ಬೆಂಗಳೂರು, ಮೇ 29: ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯೊಂದಿಗಿನ ಶಂಕಾಸ್ಪದ ಭೂ ವ್ಯವಹಾರ ಮತ್ತು ಗಣಿ ಕಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ, ಅಳಿಯ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಜೂನ್ 1ಕ್ಕೆ ಮುಂದೂಡಿದೆ.ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಆರ್. ವೆಂಕಟ್ ಸುದರ್ಶನ್ ಮೇ 25ರಂದು ಸಿಬಿಐ ಜಾಮೀನು ಮಂಜೂರು ಮಾಡದಂತೆ ಸಲ್ಲಿಸಿರುವ ಆಕ್ಷೇಪಣೆಗಳಿಗೆ ಯಡಿಯೂರಪ್ಪ ಅವರ ಪರ ವಕೀಲ ಸಿದ್ಧಾರ್ಥ ನಾವಡಗಿ ಅವರು ಪ್ರತಿ ಆಕ್ಷೇಪಣೆ ಸಲ್ಲಿಸಿದ ತರುವಾಯ ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿದರು.ಇದೇ ವೇಳೆ ವಿಶೇಷ ಅಭಿಯೋಜಕರು ನಿರೀಕ್ಷಣಾ ಜಾಮೀನು ಅರ್ಜಿದಾರರ ಖುದ್ದು ಹಾಜರಾತಿಗೆ ತಾವು ಒತ್ತಾಯಿಸುವುದಿಲ್ಲ ಎಂದು ತಿಳಿಸಿ ಜೂನ್ 1ರವರೆಗೆ ಕಾಲಾವಕಾಶ ಕೋರಿದರು.
ಮೇ 25ರಂದು ಸಿಬಿಐ ಅಧಿಕಾರಿ ಬಿಸ್ವಜಿತ್ ದಾಸ್ ಅವರು ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ವಿ.ವೈ. ವಿಜಯೇಂದ್ರ ಹಾಗೂ ಅಳಿಯ ಆರ್.ಎನ್. ಸೋಹನ್‌ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.ಇದು ಒಂದು ಗಂಭೀರ ಪ್ರಕರಣವಾಗಿದ್ದು ದೊಡ್ಡ ಮೊತ್ತದ ಹಣಕಾಸು ವ್ಯವಹಾರ ಒಳಗೊಂಡಿರುವ ಕಾರಣ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಸೆಕ್ಷನ್‌ಗಳಡಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ಸಿಬಿಐ ವಾದಿಸಿತ್ತು.
ಅಲ್ಲದೆ ಸುಪ್ರೀಂಕೋರ್ಟ್ ನಿಗದಿತ ಕಾಲಮಿತಿಯೊಳಗೆ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಅಗತ್ಯವನ್ನೂ ಸಿಬಿಐ ಪ್ರತಿಪಾದಿಸಿತ್ತು. ಮಿಗಿಲಾಗಿ ಯಡಿಯೂರಪ್ಪ ಅವರು ತುಂಬಾ ಪ್ರಭಾವಶಾಲಿಯಾದ ಕಾರಣ ಸಾಕ್ಷ್ಯಗಳನ್ನು ನಾಶಮಾಡುವ ಸಾಧ್ಯತೆ ಇರುವುದರಿಂದ ನಿರೀಕ್ಷಣಾ ಜಾಮೀನು ನೀಡದಂತೆ ಕೋರಿತ್ತು. ಇದೇ ವೇಳೆ ವಿಶೇಷ ಅಭಿಯೋಜಕರು ನಿರೀಕ್ಷಣಾ ಜಾಮೀನು ಅರ್ಜಿದಾರರ ಖುದ್ದು ಹಾಜರಾತಿಗೆ ತಾವು ಒತ್ತಾಯಿಸುವುದಿಲ್ಲ ಎಂದು ತಿಳಿಸಿ ಜೂನ್ 1ರವರೆಗೆ ಕಾಲಾವಕಾಶ ಕೋರಿದರು.
ಮೇ 25ರಂದು ಸಿಬಿಐ ಅಧಿಕಾರಿ ಬಿಸ್ವಜಿತ್ ದಾಸ್ ಅವರು ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ವಿ.ವೈ. ವಿಜಯೇಂದ್ರ ಹಾಗೂ ಅಳಿಯ ಆರ್.ಎನ್. ಸೋಹನ್‌ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.ಇದು ಒಂದು ಗಂಭೀರ ಪ್ರಕರಣವಾಗಿದ್ದು ದೊಡ್ಡ ಮೊತ್ತದ ಹಣಕಾಸು ವ್ಯವಹಾರ ಒಳಗೊಂಡಿರುವ ಕಾರಣ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಸೆಕ್ಷನ್‌ಗಳಡಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ಸಿಬಿಐ ವಾದಿಸಿತ್ತು.
ಅಲ್ಲದೆ ಸುಪ್ರೀಂಕೋರ್ಟ್ ನಿಗದಿತ ಕಾಲಮಿತಿಯೊಳಗೆ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಅಗತ್ಯವನ್ನೂ ಸಿಬಿಐ ಪ್ರತಿಪಾದಿಸಿತ್ತು. ಮಿಗಿಲಾಗಿ ಯಡಿಯೂರಪ್ಪ ಅವರು ತುಂಬಾ ಪ್ರಭಾವಶಾಲಿಯಾದ ಕಾರಣ ಸಾಕ್ಷ್ಯಗಳನ್ನು ನಾಶಮಾಡುವ ಸಾಧ್ಯತೆ ಇರುವುದರಿಂದ ನಿರೀಕ್ಷಣಾ ಜಾಮೀನು ನೀಡದಂತೆ ಕೋರಿತ್ತು.ಜೊತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರೆಲ್ಲರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸುವಂತೆ ಮನವಿ ಮಾಡಿತ್ತು. ಕೇಂದ್ರೀಯ ಉನ್ನತಾಧಿಕಾರ ಸಮಿತಿಯ ಶಿಫಾರಸ್ಸಿನ ಮೇರೆಗೆ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಮೇ 11ರಂದು ಆದೇಶ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
0 comments:
Post a Comment