ಕೊಪ್ಪಳ: ಹೆಚ್ಚು ಮಾತನಾಡುವದಿಲ್ಲ , ಪ್ರೀತಿ ಬಿಡುವದಿಲ್ಲ , ಭಕ್ತ ಕೋಟೆಯೊಳಗೆ ಬಂಧಿಯಾಗಿಹ ಬುದ್ಧಿ , ಹೆಸರು ಶಿವಶಾಂತ ಉಸಿರು ಮರಿಶಾಂತ. ಎಂಬ ಕವಿವಾಣಿಯು ಕೊಪ್ಪಳದ ಜನತೆಗೆ ನಿತ್ಯನೂತನ. ಅಂಥಹ ಲಿಂಗೈಕ್ಯ ಜಗದ್ಗುರು ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೯ ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಶ್ರೀಗವಿಮಠದಲ್ಲಿ ಜರುಗಿತು. ಬೆಳಗಿನ ಜಾವ ಶ್ರೀಮಠದಲ್ಲಿರುವ ಶ್ರೀಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಗೆ ಅಭಿಷೇಕ ಜರುಗುವದರ ಮೂಲಕ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆಯಾಯಿತು. ಬೆಳಿಗ್ಗೆ ೭.೩೦ ಕ್ಕೆ ಪೂಜ್ಯ ಶ್ರೀಗವಿಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ಸಾಗಿತು. ಇದರಲ್ಲಿ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು, ಗಂಗಾವತಿಯ ಕಲ್ಮಠ ಶ್ರೀಗಳು,ಶ್ರೀಹೆಬ್ಬಾಳ ಶ್ರೀಗಳು, ಹೂವಿನಹಡಗಲಿ ಶ್ರೀಗಳು, ಕೊತಬಾಳ ಶ್ರೀಗಳು, ಅಣದೂರ ಶ್ರೀಗಳು, ಶ್ರೀಮಹಾಂತದೇವರು ಸಂತೆಕಲ್ಲೂರ, ಹಾಗೂ ಮೊದಲಾದ ಹರಗುರುಚರಮೂರ್ತಿಗಳು ಭಾಗವಹಿಸಿದ್ದರು. ಪೂಜ್ಯರ ಜೊತೆಗೆ ಪುರ ಪ್ರಮುಖರು, ಗಣ್ಯರು,ಮಹಿಳೆಯರು,ಶ್ರೀಮಠದ ವಿದ್ಯಾರ್ಥಿಗಳು,ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪಾದಯಾತ್ರೆಯೂ ಶ್ರೀಮಳೆಮಲ್ಲೇಶ್ವರ ದೇವಸ್ಥಾನದಿಂದ ಹೊರಟು ಗದಗ ರಸ್ತೆಯ ಮೂಲಕ ಸಾಗಿ ಬನ್ನಿಕಟ್ಟೆ , ಅಶೋಕಸರ್ಕಲ್, ಜವಾಹರರಸ್ತೆ, ಗಡಿಯಾರಕಂಬದ ಮೂಲಕ ಸಾಗಿ ಶ್ರೀಮಠವನ್ನು ೧೦.೩೦ ಕ್ಕೆ ತಲುಪಿತು. ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿ ಧನ್ಯತಾಭಾವವನ್ನು ವ್ಯಕ್ತಪಡಿಸಿ ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಕೃಪೆಗೆ ಪಾತ್ರರದರು.
Home
»
»Unlabelled
» ಪುಣ್ಯಸ್ಮರಣೆ ನಿಮಿತ್ಯ ಪಾದಯಾತ್ರೆ
Subscribe to:
Post Comments (Atom)
0 comments:
Post a Comment