುವ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿಯೊಂದಿಗೆ ರಾಜ್ಯದ ರಾಜಕೀಯದ ಕುರಿತು ಮುಕ್ತವಾಗಿ ಮಾತುಕತೆ ನಡೆಸುತ್ತೇನೆ. ತಾನು ಕಚೇರಿ ಆರಂಭಿಸಿರುವ ಕುರಿತು ಕೂಡಾ ತಿಳಿಸುತ್ತೇನೆ. ಸಾಧ್ಯವಾದರೆ ಅವರನ್ನು ಕೂಡಾ ಕಚೇರಿಗೆ ಕರೆತರುತ್ತೇನೆ ಎಂದರು.
ಕಚೇರಿ ಉದ್ಘಾಟನೆಯ ವೇಳೆ ಯಡಿಯೂರಪ್ಪರ ಬೆಂಬಲಿಗ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಶಾಸಕರಾದ ಬಿ.ಪಿ.ಹರೀಶ್, ನಂದೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್, ಸುರೇಶ್ ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.
0 comments:
Post a Comment