PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಏ. ೧. ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ತಿಂಗಳು ೨೯ ರಂದು  ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಖ್ಯಾತ ಚಲನಚಿತ್ರ ನಟ ಹಾಗೂ ಕಾರ್ಮಿಕ ಮುಖಂಡ ಅಶೋಕರವಿಗೆ ಕೊಪ್ಪಲ ಜಿಲ್ಲೆಯ ಅನೇಕ ಆಜೀವ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಗೋಖಾಕ ಚಳುವಳಿಯಿಂದ ಹಿಡಿದು ಅನೇಕ ಕನ್ನಡಪರ ಹೋರಾಟಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಅಶೋಕರವರು ಉತ್ತಮ ಸಂಘಟಕರು ಹಾಗೂ ಕನ್ನಡ ಚಳುವಳಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಅವರು ರಾಜ್ಯ ಕಸಾಪ ವನ್ನು ಹಾಗೂ ಜಿಲ್ಲಾ, ತಾಲೂಕ ಕಸಾಪಗಳನ್ನು ಅತ್ಯಂತ ಕ್ರಿಯಾಶೀಲಗೊಳಿಸುವರು ಕಾರಣ ರಾಜ್ಯ ಅಧ್ಯಕ್ಷರಾಗಲು ಅತ್ಯಂತ ಅರ್ಹರಾಗಿರುವ ಅವರನ್ನು ಕೊಪ್ಪಳ ಜಿಲ್ಲೆಯ ಕಸಾಪ ಆಜೀವ ಸದಸ್ಯರು ಬೆಂಬಲಿಸಬೇಕೆಂದು ಎಸ್. ವಿ. ಪಾಟೀಲ ಗುಂಡೂರು, ವಾಣಿಶ್ರೀ ಎಸ್. ಪಾಟೀಲ, ವಿಜಯ ಅಮೃತರಾಜ್, ಮಂಜುನಾಥ ಜಿ. ಗೊಂಡಬಾಳ, ಸಿದ್ದಲಿಂಗಯ್ಯ ಹಿರೇಮಠ, ವಿಜಯಾ ಹಿರೇಮಠ, ವೀರಭದ್ರೇಶ್ವರ ಶರಣರು ತಲೆಕಾಲಮಠ (ವಿಮತಾ), ಸಿದ್ದಲಿಂಗೇಶ್ವರಸ್ವಾಮಿ ಕಟಿಗೆಹಳ್ಳಿಮಠ ಕಾರಟಗಿ, ವೆಂಕಾರೆಡ್ಡಿ ಜವಳಗೇರಿ ಗುಂಡೂರು, ಪಂಪನಗೌಡ ಪೋ.ಪಾ. ಗುಂಡೂರು, ಜಿ. ರಾಮಕೃಷ್ಣ ಶ್ರೀರಾಮನಗರ, ಹೆಚ್. ಉಮಾಪತಿ ಸಿದ್ದಾಪೂರ, ಎಂ.ಡಿ.ಸಿರಾಜ್ ಸಿದ್ದಾಪೂರ, ರಮೇಶ ಗಬ್ಬೂರ ಗಂಗಾವತಿ ಇತರರು ಬೆಂಬಲ ವ್ಯಕ್ತಪಡಿಸಿ ಪ್ರಕಟಣೆ ನೀಡಿದ್ದಾರೆ.
ಕಸಾಪ ಸದಸ್ಯತ್ವ ಅಭಿಯಾನ : ಕೊಪ್ಪಳ ಜಿಲ್ಲೆಯ ಎಲ್ಲಾ ವರ್ಗದ ಜನರು ಕನ್ನಡ ಬಲ್ಲ ಕನ್ನಡಪರ ಮನಸ್ಸಿರುವ, ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಜನರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೀಡುವ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗುವದು. ಏಪ್ರಿಲ್ ೧೦ ರಿಂದ ೨೦ ಹತ್ತು ದಿನಗಳ ಕಾಲ ಸದಸ್ಯತ್ವ ಅರ್ಜಿ ತುಂಬಿಸಿಕೊಳ್ಳಲಾಗುವದು. ಕೊಪ್ಪಳ ಬಸ್ ನಿಲ್ದಾಣದಲ್ಲಿ ಅಭಿಯಾನ ನಡೆಸಲಾಗುವದು. ಸದಸ್ಯರಾದವರಿಗೆ ಆಜೀವನ ಪರ್ಯಂತ ಕಸಾಪ ದ ಕನ್ನಡ ನುಡಿ ಮಾಸ ಪತ್ರಿಕೆ ಉಚಿತವಾಗಿ ದೊರೆಯುತ್ತದೆ. ಸದಸ್ಯತ್ವ ಶುಲ್ಕ ಅರ್ಜಿ ಸೇರಿ ೨೬೫ ರೂಗಳು ಇದ್ದು, ಈಗ ಸದಸ್ಯರಾಗುವವರು ಕೇವಲ ೨೫೦ ರೂ ೨ ಭಾವಚಿತ್ರ ಮತ್ತು ಚುನಾವಣೆ ಗುರುತಿನ ಪತ್ರದ ನಕಲನ್ನು ತಂದು ಹತ್ತು ದಿನಗಳ ಅವಧಿಯಲ್ಲಿ ಸದಸ್ಯತ್ವ ಪಡೆಯಬಹುದು. ಉಳಿದ ೧೫ ರೂಪಾಯಿಗಳನ್ನು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಭರಿಸಲಾಗುವದು ಎಂದು ಪ್ರಕಟಣೆಯಲ್ಲಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.


Advertisement

0 comments:

Post a Comment

 
Top