ಇಂದಿನ ಕವಿಸಮಯದಲ್ಲಿ ಸಾದತ್ ಹಸನ್ ಮಂಟೊರ ಕತೆಗಳನ್ನು ವಾಚನ ಮಾಡಲಾಯಿತು. ಕತೆಗಳ ಕುರಿತು ಚರ್ಚೆ ನಡೆಯಿತು. ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀನಿವಾಸ ಚಿತ್ರಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ-ಹಜಾರಣ್ಣ, ಎನ್,ಜಡೆಯಪ್ಪ- ರೈತನ ಸ್ವಗತ,ಶಿವು ಹಲಗೇರಿ- ಒಡತಿ, ಶಾಂತಾದೇವಿ ಹಿರೇಮಠ- ಹೆಂಡತಿ ರೊಟ್ಟಿ, ಬಸವರಾಜ್ ಸಂಕನಗೌಡ್ರ- ಕನ್ನಡ ಶಾಹಿರಿಗಳು, ಶ್ರೀನಿವಾಸ ಚಿತ್ರಗಾರ- ಕಥನ ಕವನ,ಅನಸೂಯಾ ಜಾಗೀರದಾರ- ಬದುಕು, ಎಂ.ಡಿ.ಹುಸೇನ- ಗಲಭೆ ಸುತ್ತ ಕವನಗಳನ್ನು ವಾಚನ ಮಾಡಿದರು. ವಿಜಯಲಕ್ಷ್ಮೀ ಮಠದ - ಹೂವು ಎನ್ನುವ ಕತೆ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ, ಬಸವರಾಜ ಶೀಲವಂತರ, ಶರಣಬಸಪ್ಪ ಬಿಳಿಎಲೆ, ಮಂಜುನಾಥ ಗೊಂಡಬಾಳ, ಶರಣಪ್ಪ ದಾನಕೈ, ಶಿವಾನಂದ ಹೊದ್ಲೂರ, ಶಿವಪ್ರಸಾದ ಹಾದಿಮನಿ, ಹನುಮಂತಪ್ಪ ಅಂಡಗಿ, ಮೂರ್ತಿ ಇಟಗಿ,ಶಿವಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು ಎನ್.ಜಡೆಯಪ್ಪ ಮಾಡಿದರೆ ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment