ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಕೈಲಾಸಮಂಟಪದ ವೇದಿಕೆಯಲ್ಲಿ ಲಿಂಗೈಕ್ಯ.ಜ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ೯ ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಸಾಯಂಕಾಲ ೬.೩೦ ಕ್ಕೆ ಜರುಗಿತು.
ಅತಿಥಗಳಾಗಿ ಆಗಮಿಸಿದ ಮಾಜಿ ಸಂಸದರಾದ ಪ್ರೊ.ಐ.ಜಿ.ಸನದಿ ಮಾತನಾಡುತ್ತಾ ಶರಣರು ಇನ್ನೊಬ್ಬರ ಬದುಕನ್ನು ಹಸನು ಮಾಡಲು ಬದುಕುತ್ತಾರೆ. ಅದೇರೀತಿ ಶಿವಶಾಂತವೀರ ಮಹಾಸ್ವಾಮಿಗಳು ಶರಣತತ್ವದಂತೆ ಬದುಕಿದ್ದರು. ಇವರು ಲಿಂಗೈಕ್ಯರಾಗಿ ೯ ವರ್ಷಗತಿಸಿದರೂ ಹಾಗೇನು ಅನ್ನುಸುತ್ತಿಲ್ಲ. ಏಕೆಂದರೆ ಅವರು ಮಾಡಿದ ಮಹಾತ್ಕಾರ ಹಾಗೂ ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ರೀತಿಯನ್ನು ನೋಡಿದರೆ ಅವರು ಬಯಲಾಗಿದ್ದಾರೆ. ಆ ಬಯಲಿನಲ್ಲಿ ನಾವಿದ್ದೆವೆ.ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪ್ರತಿರೂಪವಾಗಿ ಇಂದು ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಂದಿದ್ದಾರೆ ಎಂದರು. ಮುಂದುವರೆದು ವೀರಶೈವ ಧರ್ಮ ದಯೆಯಿಂದ ಕೂಡಿದ ಧರ್ಮ. ಹಂಚಿಕೊಂಡು ತಿನ್ನುವಂತಹ ಧರ್ಮ. ಭಾವಶುದ್ದಿಯಿಂದ ಕೂಡಿದ ಧರ್ಮ. ಶಾಂತಿಪ್ರೇಮದಿಂದ ಕೂಡಿದ ಧರ್ಮ.ಇದರಲ್ಲಿ ನೀತಿನಿಪುಣರು, ಭಕ್ತಿಸಂಪನ್ನರು, ಲಿಂಗನಿಷ್ಟರು ಇದ್ದಾರೆ.ಇಂತಹ ವೀರಶೈವ ಮಠಮಾನ್ಯಗಳು, ಮಹಾಸ್ವಾಮಿಗಳು, ಕರ್ನಾಟಕದಲ್ಲಿ ಜೋಳಿಗೆ ಹಿಡಿದು ಭಿಕ್ಚೆ ಬೇಡಿ ಜ್ಞಾನ ಪ್ರಸಾರ ಹಾಗೂ ಶಿಕ್ಷಣ ಕೇಂದ್ರಗಳನ್ನು ಕಟ್ಟದಿದ್ದರೆ ನಾವೆಲ್ಲರೂ ಇಂದು ಶೋಚನೀಯ ಸ್ಥಿತಿಯಲ್ಲಿರುತ್ತಿದ್ದೆವು. ಅಂತಹ ಸಮಾಜ ಕಟ್ಟುವ ಕಾರ್ಯಗಳನ್ನು ಮಠ ಮಾನ್ಯಗಳು ಮಾಡುತ್ತಿರುವದು ಶ್ಲಾಘನೀಯ ಎಂದರು.
ಮತ್ತೋರ್ವ ಹಿರಿಯ ರಾಜಕಾರಣಿ ಶ್ರೀಬಸವರಾಜ ಪಾಟೀಲ ಸೇಡಂ ಅವರು ಮಾತನಾಡುತ್ತಾ ಇವತ್ತಿನ ಗುರುಸ್ಮರಣೆ ಕಾರ್ಯಕ್ರಮ ಪವಿತ್ತ ಗಳಿಗೆ. ಭಕ್ತಿ ಮಾರ್ಗದಲ್ಲಿ ಇಂದು ಸ್ವಾರ್ಥ ಹೆಚ್ಚಾಗುತ್ತಲಿದೆ. ಜ್ಞಾನದ ಮಾರ್ಗದಲ್ಲಿ ಇಂದು ಕತ್ತಲು ತುಂಬಿಕೊಂಡಿದೆ. ಇಂತಹ ಕತ್ತಲನ್ನು ಆರಿಸಿ ಬೆಳಕನ್ನು ಕೊಡುವಂತಹ ಕಾರ್ಯ ನಾವಿಂದು ಮಾಡಬೇಕಾಗಿದೆ ಎಂದು ಮಾತನಾಡಿದರು.
ವೇದಿಕೆಯಲ್ಲಿನ ಶ್ರೀ ೨೦೦೮ ಜ.ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀಮ.ನಿ.ಪ್ರ.ಜ ಡಾ.ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಶ್ರೀ.ಷ.ಬ್ರ.ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಣದೂರು,ಶ್ರೀ ಶಿವಶಾಂತವೀರ ಶರಣರು ಬಳಗಾನೂರು ಹಾಗೂ ಇತರೆಲ್ಲ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.ಕೊನೆಗೆ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಗಳಿಂದ ಆಶಿರ್ವಚನಜರುಗಿತು.
0 comments:
Post a Comment