ಬರ: 19ರಂದು ಸರ್ವಪಕ್ಷ ಸಭೆ
ಶಿವಮೊಗ್ಗ, ಎ. 15: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಕುರಿತಂತೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಸಂಬಂಧ, ಎ.19 ರಂದು ಬೆಂಗಳೂರಿನಲ್ಲಿ ಸರ್ವಪಕ್ಷಗಳ ಸಭೆೆಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕರೆದಿದ್ದಾರೆ. ಈ ಸಭೆೆಯಲ್ಲಿ ರಾಜ್ಯದಲ್ಲಿ ಉದ್ಭವಿಸಿರುವ, ಬರದ ಸ್ಥಿತಿಗತಿಯ ಕುರಿತು ಚರ್ಚಿಸಲಾಗುವುದು. ಹಾಗೆಯೇ ರಾಜ್ಯದ ಅಡಿಕೆ, ತೊಗರಿ ಹಾಗೂ ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾ ಗುವುದು. ಮುಖಂಡರ ಅಭಿಪ್ರಾಯ ಆಲಿಸಿದ ನಂತರ, ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಸದಾನಂದ ಗೌಡ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಉದ್ಭವಿಸಿರುವ ಬರ ಪರಿಹಾರ ಕಾರ್ಯಕ್ಕೆ, ಕೇಂದ್ರ ಸರಕಾರದಿಂದ 2606 ಕೋಟಿ ರೂ. ಪರಿಹಾರ ಧನವನ್ನು ಕೋರಲಾಗಿತ್ತು. ಆದರೆ, ಇಲ್ಲಿಯವರೆಗೂ ಸುಮಾರು 100 ಕೋಟಿ ರೂ.ಗಳಷ್ಟು ಅನುದಾನವನ್ನು ಮಾತ್ರ ಅದು ಬಿಡುಗಡೆ ಮಾಡಿದೆ. ಸರ್ವಪಕ್ಷ ನಿಯೋಗ ಕೊಂಡೊಯ್ದ ಸಂದರ್ಭದಲ್ಲಿ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಲಾಗುವುದು ಎಂದು ಅವರು ಹೇಳಿದರು. ಬರ ಪೀಡಿತ ಪ್ರದೇಶಗಳಲ್ಲಿ, ಸೂಕ್ತ ಪರಿಹಾರ ಕಾರ್ಯವನ್ನು ಸರಕಾರ ಕೈಗೊಂಡಿದೆ. ಈ ಪ್ರದೇಶಗಳಲ್ಲಿ, ಬಲವಂತದ ಸಾಲ ವಸೂಲಿ ಮಾಡದಂತೆ ಸ್ಪಷ್ಟ ಆದೇಶವನ್ನು ಸಂಬಂಧಿಸಿದ ವರಿಗೆ ಹೊರಡಿಸಲಾಗಿದೆ. ಸಚಿವರ 3 ತಂಡಗಳು ಬರ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ, ಬರ ಪೀಡಿತ ಪ್ರದೇಶಗಳ ಪ್ರವಾಸ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ. ಇವುಗಳ ಆಧಾರದ ಮೇಲೆ, ಆ ಪ್ರದೇಶಗಳಲ್ಲಿ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಇಲ್ಲಿಯವರೆಗೂ ಬರ ಪರಿಹಾರ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ, 300 ಕೊಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 48 ಕೋಟಿ ರೂ. ವೆಚ್ಚದಲ್ಲಿ, ಹೊಸ ಬೋರ್‌ವೆಲ್‌ಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯವನ್ನು ನಡೆಸಲಾಗಿದೆ ಎಂದು ಅವರು ಅಂಕಿ-ಅಂಶ ನೀಡಿದರು. ಈಗಾಗಲೇ, ಸರಕಾರ ಬರ ಪೀಡಿತ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 30 ಲಕ್ಷ ರೂ. ಅನುದಾನ ವನ್ನು ನೀಡಿದೆ. ಇದೀಗ, ಬರ ಪೀಡಿತ ತಾಲೂಕುಗಳಿಗೆ ತಲಾ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಡಿವಿ ಹೇಳಿದರು.
ಎತ್ತಿನಹೊಳೆ ಯೋಜನೆ ಅನುಷ್ಠಾನದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು. ಈ ಪ್ರದೇಶಗಳಿಗೆ 24 ಟಿಎಂಸಿ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಲಾಗುವುದು ಎಂದರು. ನಾಳೆ ನವದೆಹಲಿಯಲ್ಲಿ, ರಾಷ್ಟ್ರೀಯ ಆಂತರಿಕ ಭದ್ರತಾ ಮಂಡಳಿಯ ಸಭೆೆ ನಡೆಯಲಿದೆ. ಈ ಭೆೆಯಲ್ಲಿ, ರಾಜ್ಯದ ನಕ್ಸಲ್ ಪೀಡಿತ ಪ್ರದೇಶಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಲಾಗುವುದು ಎಂದರು. ಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಜ್ಯಸಬೆ ಸದಸ್ಯ ಆಯನೂರು ಮಂಜುನಾಥ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಮೊದಲಾದವರಿದ್ದರು.
0 comments:
Post a Comment