PLEASE LOGIN TO KANNADANET.COM FOR REGULAR NEWS-UPDATES


 - ಶ್ರೀ ಸಹಜಾನಂದ ಸ್ವಾಮೀಜಿ.

ಕೊಪ್ಪಳ : ೧೧. ಸಮಾಜ ಬಾಂಧವರು ಆಗಾಗ್ಗೆ ಸಭೆ ಸಮಾರಂಭ ಏರ್ಪಡಿಸಿ ತನ್ಮೂಲಕ ಒಬ್ಬರನ್ನೊಬ್ಬರು ಪರಿಚಯಿಸಿ ತಮ್ಮನ್ನು ತಾವು ಗುರುತಿಸಿ ಕೊಳ್ಳುವ ಮೂಲಕ ಸಂಘಟನೆಗೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಸಮಾಜ ಸದೃಡವಾಗಲು ಸಾಧ್ಯ ಎಂದು ವೇದವ್ಯಾಸ ಗುರುಪೀಠದ ಶ್ರೀ ಸಹಜಾನಂದ ಸರಸ್ವತಿ ಸ್ವಾಮಿಗಳು ಕರೆ ನೀಡಿದರು. 
ಅವರು ಶುಕ್ರವಾರದಂದು ತಾಲುಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಕೊಪ್ಪಳ ತಾಲುಕಾ ಗಂಗಾಮತ ಸಂಘ ಆಯೋಜಿಸಿದ ಅಭಿಯಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಾ. ಗಂಗಾಮತ ಸಮಾಜದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ತುಂಬಾ ಹಿಂದುಳಿದಿದ್ದು, ಈ ನಿಟ್ಟಿನಲ್ಲಿ ಸಮಘಟನೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರಕಾರದಿಂದ ಅನೇಕ ಸೌಲಭ್ಯ ಪಡೆಯಬಹುದು. ಇತರೇ ಸಮಾಜಗಳಿಗಿಂತ ಒಗ್ಗಟ್ಟಾಗಿ ರಾಜಕೀಯ ಪಕ್ಷಗಳಿಗೆ ನಮ್ಮ ಜನಸಂಖ್ಯಾಬಲ ಪ್ರದರ್ಶಿಸಿ. ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷ ಬಾಳಪ್ಪ ಬಾರಕೇರ ಮೆ. ೨೭ ಕ್ಕೆ ಹಮ್ಮಿಕೊಂಡ ಜಾಗೃತಿ ಸಮಾಜವೇಶಕ್ಕೆ ಸಮಾಜ ಬಾಂದವರು ಹೆಚ್ಚಿನ ಸಂಖೆಯಲ್ಲಿ ಸೇರಿ ನಮ್ಮ ಸಂಖ್ಯಾ ಬಲ ಪ್ರದರ್ಶಿಸಿ, ಸರಕಾರಕ್ಕೆ ತೋರ್ಪಡಿಸೋಣ ಎಂದರು. ಹಿರಿಯ ಮುಖಂಡರಾದ ಶಿವಮೂರ್ತಿಗೌಡ ಟಣಕನಕಲ್, ಮಲ್ಲಪ್ಪ ಬಾರಕೇರ, ತಾಲೂಕಾ ಅಧ್ಯಕ್ಷ ಸೋಮಣ್ಣ ಬಾರಕೇರ, ಪ್ರ. ಕಾ. ಶೇಖಪ್ಪ ಸಿಂದೋಗಿ, ಅಂಬರೇಶ ಗಿಡ್ಡಾಲಿ ಹುಲಿಗಿ ಮಾತನಾಡಿದರು. 
ಈ ಸಂದರ್ಬದಲ್ಲಿ ಜಬ್ಬಲಗುಡ್ ಗ್ರಾಮದ ಲಕ್ಷ್ಮಣ ತಳಕಲ್. ರಾಮಣ್ಣ ಪೂಜಾರಿ, ದೇವಪ್ಪ ಕಬ್ಬೇರ, ಗ್ರಾ. ಪಂ. ಸದಸ್ಯ ಸೋಮಲಿಂಗಪ್ಪ ಪಂಪಾಪತಿ, ಪೂಜಾರಿ ಈರಪ್ಪ ಕಂಪ್ಲಿ, ನಾಗಪ್ಪ ಸುಣಗಾರ ಹನುಮನಗೌಡ ಟಣಕನಕಲ್ ಹಾಗೂ ನೌಕರರ ಸಂಗದ ಜಿಲ್ಲಾ ಅಧ್ಯಕಲ್ಷ ಯಂಕನ್ಣ ಬಾರಕೇರ ಖಜಾಂಚಿ ನಾರಾಯಣ ಕಾತರಕಿ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top