PLEASE LOGIN TO KANNADANET.COM FOR REGULAR NEWS-UPDATES


 ರಾಜ್ಯ ಗುಪ್ತದಳದ ಕೊಪ್ಪಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪೊಲೀಸ್ ಪೇದೆ ಹೆಚ್.ಸಿ. ಶ್ರೀನಿವಾಸ ಮೂರ್ತಿ ಅವರಿಗೆ ರಾಜ್ಯ ಸರ್ಕಾರವು ೨೦೧೧ನೇ ಸಾಲಿನ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರಶಸ್ತಿ ಘೋಷಿಸಿದೆ.
  ಇದೇ ಏ. ೨ ರಂದು ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ. ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಪದಕ ಪ್ರದಾನ ಮಾಡುವರು.  ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವರು, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿರುವರು.  ಕಳೆದ ವರ್ಷವೂ ಸಹ ೨೦೧೦ನೇ ಸಾಲಿನ ಮುಖ್ಯಮಂತ್ರಿ ಸ್ವರ್ಣಪದಕವನ್ನು ಕೊಪ್ಪಳ ಗುಪ್ತದಳದ ಪೊಲೀಸ್ ಕಾನ್ಸ್‌ಟೇಬಲ್ ಮಾರುತಿ ಪೂಜಾರ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
  ಮುಖ್ಯಮಂತ್ರಿಗಳ ಸ್ವರ್ಣಪದಕಕ್ಕೆ ಪುರಸ್ಕೃತರಾಗಿರುವ ಶ್ರೀನಿವಾಸಮೂರ್ತಿ ಅವರು, ಕಳೆದ ೧೯ ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ೪ ವರ್ಷಗಳಿಂದ ರಾಜ್ಯ ಗುಪ್ತದಳದ ಕೊಪ್ಪಳ ಘಟಕದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುವುದರ ಮೂಲಕ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊಪ್ಪಳ ಜಿಲ್ಲೆಗೆ ಹಾಗೂ ಇಲಾಖೆಗೆ ಕೀರ್ತಿ ತಂದಿದ್ದಕ್ಕಾಗಿ ಅಲ್ಲದೆ ಸತತವಾಗಿ ಎರಡನೇ ವರ್ಷವೂ ಕೊಪ್ಪಳದ ಗುಪ್ತದಳ ಘಟಕಕ್ಕೆ ಪ್ರಶಸ್ತಿ ಬಂದಿದ್ದಕ್ಕಾಗಿ ಕೊಪ್ಪಳ ಗುಪ್ತದಳದ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ರಾಮರಾವ್, ಪಿಎಸ್‌ಐ ಹನುಮೇಶ್ ಸೌದೇಗಾರ್, ಸಿಬ್ಬಂದಿಗಳಾದ ಸಿದ್ದರಾಮಪ್ಪ. ನಾಗನಗೌಡ, ಮಾರುತಿ ಪೂಜಾರ್, ಹನುಮಂತಪ್ಪ, ಗಿರೀಶ್, ಬೈಲಪ್ಪ, ಕೆಂಚಪ್ಪ, ಬಸವರಾಜ ಮುಧೋಳ, ನೇತ್ರಾವತಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top