ವಿಶ್ವ ಕಿಂಗ್ ಪಟ್ಟ ಉಳಿಸಿಕೊಂಡ ಆನಂದ್;
ವಿಶ್ವ ಕಿಂಗ್ ಪಟ್ಟ ಉಳಿಸಿಕೊಂಡ ಆನಂದ್ಟೈಬ್ರೇಕರ್‌ನಲ್ಲಿ ನಿರ್ಧಾರಗೊಂಡ ಫಲಿತಾಂಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ್ರಾಂಡ್ ಮಾಸ್ಟರ್ ಮಾಸ್ಕೊ, ಮೇ 30: ಹಾಲಿ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇಂದು ಮುಕ್ತಾಯಗೊಂಡ ವಿಶ್ವ ಚೆಸ್ ಚಾಂಪಿಯನ್‌ಷಿಪ್ ನಲ್ಲಿ ಇಸ್ರೇಲ್‌ನ ಬೋರಿಸ್ ಗೆಲ್‌ಫೆಂಡ್ ಅವರನ್ನು ಸೋಲಿಸುವ ಮೂಲಕ ಐದನೆ ಬಾರಿ ವಿಶ್ವ ಚಾಂಪಿಯನ್‌ಪಟ್ಟವನ್ನು ಗೆದ್ದು ಕೊಂಡಿದ್ದಾರೆ. ಮಂಗಳವಾರ ಒಟ್ಟು 12 ಸುತ್ತುಗಳ ಸೆಣಸಾಟದಲ್ಲಿ ವಿಶ್ವನಾಥನ್ ಆನಂದ್ ಮತ್ತು ಬೋರಿಸ್ ಗೆಲ್‌ಫೆಂಡ್ 6-6 ಅಂಕಗಳೊಂದಿಗೆ ಸಮಬಲದ ಗೌರವ ಸಾಧಿಸಿದ್ದರು. ಒಟ್ಟು 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿತ್ತು. ತಲಾ 1 ಪಂದ್ಯವನ್ನು ಇವರು ಗೆದ್ದುಕೊಂಡಿದ್ದರು. ಈ ಕಾರಣಕ್ಕಾಗಿ ಫಲಿತಾಂಶವನ್ನು ನಿರ್ಧರಿಸಲು ಇಂದು ಟೈಬ್ರೇಕರ್ ಅಳವಡಿಸಲಾಗಿತ್ತು. ಇಂದು ಆನಂದ್ ಟೈಬ್ರೇಕರ್‌ನಲ್ಲಿ ಪ್ರತಿಸ್ಪರ್ಧಿ ಗೆಲ್‌ಫೆಂಡ್ ರನ್ನು 2.5-1.5 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ರ್ಯಾಪಿಡ್ ಚೆಸ್ ಟೈಬ್ರೇಕರ್‌ನ ನಾಲ್ಕು ಗೇಮ್‌ಗಳ ಪೈಕಿ ಮೊದಲ ಗೇಮ್ 33 ನಡೆಯೊಂದಿಗೆ ಡ್ರಾನಲ್ಲಿ ಕೊನೆಗೊಂಡಿತು. ಎರಡನೆ ಗೇಮ್‌ನಲ್ಲಿ 77ನಡೆಯೊಂದಿಗೆ ವಿಶ್ವನಾಥನ್ ಆನಂದ್ ಗೆಲ್‌ಫೆಂಡ್‌ರನ್ನು ಮಣಿಸಿದರು. ಅಂತಿಮ ಎರಡು ಗೇಮ್ ಡ್ರಾನಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ ವಿಶ್ವನಾಥನ್ ಆನಂದ್ ವಿಶ್ವಚಾಂಪಿಯನ್ ಪಟ್ಟವನ್ನು ಮತ್ತೊಮ್ಮೆ ಉಳಿಸಿಕೊಂಡರು. 42ರ ಹರೆಯದ ವಿಶ್ವನಾಥನ್ ಆನಂದ್ ಅವರಿಗೆ ಇದು ಐದನೆ ವಿಶ್ವ ಕಿರೀಟ. 2000ದಲ್ಲಿ ಮೊದಲ ಬಾರಿ ವಿಶ್ವಚಾಂಪಿಯನ್ ಪ್ರಶಸ್ತಿ ಜಯಿಸಿದ ವಿಶ್ವನಾಥನ್ ಆನಂದ್, ಆ ಬಳಿಕ 2007ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದುಕೊಂಡರು. ಆನಂತರ ಅವರು 2008, 2010 ಮತ್ತು 2012ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸತತ ನಾಲ್ಕನೆ ಬಾರಿ ವಿಶ್ವ ಪಟ್ಟವನ್ನು ತನ್ನಲ್ಲೆ ಉಳಿಸಿಕೊಂಡರು. ಈ ಗೆಲುವಿನೊಂದಿಗೆ ವಿಶ್ವನಾಥನ್ ಆನಂದ್ ಒಟ್ಟು ಪ್ರಶಸ್ತಿ ಮೊತ್ತ 25.5 ಲಕ್ಷ ಡಾಲರ್‌ನ ಶೇ. 55 ರಷ್ಟು ಅಂದರೆ 14 ಲಕ್ಷ ಡಾಲರ್ ವಿಶ್ವನಾಥನ್ ಆನಂದ್ ಪಾಲಾದರೆ, ಉಳಿದ 11.5 ಲಕ್ಷ ಡಾಲರ್ ಎರಡನೆ ಸ್ಥಾನ ಪಡೆದಿರುವ ಗೆಲ್‌ಫೆಂಡ್ ಪಾಲಿಗೆ ದೊರೆಯಿತು.
*ಟೈ ಬ್ರೇಕರ್‌ನಲ್ಲಿ ನಿರ್ಧಾರಗೊಂಡ ಫಲಿತಾಂಶ
ಮಾಸ್ಕೊ, ಮೇ 30: ಹಾಲಿ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇಂದು ಮುಕ್ತಾಯಗೊಂಡ ವಿಶ್ವ ಚೆಸ್ ಚಾಂಪಿಯನ್‌ಷಿಪ್ ನಲ್ಲಿ ಇಸ್ರೇಲ್‌ನ ಬೋರಿಸ್ ಗೆಲ್‌ಫೆಂಡ್ ಅವರನ್ನು ಸೋಲಿಸುವ ಮೂಲಕ ಐದನೆ ಬಾರಿ ವಿಶ್ವ ಚಾಂಪಿಯನ್‌ಪಟ್ಟವನ್ನು ಗೆದ್ದು ಕೊಂಡಿದ್ದಾರೆ. ಮಂಗಳವಾರ ಒಟ್ಟು 12 ಸುತ್ತುಗಳ ಸೆಣಸಾಟದಲ್ಲಿ ವಿಶ್ವನಾಥನ್ ಆನಂದ್ ಮತ್ತು ಬೋರಿಸ್ ಗೆಲ್‌ಫೆಂಡ್ 6-6 ಅಂಕಗಳೊಂದಿಗೆ ಸಮಬಲದ ಗೌರವ ಸಾಧಿಸಿದ್ದರು.ಒಟ್ಟು 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿತ್ತು.ತಲಾ 1 ಪಂದ್ಯವನ್ನು ಇವರು ಗೆದ್ದುಕೊಂಡಿದ್ದರು.ಈ ಕಾರಣಕ್ಕಾಗಿ ಫಲಿತಾಂಶವನ್ನು ನಿರ್ಧರಿಸಲು ಇಂದು ಟೈಬ್ರೇಕರ್ ಅಳವಡಿಸಲಾಗಿತ್ತು. ಇಂದು ಆನಂದ್ ಟೈಬ್ರೇಕರ್‌ನಲ್ಲಿ ಪ್ರತಿಸ್ಪರ್ಧಿ ಗೆಲ್‌ಫೆಂಡ್ರನ್ನು 2.5-1.5 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ರ್ಯಾಪಿಡ್ ಚೆಸ್ ಟೈಬ್ರೇಕರ್‌ನ ನಾಲ್ಕು ಗೇಮ್‌ಗಳ ಪೈಕಿ ಮೊದಲ ಗೇಮ್ 33 ನಡೆಯೊಂದಿಗೆ ಡ್ರಾನಲ್ಲಿ ಕೊನೆಗೊಂಡಿತು.ಎರಡನೆ ಗೇಮ್‌ನಲ್ಲಿ 77ನಡೆಯೊಂದಿಗೆ ವಿಶ್ವನಾಥನ್ ಆನಂದ್ ಗೆಲ್‌ಫೆಂಡ್‌ರನ್ನು ಮಣಿಸಿದರು. ಅಂತಿಮ ಎರಡು ಗೇಮ್ ಡ್ರಾನಲ್ಲಿ ಮುಕ್ತಾಯಗೊಂಡಿತು.ಇದರೊಂದಿಗೆ ವಿಶ್ವನಾಥನ್ ಆನಂದ್ ವಿಶ್ವಚಾಂಪಿಯನ್ ಪಟ್ಟವನ್ನು ಮತ್ತೊಮ್ಮೆ ಉಳಿಸಿಕೊಂಡರು.
42ರ ಹರೆಯದ ವಿಶ್ವನಾಥನ್ ಆನಂದ್ ಅವರಿಗೆ ಇದು ಐದನೆ ವಿಶ್ವ ಕಿರೀಟ. 2000ದಲ್ಲಿ ಮೊದಲ ಬಾರಿ ವಿಶ್ವಚಾಂಪಿಯನ್ ಪ್ರಶಸ್ತಿ ಜಯಿಸಿದ ವಿಶ್ವನಾಥನ್ ಆನಂದ್, ಆ ಬಳಿಕ 2007ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದುಕೊಂಡರು.ಆನಂತರ ಅವರು 2008, 2010 ಮತ್ತು 2012ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸತತ ನಾಲ್ಕನೆ ಬಾರಿ ವಿಶ್ವ ಪಟ್ಟವನ್ನು ತನ್ನಲ್ಲೆ ಉಳಿಸಿಕೊಂಡರು. ಈ ಗೆಲುವಿನೊಂದಿಗೆ ವಿಶ್ವನಾಥನ್ ಆನಂದ್ ಒಟ್ಟು ಪ್ರಶಸ್ತಿ ಮೊತ್ತ 25.5 ಲಕ್ಷ ಡಾಲರ್‌ನ ಶೇ. 55 ರಷ್ಟು ಅಂದರೆ 14 ಲಕ್ಷ ಡಾಲರ್ ವಿಶ್ವನಾಥನ್ ಆನಂದ್ ಪಾಲಾದರೆ, ಉಳಿದ 11.5 ಲಕ್ಷ ಡಾಲರ್ ಎರಡನೆ ಸ್ಥಾನ ಪಡೆದಿರುವ ಗೆಲ್‌ಫೆಂಡ್ ಪಾಲಿಗೆ ದೊರೆಯಿತು.
0 comments:
Post a Comment