ಭಾರತವು ಬಹು ಸಂಸ್ಕ್ರತಿಯ , ಜಾತ್ಯಾತೀತ ದೇಶ. ಭಾರತ ಸಂವಿಧಾನದ ಆಶಯವೂ ಕೂಡ ಯಾವುದೇ ಸರಕಾರಗಳು ಅಧಿಕಾರಕ್ಕೆ ಬರಲಿ ಅವುUಳು ಸಂವಿಧಾನ ಬದ್ದವಾಗಿ ವೈಚಾರಿಕ ನಿತಿUಳನ್ನು ಜಾರಿಗೆ ತರಬೇಕು. ಆದರೆ ರಾಜ್ಯ ಬಿ.ಜೆ.ಪಿ. ಸರಕಾರವು ೫ ಮತ್ತು ೮ ನೇ ತರಗತಿಯ ಪಠ್ಯಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ಕೋಮುದ್ವೇಶ ಕೆರಳಿಸುವ, ನೆರೆಹೊರೆಯ ದೇಶದವರ ಜೊತೆ ಯುದ್ದಕ್ಕೆ ಮುಂದಾಗುವಂತೆ, ಜಾತಿಭೇz-ಪಂಕ್ತಿಭೇಧವನ್ನು ಈಗಲೂ ಅನುಸರಿಸುತ್ತಿರುವ ಕೆಲ ಮಠಗಳನ್ನು ದಾರಿ ದೀಪಗಳೆಂದು ಬಣ್ಣಿಸಲಾಗಿದೆ . ಆರ್.ಎಸ್.ಎಸ್ ಹಿನ್ನಲೆ ಇರುವ ವ್ಯಕ್ತಿಗಳನ್ನು ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ನೇಮಿಸುವ ಮೂಲಕ ಒಟ್ಟಿನಲ್ಲಿ ಸಂಘ ಪರಿವಾರದ ರಹಸ್ಯ ಕಾರ್ಯಸೂಚಿ ಸಿದ್ದಾಂತಗಳನ್ನು ಅಳವಡಿಸುವ ಹುನ್ನಾರ ನಡೆಸಿದೆ. ಉದಾಹರಣೆಗೆ ಹಿಂದೂ ದರ್ಮದ ವಿರುದ್ದ ಪದವಾಗಿ ಕ್ರೈಸ್ತರು , ಮುಸ್ಲಿಮರು ಎಂದು ಬಿಂಬಿಸಲಾಗಿದೆ. ಜಾತಿ ದರ್ಮದ ಅರಿವೆ ಇಲ್ಲದ ಮಕ್ಕಳಲ್ಲಿ ದರ್ಮದ ಗೋಡೆಗಳನ್ನು ಕಟ್ಟಲು ಮುಂದಾಗುತ್ತಿದೆ. ಅದೇ ರೀತಿ ವಿಜ್ಞಾನ ತಂತ್ರಜ್ಞಾನಚನ್ನು ಮರೆಮಾಚಿ ಕೇವಲ ಪೂಜೆ, ಯಜ್ಞೆ, ಯಾಗಗಳ ಪ್ರಸ್ತಾಪಗಳೇ ಪಠ್ಯದೆಲ್ಲಡೆ ವಿಜ್ರಂಬಿಸಲಾಗಿದೆ.
ಈ ನಾಡಿನ ಸಾಮರಸ್ಯ ,ಸಮಾನತೆಗಾಗಿ ದುಡಿದ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿರುಚಿ ಜಾತಿ ಕೋಮು ತಾರತಮ್ಯದ ಅಮಾನವಿಯ ವಿಚಾರಗಳಿಗೆ ಕಟ್ಟಿಹಾಕಲಾಗಿದೆ. ಮುಗ್ದ ಜನರ ಆಧ್ಯಾತ್ಮಿಕ ಆಚರಣೆಗಳನ್ನು ಹಿಂದುತ್ವದ ಹೆಸರಿನಲ್ಲಿ ದುರುಪಯೋಗ ಪಡೆದುಕೊಳ್ಳಲು ಸಂಘ ಪರಿವಾರ ಹವಣಿಸಿದೆ.
ಬಸವಣ್ಣ , ಅಂಬೇಡ್ಕರ್ , ಭಗತಸಿಂಗ್ , ಕುವೆಂಪು ಇತರರ ಆಶಯವಾಗಿದ್ದ ಸಮಾನತವಾದವನ್ನು ಸರ್ವಾಧಿಕಾರಕ್ಕೆ ಹೋಲಿಸುವ ಮೂಲಕ ಬಿ.ಜೆ.ಪಿ. ತನ್ನ ಫ್ಯಾಸಿಸ್ಟ್ ಧೋರಣೆಯನ್ನು ಬಹಿರಂಗಗೊಳಿಸಿಕೊಮಡಿದೆ. ಹ್ಯೆದರಾಲಿಯು ಮುಸ್ಲಿಂ ಎನ್ನುವ ಕಾರಣಕ್ಕಾಗಿ ಶತ್ರುವಿಗೆ ಗೆಲುವಾಯಿತು ಎಂದು ಉಲ್ಲೆಖಿಸುವ ಮೂಲಕ ಕೋಮು ಭಾವನೆಯ ವಿಷ ಬೀಜವನ್ನು ಬಿತ್ತುವ ಪ್ರಯತ್ನ ಮಾಡಲಾಗಿದೆ. ಸಮಜ ವಿಜ್ಞಾನ ಪಠ್ಯವನ್ನು ಹಿಂದೂ ಧರ್ಮದ ಪ್ರಚಾರಕ್ಕೆ ಬಲಸಿಕೊಳ್ಳಲಾಗಿದೆ. ಪಠ್ಯಪುಸ್ತಕಗಳಲ್ಲಿ ಅಖಂಡ ಭಾರತದ ನಕ್ಷೆ ನೀಡುವುದರ ಮೂಲಕ ಅನಾವಶ್ಯಕವಾಗಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಹಾಳು ಯೋಚನೆ ರೂಪುಗೊಂಡಿದೆ. ಸ್ಥಳೀಯ ಶಾಸಕರನ್ನು ಶಾಲೆಗೆ ಆಹ್ವಾನಿಸಿ ದ್ವಿಪಕ್ಷ ವ್ಯವಸ್ಥೆ ಬಗ್ಗೆ ಚರ್ಚಿಸಿ ಪಠ್ಯದಲ್ಲಿದ್ದು ಪ್ರಾದೇಶಿಕ ಪಕ್ಷಗಳು ಇರಬಾರದು ಎಂಬ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆದಿದೆ.
ಇಂತಹ ಅನೇಕ ಅಪಾಯಕಾರಿ ಅಂಶಗಳನ್ನು ಸಂಸ್ಕ್ರತಿ, ಧರ್ಮ , ಆಚರಣೆ , ಅಡಳಿತ ಇನ್ನಿತರ ವಿಷಯಗಳ ಜೊತೆ ಈ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ. ವಾಸ್ತವವಾಗಿ ಪಠ್ಯ ಪುಸ್ತಕ ರಚನಾ ಸಮಿತಿಗೆ ಮಾಹಿತಿ ನೀಡದೇ ಎಲ್ಲೋ ಆರ್.ಎಸ್.ಎಸ್. ಕಛೇರಿಯಲ್ಲಿ ಪಠ್ಯ ಪುಸ್ತಕಗಳ ರಚನೆಯಾಗಿವೆ. ಈ ಪುಸ್ತಕಗಳು ನಡಿನ ಮಕ್ಕಳನ್ನು ಧರ್ಮಾಂಧರು , ಜಾತಿವಾದಿಗಳು , ಮೌಡ್ಯರು , ಭಯೋತ್ಪಾದಕರನ್ನಾಗಿ ರೂಪಿಸುತ್ತವೆ.
ಹೀಗಾಗಿ ಈ ಪಠ್ಯ ಪುಸ್ತಕಗಳನ್ನು ಹಾಗೂ ಅದರ ರಚನಾ ಸಮಿತಿಯನ್ನು ತಕ್ಷಣ ರದ್ದುಗೊಳಿಸಿ ನಾಡಿನ ಸಾಹಿತಿಗಳು , ಶಿಕ್ಷಣ ತಜ್ಞರು ಹಾಗೂ ವಚಾರವಮತರನ್ನೊಳಗೊಂಡ ಹೊಸ ಸಮಿತಿ ರಚಿಸಿ ಹೊಸ ಪಠ್ಯಕೃಮ ರಚಿಸಲು ಮುಂದಾಗಬೇಕೆಂದು ಕೊಪ್ಪಳ ಲೋಕಸಭಾ ಯುವ ಕಾಂಗ್ರೇಶ ಅಧ್ಯಕ್ಷರಾದ ಬಸವನಗೌಡ ಬಾದರ್ಲಿ ಆಗ್ರಹಿಸಿದರು
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಎಸ್.ಬಿ.ನಾಗರಳ್ಳಿ, ಇಂದ್ರಾ ಭಾವಿಕಟ್ಟಿ ಮಹಿಳಾ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರು ಕೊಪ್ಪಳ, ಯಮನೂರಪ್ಪ ಸಿಂಗನಾಳ ಜಿಲ್ಲಾ ಎಸ್.ಟಿ ಘಟಕದ ಅಧ್ಯಕ್ಷರು, ಸೋಮನಗೌಡ ಪಾಟೀಲ ಅಳವಂಡಿ, ಜಿಲ್ಲಾ ಹಾಗೂ ತಾಲೂಕ ಪಂಚಾಯತ ಸದಸ್ಯರುಗಳು ಮತ್ತು ನಗರಸಭಾ ಸದಸ್ಯರುಗಳು ಮತ್ತು ಕೊಪ್ಪಳ ಲೋಕಸಬಾ ವ್ಯಾಪ್ತಿಯ ಎಲ್ಲಾ ತಾಲೂಕ ಘಟಕಗಳ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು
0 comments:
Post a Comment