ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೦೯,೨೦೧೦,೨೦೧೧ರ ವಾರ್ಷಿಕ ಪ್ರಶಸ್ತಿಗೆ ಅಹ್ವಾನ
ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೯,೨೦೧೦,ಹಾಗೂ ೨೦೧೧ನೇ ಸಾಲಿನ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ವರದ/ಲೇಖನ/ಸುದ್ದಿಛಾಯಾಚಿತ್ರಗಳನ್ನು ಅಹ್ವಾನಿಸಲಾಗಿದೆ.
೧)ಜಿ.ನಾರಾಯಣ ಪ್ರಶಸ್ತಿ(ಅತ್ಯುತ್ತಮ ಗ್ರಾಮಾಂತರ ವರದಿಗೆ)
೨)ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ)
೩)ಗಿರಿಧರ ಪ್ರಶಸ್ತಿ(ಅತ್ಯುತ್ತಮ ಅಪರಾಧ ವರದಿಗೆ)
೪)ಬಿ.ಎಸ್.ವೆಂಕಟರಾಮ್ ಪ್ರಶಸ್ತಿ(ಅತ್ಯುತ್ತಮ ಸ್ಕೂಪ್ ವರದಿಗೆ)
೫)ಕ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ(ಅತ್ಯುತ್ತಮ ಕ್ರೀಡಾ ವರದಿಗೆ)
೬)ಖಾದ್ರಿ ಶಾಮಣ್ಣ ಪ್ರಶಸ್ತಿ(ಅತ್ಯುತ್ತಮ ವಿಮರ್ಶಾತ್ಮಕ ಲೇಖನಕ್ಕೆ)
೭)ಮಂಗಳ ಎಂ.ಸಿ.ವರ್ಗಿಸ್ ಪ್ರಶಸ್ತಿ(ವಾರ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನಕ್ಕೆ)
೮)ಮಂಡಿಬೆಲೆ ರಾಜಣ್ಣ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ)
೯)ಆರ್.ಎಲ್.ವಾಸುದೇವರಾಯ್ ಪ್ರಶಸ್ತಿ(ಅರಣ್ಯ ಕುರಿತು ಅತ್ಯುತ್ತಮ ಲೇಖನಕ್ಕೆ)
೧೦) ಆರ್.ಎಲ್.ವಾಸುದೇವರಾಯ್ ಪ್ರಶಸ್ತಿ(ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ)
೧೧)ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ(ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ಅತ್ಯುತ್ತಮ ವರದಿಗೆ)
೧೨)ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ(ಗ್ರಾಮೀಣ ಜನ-ಜೀವನ ಕುರಿತ ಅತ್ಯುತ್ತಮ ವರದಿಗೆ)
೧೩)ಬೆಂಗಳೂರು ನಿರ್ಮಾತೃ ಕೇಂಪೆಗೌಡ ಸ್ಮಾರಕ್ ಪ್ರಶಸ್ತಿ
(ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿ ಕುರಿತ ಅತ್ಯುತ್ತಮ ವರದಿಗೆ)
೧೪)ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿ
(ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ)
೧೫)ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ)
ಷರತ್ತುಗಳು:
೧)೨೦೦೦೯,೨೦೧೦,೨೦೧೧ ನೇ ಸಾಲಿನ ಪ್ರಶಸ್ತಿಗಳಿಗಾಗಿ ಆಯಾ ವರ್ಷದ ಜನೇವರಿ ೧ ರಿಂದ ಡಿಸೆಂಬರ್ ೩೧ರೊಳಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ವರದಿ/ಸುದ್ದಿ ಛಾಯಾಚಿತ್ರಗಳನ್ನು ಕಳುಹಿಸಬೇಕು.
೨)ವರದಿ: ಲೇಖನ ಯಾವ ಪ್ರಶಸ್ತಿಗೆ ಎಂಬುದನ್ನ ಲೇಖನದ ಮುಖಪುಟದಲ್ಲಿ ಸ್ಪಷ್ಟವಾಗಿ ಬರೆದಿರಬೇಕು.
೩)ಅನುವಾದ ಮಾಡಿದ ವರದಿ: ಲೇಖನಗಳಿಗೆ ಅವಕಾಶವಿಲ್ಲ
೪)ಒಬ್ಬರು ಒಂದು ಪ್ರಶಸ್ತಿಗೆ ಮಾತ್ರ ವರದಿ: ಲೇಖನಗಳನ್ನ ಕಳುಹಿಸಬಹುದು.
೫)ರಾಜ್ಯ ಸಂಘದ ಪದಾಧಿಕಾರಿಗಳು ಹಾಗೂ ಅವರ ಕುಟುಂಬವರ್ಗದವರು ಪ್ರಶಸ್ತಿಗೆ ಪ್ರವೇಶ ಕಳುಹಿಸಬಾರದು.
೬)ಲೇಖನ ವರದಿಗಳು ಮೂರು ಪ್ರತಿಗಳಲ್ಲಿ (ಝೆರಾಕ್ಸ ಪ್ರತಿಗಳಾದರೆ ಮೂರರಲ್ಲಿ ಒಂದು ಮೂಲ ಪ್ರತಿ ಇರಬೇಕು) ಕಳುಹಿಸಬೇಕು.
೭)ವಿದ್ಯುನ್ಮಾನ ಮಾಧ್ಯಮದ ಪ್ರವೇಶಕ್ಕೆ ಕ್ಲಿಪಿಂಗ್ ಮತ್ತು ಅದರ ಸ್ಕ್ರಿಪ್ಟ್‌ಗಳನ್ನ ಕಳುಹಿಸಬೇಕು.
೮) ಕೊಪ್ಪಳ ಜಿಲ್ಲಾ ಅಧ್ಯಕ್ಷರು, ನಾಗರಾಜ ಸುಣಗಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸ್ಟೇಷನ್ ರಸ್ತೆ ಕೊಪ್ಪಳ ಈ ವಿಳಾಸಕ್ಕೆ ೨೮-೦೫-೧೨ರ ಒಳಗಾಗಿ ಕಳುಹಿಸಬೇಕು ನಂತಯರ ಬಂದವುಗಳನ್ನ ಸ್ವೀಕರಿಸಲಾಗುವುದಿಲ್ಲ.
೯)ಲೇಖನದ ಜೊತೆಯಲ್ಲಿ ಸ್ವಪರಿಚಯ ಮತ್ತು ಪಾಸ್ ಪೋರ್ಟ ಸೈಜಿನ ಭಾವಚಿತ್ರ ಕಳುಹಿಸಬೇಕು.
0 comments:
Post a Comment