ಕೊಪ್ಪಳ : ಕೊಪ್ಪಳ ಜಿಲ್ಲೆ ಸಾಹಿತ್ಯಿಕ ತವರೂರು. ಹೊಸ ವಿಚಾರಗಳಿಗೆ ಹೊಸ ರೂಪ ಕೊಡುವ ಸಾಹಿತ್ಯಿಕ ಕೇಂದ್ರ. ನಮ್ಮ ಜಿಲ್ಲೆಯಲ್ಲಿ ಸಾಹಿತ್ಯಿಕ ಒಲವು ಹೆಚ್ಚಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷನಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದೇನೆ. ಸ್ವಲ್ಪಮಟ್ಟಿಗಾದರೂ ಸಾಹಿತ್ಯಿಕ ಸೇವೆ ಮಾಡಿದ ತೃಪ್ತಿ ನನಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೭ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಈ ಸಲ ನಡೆಯುವ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಇದುವರೆಗೆ ಚಂಪಾ ಹೊರತುಪಡಿಸಿ ಉತ್ತರ ಕರ್ನಾಟಕದಿಂದ ಯಾರೂ ರಾಜ್ಯಾಧ್ಯಕ್ಷರಾಗಿಲ್ಲ. ಈ ಸಲ ಎಲ್ಲ ಜಿಲ್ಲೆಗಳಿಂದ ನನಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯಶಸ್ವಿಯಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಹೆಮ್ಮೆ ನನಗಿದೆ. ಉತ್ತರ ಕರ್ನಾಟಕದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ನ್ನು ಜನಮುಖಿಯಾಗಿ ಬೆಳೆಸುವ , ಗ್ರಾಮೀಣ ಮಟ್ಟದಲ್ಲಿಯೂ ತಲುಪಿಸುವ ಕೆಲಸ ಮಾಡುವ ಇಚ್ಛೆ ಇದೆ. ಎಲ್ಲರನ್ನು ಒಂದಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ನನ್ನನ್ನು ಆಯ್ಕೆ ಮಾಡಿ ಎಂದು ವಿನಂತಿಸಿಕೊಂಡರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಿಠ್ಠಪ್ಪ ಗೋರಂಟ್ಲಿ- ಎರಡು ಹನಿ, ಮಹಾಂತೇಶ ಮಲ್ಲನಗೌಡರ- ಪ್ರೇಮ ಚುಟುಕುಗಳು, ಪ್ರಕಾಶ ವಿಶ್ವಕರ್ಮ- ಏನೇ ಬರಲಿ ಸ್ವೀಕರಿಸು, ವಿಮಲಾ ಇನಾಂದಾರ- ಯುಗಾದಿ , ಪುಷ್ಪಾವತಿ-ಪಾಧ,ಭಯ, ವಾಸುದೇವ ಕುಲಕರ್ಣಿ- ಮಳೆಯು ಸುರಿಯಲಿ, ಡಾ.ಬಸವರಾಜ ಕುಂಪಾ- ಸೃಷ್ಟಿಯಚ್ಚರಿ, ಎನ್.ಜಡೆಯಪ್ಪ- ಬುದ್ದನಂತೆ ನಾನಲ್ಲ, ಸಿರಾಜ್ ಬಿಸರಳ್ಳಿ- ಸಾಕಿ ಪದ್ಯ, ವೀರಣ್ಣ ಹುರಕಡ್ಲಿ- ಬ್ರಹ್ಮಚಾರಿಯ ಮಗ, ಅನಸೂಯಾ ಜಾಗೀರದಾರ- ಭಾವಗೀತೆಗಳು, ವಿಪರ‍್ಯಾಸ, ಪುಷ್ಪಲತಾ ಏಳುಬಾವಿ- ನಿಸರ್ಗದ ನಿಯಮ,ಮಹೇಶ ಬಳ್ಳಾರಿ- ಕಾಲ, ಗುರುರಾಜ ದೇಸಾಯಿ- ಅವಳು, ಇವಳು, ಶಿವಪ್ರಸಾದ ಹಾಧಿಮನಿ- ನೀಲಿ ಚಿತ್ರದಲ್ಲಿ ಲೀನವಾದವರು. ಶಾಂತಾದೇವಿ ಹಿರೇಮಠ- ಹೊಸತು ಸೃಷ್ಟಿ, ನಟರಾಜ ಸವಡಿ- ಪರಿಸರ, ಬಸವರಾಜ ಸಂಕನಗೌಡರ- ಅಮ್ಮನ ಮಡಿಲು, ಮಂಜುನಾಥ ಡೊಳ್ಳಿನ- ಬೇಕು ಬಿಡುಗಡೆ, ಡಾ.ರೇಣುಕಾ ಕರಿಗಾರ- ತುಜೆ ಮಿಲ್ನೆಕೋ ಕವನಗಳನ್ನು ವಾಚನ ಮಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಶ್ರೀಮತಿ ವಿಮಲಾ ಇನಾಂದಾರ ಇವರಿಗೆ ಕವಿಸಮೂಹದಿಂದ ಸನ್ಮಾನ ಮಾಡಲಾಯಿತು. ಕಾರ‍್ಯಕ್ರಮದಲ್ಲಿ ರಾಜಶೇಖರ ಅಂಗಡಿ, ಹನುಮಂತಪ್ಪ ಅಂಡಗಿ, ಕೃಷ್ಣ ಸಂಗಟಿ, ಶಿವಾನಂದ ಹೊದ್ಲೂರ, ಎ.ಎಚ್.ಅತ್ತನೂರು,ಶಿವಮೂರ್ತಿ, ಡಾ.ರಾಜೇಶ್ವರಿ, ಡಾ. ಚೆನ್ನವೀರಸ್ವಾಮಿ, ಸುಭಾನ್ ಸೈಯದ್, ಕೃಷ್ಣ ಶಾಸ್ತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸ್ವಾಗತವನ್ನು ಎನ್.ಜಡೆಯಪ್ಪ, ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಡೆಸಿಕೊಟ್ಟರು.
0 comments:
Post a Comment