PLEASE LOGIN TO KANNADANET.COM FOR REGULAR NEWS-UPDATES


ಯಶಸ್ವಿ ೯೯ನೇ ಕವಿಸಮಯ : 
ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹದ ೯೯ನೇ ಕವಿಸಮಯ ನಗರದ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಈ ವಾರ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕವಿಗೋಷ್ಠಿಯಲ್ಲಿ  ವೀರಣ್ಣ ಹುರಕಡ್ಲಿ- ಕಾಯುತ್ತಲೇ ಇದ್ದಾರೆ, ನಟರಾಜ ಸವಡಿ- ಹಂಸ ಪಯಣ, ಎ.ಪಿ.ಅಂಗಡಿ-ಹೋಟಲ್ , ಡಾಬಸವರಾಜ್ ಕುಂಪಾ- ವಿಶ್ವ ಅನಾವರಣ ನಾಮ, ಕುರುವತ್ತಿಗೌಡ್ರ- ಪೃಥ್ವಿ ಪ್ರೇಮ, ಶಿವಪ್ರಸಾದ ಹಾದಿಮನಿ- ಕೆಲಸ ಕೈಲಾಸ, ಶರಣಬಸಪ್ಪ ದಾನಕೈ- ಬಂಗಾರ, ನಪಾಸು, ಬಸವರಾಜ ಸಂಕನಗೌಡ್ರು- ನಾ ನಿನ್ನಂತಾಗಲಿಲ್ಲ., ಎನ್.ಜಡೆಯಪ್ಪ- ಅಪಹಾಸ್ಯ,ವಿಜಯಲಕ್ಷ್ಮೀ ಮಠದ- ಹಂಬಲ, ಶಾಂತಾದೇವಿ ಹಿರೇಮಠ- ಬೆಳಕು, ಪುಷ್ಪಲತಾ ಏಳುಬಾವಿ- ನಿನಗೆ ಬೇವೆ ಎಲ್ಲ, ಪುಷ್ಪಾವತಿ- - ಜವಾಬ್ದಾರಿ,  ಲಲಿತಾ ಭವಿಕಟ್ಟಿ- ನೀ ನಿನ್ನೂರು , ಶಾಂತಪ್ಪ ಬಡಿಗೇರ- ಬಯಲು ಸೀಮೆ,ಅನಸೂಯಾ ಜಾಗೀರದಾರ- ಇದೆ ಮತ್ತು ಇಲ್ಲ, ನಲ್ಲಿ ಯುದ್ದ ಕವನಗಳನ್ನು ವಾಚನ ಮಾಡಿದರು. ಮಹೇಶ ಬಳ್ಳಾರಿ, ಸುದೀಂದ್ರ, ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು.
ಮುಂದಿನವಾರ ನಡೆಯಲಿರುವ ೧೦೦ನೇ ಕವಿಸಮಯದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ೧೦೦ನೇ ಕವಿಸಮಯ ನಿಮಿತ್ತ ಒಂದು ದಿನದ ಸಾಹಿತ್ಯಿಕ ಕಾರ್‍ಯಕ್ರಮಗಳನ್ನು ನಗರದ ಸಾಹಿತ್ಯ ಭವನಲದಲ್ಲಿ ಬೆಳಿಗ್ಗೆ ೧೦-೩೦ರಿಂದ ಸಾಯಂಕಾಲದವರೆಗೆ ನಡೆಸಲಾಗುವುದು. ೧೦೦ನೇ ಕವಿಸಮಯದಲ್ಲಿ ವಿಚಾರಗೋಷ್ಠಿ, ಪುಸ್ತಕಗಳ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲು ತೀರ್‍ಮಾನಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಕಾರ್‍ಯಕ್ರಮವನ್ನು ನಡೆಸಲಾಗುವುದು.
  ಕವಿಸಮಯದ ಸ್ವಾಗತವನ್ನು-ಶಿವಾನಂದ ಹೊದ್ಲೂರ, ನಿರೂಪಣೆಯನ್ನು ಎನ್.ಜಡೆಯಪ್ಪ ಮಾಡಿದರೆ ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ಮಾಡಿದರು. 

Advertisement

0 comments:

Post a Comment

 
Top