ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಬುಧವಾರ ರಾಜ್ಯ ಬಜೆಟ್ ಮಂಡಿಸಿದರು. ಪೂರ್ವಾಹ್ನ 11ಗಂಟೆಗೆ ಬಜೆಟ್ ಭಾಷಣ ಪ್ರಾರಂಭಿಸಿದ ಅವರು, ಮೊದಲು 1 ಲಕ್ಷ ಕೋಟಿ ರೂ.ನ ಕೃಷಿ ಬಜೆಟ್ ಮಂಡಿಸಿದರು.
ಇದು ಸದಾನಂದ ಗೌಡರ ಚೊಚ್ಚಲ ಬಜೆಟಾಗಿದ್ದು, ರಾಜ್ಯದಲ್ಲಿ ಎರಡನೆ ಬಾರಿಗೆ ಕೃಷಿ ಬಜೆಟನ್ನು ಮಂಡಿಸಲಾಗುತ್ತದೆ.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ, ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ, ಕೃಷಿ ಕ್ಷೇತ್ರದ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು, ಸುವರ್ಣ ಭೂಮಿ, ಭೂ ಚೇತನ ಸೇರಿದಂತೆ ಹಲವು ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ ಅವರು, ಒಣ ಬೇಸಾಯದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈೆಗೊಳ್ಳಲಾಗುವುದು ಹಾಗೂ ಸಾವಯವ ಕೃಷಿಗೆ 200 ಕೋ.ರೂ., ನೀರಾವರಿ, ಹನಿ ನೀರಾವರಿ ಕೆರೆ ಅಭಿವೃದಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಸಗೊಬ್ಬರ ದಾಸ್ತಾನನ್ನು 8 ಮೆಟ್ರಿಕ್ ಟನ್‌ಗೆ ಹೆಚ್ಚಳಗೊಳಿಸಲಾಗುವುದು ಎಂದ ಅವರು, ಕೃಷಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಮಂಡ್ಯದ ಮೈಶುಗರ್ಸ್ ಪುನಶ್ಚೇತನಕ್ಕೆ 30 ಕೋ.ರೂ., ರೈತ ಸ್ನೇಹಿ ಗೊಬ್ಬರ ಪೂರೈಕೆಗೆ 1,000 ಕೋಟಿ ರೂ. ಮೀಸಲಿಡಲಾಗುವುದು ಎಂದರು.
ಭೂಚೇತನ ಕಾರ್ಯಕ್ರಮವನ್ನು 50 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಲಾಗುವುದು ಎಂದ ಸದಾನಂದ ಗೌಡರು, ಸಬ್ಸಿಡಿ ಬೀಜ ವಿತರಣೆಗೆ 100 ಕೋಟಿ ರೂ., ಬಾಗಲಕೋಟೆಯಲ್ಲಿ ದಾಳಿಂಬೆ ಅಭಿವೃದ್ಧಿ ಕೇಂದ್ರ, ಕೋಲಾರದಲ್ಲಿ ಮಾವು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಹಾಗೂ ರಾಜ್ಯದ ಗೋಸಂವರ್ಧನಾ ಸಂಸ್ಥೆಗಳಿಗೆ ಸಹಾಯಧನ ನೀಡಲಾಗುವುದು ಎಂದರು.
ಪುತ್ತೂರಿಗೆ ಪಶುವೈದ್ಯಕೀಯ ಕಾಲೇಜು: ತುಮಕೂರಿನ ಕೋನೆನಹಳ್ಳಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು, ಅಥಣಿ, ಪುತ್ತೂರು, ಗದಗ್‌ನಲ್ಲಿ ನೂತನ ಪಶು ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಉಚಿತ ವಿದ್ಯುತ್ ಮುಂದುವರಿಕೆ: ರೇಶ್ಮೆ ಇಲಾಖೆಗೆ 293 ಕೋ.ರೂ. ನೀಡಲಾಗುವುದು ಎಂದ ಅವರು, 10 ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿ ಸಲಾಗುವುದು ಎಂದರು. ಸ್ವ-ಸಹಾಯ ಗುಂಪುಗಳಿಗೆ ಶೇ.4 ಬಡ್ಡಿದರದಲ್ಲಿ ಸಾಲ ನೀಡಲಾಗುವುದು ರಾಣಿಬೆನ್ನೂರಿನಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್, ಬೆಳಗಾವಿಯಲ್ಲಿ ತರಕಾರಿ ಅಭಿವೃದ್ಧಿ ಕೇಂದ್ರ, ಗುಲ್ಬರ್ಗಾದಲ್ಲಿ ತೊಗರಿ ಟೆಕ್ನಾಲಜಿ ಅಭಿವೃದ್ಧಿ, ತಿಪಟೂರು ತೆಂಗು ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲಾಗುವುದು ಎಂದರು.
ಯಾಂತ್ರೀಕೃತ ದೋಣಿಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಲಾಗುವುದು ಎಂದ ಅವರು, ಕುಡಿಯುವ ನೀರಿಗೆ ಎತ್ತಿನ ಹೊಳೆ ಯೋಜನೆ ಕೈಗ್ಕೆೊಳ್ಳಲಾಗುವುದು ಎಂದರು. ಇದರಿಂದಾಗಿ ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಿಗೆ ಉಪಯೋಗವಾಗಲಿದೆ ಎಂದರು. ತುಂಗಭದ್ರಾ ಹೂಳು ತೆಗೆಯಲು ಕ್ರಮ, ನಾರಾಯಣಪುರ ಎಡದಂಡೆ, ವಿಜಯನಗರ ನಾಲೆಗಳ ಆಧುನೀಕರಣ, ಕರಾವಳಿ ಜಿಲ್ಲೆಗಳ ಕಿಂಡಿ ಅಣೆಕಟ್ಟುಗಳ ಅಭಿವೃದ್ಧಿ ಹಾಗೂ ಜೈವಿಕ ಇಂಧನ ಅಭಿವೃದ್ಧಿಗೆ 50 ಕೋ.ರೂ. ನೀಡಲಾಗುವುದು ಎಂದರು.
ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲಾಗಿದ್ದು, 6ನೆ ವೇತನ ಆಯೋಗದ ಶಿಫಾರಸ್ಸಿಗೆ ಅಸ್ತು ನೀಡಲಾಗಿದೆ.
ದಿನಗೂಲಿ ನೌಕರರ ಸಂಭಾವನೆವನ್ನು ಪ್ರತಿ ತಿಂಗಳಿಗೆ ಸಾವಿರ ರೂ. ಹೆಚ್ಚಳಗೊಳಿಸಲಾಗಿದೆ ಎಂದ ಅವರು, ಒಣ ಮೆಣಸಿನಕಾಯಿ ಮೇಲಿನ ತೆರಿಗೆಯನ್ನು ಶೇ.5ರಿಂದ 2ಕ್ಕೆ ಇಳಿಸಲಾಗಿದೆ. ಭತ್ತ ಅಕ್ಕಿ, ಬೇಳೆಕಾಳುಗಳ ತೆರಿಗೆ ರಿಯಾಯಿತಿಯನ್ನು ಮುಂದುವರಿಸಲಾಗುವುದು, ಕಚ್ಚಾ ಹತ್ತಿ ಮೇಲಿನ ತೆರಿಗೆಯನ್ನು ಶೇ.2ಕ್ಕೆ ಇಳಿಕೆ, ಸರ್ಜಿಕಲ್ ಪಾದರಕ್ಷೆಗಳ ಮೇಲಿನ ತೆರಿಗೆ 14ರಿಂದ ಶೇ.5ಕ್ಕೆ ಇಳಿಕೆ, ಡಿಸೇಲ್ ಮೇಲೆನ ತೆರಿಗೆ 18ರಿಂದ 16.75 ಇಳಿಸಲಾಗಿದೆ ಎಂದರು.
ಬಂಗಾರ, ಬೆಲೆಬಾಳುವ ಲೋಹಗಳ ಮೇಲಿನ ತೆರಿಗೆಯನ್ನು ಶೇ.2ರಿಂದ 1ಕ್ಕೆ ಇಳಿಸಲಾಗಿದೆ. ಜೂಜು ತೆರಿಗೆ ಮೂಲಕ ಈ ಬಾರಿ ಸಂಪನ್ಮೂಲ ಕ್ರೋಡೀಕರಿಸಲು ಯೋಜನೆ ರೂಪಿಸಲಾಗಿದ್ದು, ಸಿಗರೇಟು, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಶೇ.15ರಿಂದ 17ಕ್ಕೇರಿಸಲಾಗಿದೆ. ಪ್ಲಾಸ್ಟಿಕ್ ನೇಯ್ದ ಬಟ್ಟೆ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ. ತಾತ್ಕಾಲಿಕ ಶೆಡ್‌ಗಳಲ್ಲಿನ ಕಲ್ಯಾಣ ಮಂಟಪಗಳಿಗೆ ಶೇ.10ರಷ್ಟು ತೆರಿಗೆ, ವಿಚಾರ ಸಂಕಿರಣ, ಸಮ್ಮೇಳನ ಸಭಾಂಗಣಗಳಿಗೆ ಶೇ.10 ತೆರಿಗೆ, ಬೀರ್ ಮೇಲೆ ಶೇ.7.5ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಫ್ರೂಟ್ ವೈನ್ ಮೇಲಿನ ಅಬಕಾರಿ ಸುಂಕವನ್ನು ಶೇ.50ರಷ್ಟು ಕಡಿತಗೊಳಿಸಲಾಗಿದೆ. ಬೀಡಿ ಮೇಲೆ ಶೇ.5ರಷ್ಟು ವೌಲ್ಯವರ್ಧಿತ ತೆರಿಗೆ ವಿಧಿಸಲಾಗಿದೆ. ಮುದ್ರಾಂಕ ಶುಲ್ಕವನ್ನು ಶೇ. 6ರಿಂದ ಶೇ.5ಕ್ಕೆ ಇಳಿಸಲಾಗಿದೆ. ಬಾಂಡ್ ಸಂಬಂಧಿತ ಶೇ .05 ಇಳಿಸಲಾಗಿದೆ ಎಂದರು.
ದೇಗುಲ, ಮಠಗಳಿಗೆ ಅನುದಾನ: ವಿಶ್ವಕರ್ಮ ಸಮುದಾಯ ಟ್ರಸ್ಟ್ ಗೆ 1 ಕೋಟಿ ರೂ., ಬಲಿಜ ಸಮುದಾಯ ಅಭಿವೃದ್ಧಿಗೆ 1 ಕೋಟಿ ರೂ., ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋ ತ್ಸವಕ್ಕೆ 50 ಲಕ್ಷ ರೂ., ಗುಲ್ಬರ್ಗಾ ವಿವಿ ಹಡಪದ ಅಧ್ಯಯನ ಪೀಠಕ್ಕೆ 1 ಕೋಟಿ ರೂ., ಹೊಸ ದುರ್ಗದ ಉಪ್ಪಾರ ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ., ಕ್ಷತ್ರಿಯ ಸಮಾಜದ ಅಂಬಾಭವಾನಿ ವಿದ್ಯಾರ್ಥಿ ನಿಲಯಕ್ಕೆ 2 ಕೋಟಿ ರೂ., ವಿಶ್ವಗಾಣಿಗರ ಕೇಂದ್ರಕ್ಕೆ 1 ಕೋಟಿ ರೂ., ಬೆಂಗಳೂರಿನ ಕನಕ ಸ್ಮಾರಕ ಭವನಕ್ಕೆ 1 ಕೋಟಿ ರೂ., ಕಾಗಿನೆಲೆಯಲ್ಲಿ ಸಮುದಾಯ ಭವನಕ್ಕೆ 6 ಕೋಟಿ ರೂ., ಹೇಮಾ ವೇಮಾ ಸದ್ಭಾವನಾ ಪೀಠ ಹಿರೇ ಹೊಸಹಳ್ಳಿ ಭವನಕ್ಕೆ 1 ಕೋಟಿ ರೂ., ಕೊರಟಗೆರೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇಗುಲಕ್ಕೆ 1 ಕೋಟಿ ರೂ., ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ 2 ಕೋಟಿ ರೂ., ಅಂಬಿಗರ ಚೌಡಯ್ಯ ಭವನಕ್ಕೆ 1ಕೋಟಿ ರೂ., ಜೇವರ್ಗಿ ಮರುಳ ಶಂಕರ ಪೀಠಕ್ಕೆ 1 ಕೋಟಿ ರೂ. ಹಾಗೂ ಮೈಸೂರಿನಲ್ಲಿ ಸಂದೇಶ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನವನ್ನು ಡಿ.ವಿ. ಸದಾನಂದ ಗೌಡರು ಪ್ರಕಟಿಸಿದರು.
ವಿವಿಧ ಇಲಾಖೆಗಳಿಗೆ ಅನುದಾನ: ಒಳಾಡಳಿತ ಸಾರಿಗೆ ಇಲಾಖೆಗೆ 4288 ಸಾವಿರ ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ಗೆ 6896 ಕೋಟಿ ರೂ., ಕಂದಾಯ ಇಲಾಖೆಗೆ 3061ಕೋಟಿ ರೂ., ಶಿಕ್ಷಣಕ್ಕೆ 15071 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 5110 ಕೋಟಿ ರೂ., ವಸತಿಗೆ 1439 ಕೋಟಿ ರೂ., ಶಿಕ್ಷಣಕ್ಕೆ 15071 ಕೋಟಿ ರೂ., ವಾಣಿಜ್ಯ ಕೈಗಾರಿಕೆಗೆ 1508 ಕೋಟಿ ರೂ., ನಗರಾಭಿವೃದ್ಧಿಗೆ 8797 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 5110 ಕೋಟಿ ರೂ., ಜಲಸಂಪನ್ಮೂಲ ಇಲಾಖೆಗೆ 8101 ಕೋಟಿ ರೂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 4260 ಕೋಟಿ ರೂ., ಮೆಟ್ರೋಗೆ 500 ಕೋಟಿ ರೂ. ಹಾಗೂ ರಸ್ತೆ ಕಾಮಗಾರಿಗೆ 200 ಕೋಟಿ ರೂ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ 300 ಕೋಟಿ ರೂ. ಕೊಡಗು ಜಿಲ್ಲೆಗಳ ರಸ್ತೆ ಅಭಿವೃದ್ಧಿಗೆ 75 ಕೋಟಿ ರೂ., ಮೈಸೂರು ನಗರದಲ್ಲಿ ಅಟೋ ನಗರ ಸ್ಥಾಪನೆ, ಮೈಸೂರು ನಗರದಲ್ಲಿ ಸಂಚಾರಿ ಸಣ್ಣ ವ್ಯಾಪಾರಿಗಳ ಸಹಕಾರಿ ಸಂಘಕ್ಕೆ 2 ಕೋಟಿ ರೂ., ಸುವರ್ಣ ಗ್ರಾಮೋದಯ ಯೋಜನೆಯ 4ನೆ ಹಂತದಲ್ಲಿ 1000 ಸಾವಿರ ಗ್ರಾಮಗಳ ಅಭಿವೃದ್ಧಿಗೆ 400 ಕೋಟಿ ರೂ., ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ.ಗಳಿಗೆ ನಿರ್ಬಂಧ ರಹಿತ ಅನುದಾನ, ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳಿಗೆ 10 ಕೋಟಿ ರೂ., 200 ಕೋಟಿ ರೂ. ರಸ್ತೆ ಕಾಮಗಾರಿಗೆ ಮೀಸಲಿಡಲಾಗಿದೆ ಎಂದರು.
ಕೃಷಿ ಬಜೆಟ್ ಮುಖ್ಯಾಂಶಗಳು:
ಕೃಷಿ ಕ್ಷೇತ್ರದ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ
ಹೈನುಗಾರಿಕೆಗೆ ಹೆಚ್ಚಿನ ಆದ್ಯತೆಗೆ ನಿರ್ಧಾರ
ಎರಡನೇ ಬಾರಿಗೆ ಕೃಷಿ ಬಜೆಟ್ ಮಂಡನೆ
ಭೂ ಚೇತನ ಯೋಜನೆಗೆ 10 ಕೋಟಿ ರೂ. ಇದರಿಂದ 45 ಲಕ್ಷ ರೈತರಿಗೆ ಲಾಭ
ಶೇ.50 ರಿಯಾಯಿತಿ ದರದಲ್ಲಿ ಕೃಷಿ ಉಪಕರಣ ಪೂರೈಕೆ
ಆರ್ಥಿಕ ಅಭಿವೃದ್ಧಿಗೆ ಭೂ ಚೇತನ ಯೋಜನೆ
ಸಾವಯವ ಕೃಷಿಗೆ 200 ಕೋಟಿ ರೂಪಾಯಿ
ರಸಗೊಬ್ಬರಕ್ಕಾಗಿ ಒಂದು ಸಾವಿರ ಕೋಟಿ
ರೈತ ಸಂಪರ್ಕ ಕೇಂದ್ರಗಳಿಗೆ 50 ಕೋಟಿ ರೂಪಾಯಿ
ರೈತರಿಗೆ ಮಾಹಿತಿ ನೀಡಲು ಕೆ-ಕಿಸಾನ್ ಯೋಜನೆ
ಜೈವಿಕ ಇಂಧನ ಅಭಿವೃದ್ಧಿಗೆ 50 ಕೋಟಿ ರೂಪಾಯಿ
ಕೃಷಿ ಉತ್ಪಾದನೆ ಶೇ.10ರಷ್ಟು ಕುಂಠಿತವಾಗಿದೆ.
ಕೃಷಿ ಇಲಾಖೆ ಅಭಿವೃದ್ಧಿಗೆ 2,921 ಕೋಟಿ ಅನುದಾನ
ಸಬ್ಸಿಡಿ ಬೀಜ ವಿತರಣೆಗಾಗಿ 100 ಕೋಟಿ ರೂ.ಅನುದಾನ
ಕೋಲಾರದಲ್ಲಿ ಮಾವು ಅಭಿವೃದ್ಧಿ ಕೇಂದ್ರಕ್ಕೆ ಇಸ್ರೇಲ್ ಸಹಯೋಗ
ತೋಟಗಾರಿಕೆ ಇಲಾಖೆಗೆ 867 ಕೋಟಿ ರೂಪಾಯಿ
ಅಡಕೆ ಪುನಶ್ಚೇತನಕ್ಕೆ 5.7 ಕೋಟಿ ರೂಪಾಯಿ
ಸುವರ್ಣ ಭೂಮಿ ಯೋಜನೆ ವಿಸ್ತರಣೆ
ನೀರಾವರಿ, ಹನಿ ನೀರಾವರಿ ಮತ್ತು ಕೆರೆಗಳ ಅಭಿವೃದ್ಧಿಗೆ ಒತ್ತು
ಕೃಷಿ ವಿದ್ಯಾರ್ಥಿಗಳಿಗೆ 1,500 ರೂಪಾಯಿ ಗೌರವಧನ
ಮಂಡ್ಯದ ಮೈಶುಗರ್ಸ್ ಸಂಸ್ಥೆ ಪುನರುಜ್ಜೀವನಕ್ಕೆ 30 ಕೋಟಿ ರೂ.
ತುಮಕೂರಿನ ಕೋನೇನಹಳ್ಳಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
ಸಾಮಾನ್ಯ ಬಜೆಟ್: ಏರಿಕೆ-ಇಳಿಕೆ
ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಬುಧವಾರ ರಾಜ್ಯ ಬಜೆಟ್ ಮಂಡಿಸಿದರು. ಪೂರ್ವಾಹ್ನ 11 ಗಂಟೆಗೆ ಬಜೆಟ್ ಭಾಷಣ ಪ್ರಾರಂಭಿಸಿದ ಅವರು, ಮೊದಲು 1 ಲಕ್ಷ ಕೋಟಿ ರೂ. ಕೃಷಿ ಬಜೆಟ್ ಮಂಡಿಸಿದರು.
ಚೊಚ್ಚಲ ಬಜೆಟ್ ಮಂಡಿಸಿದ ಸದಾನಂದ ಮೊದಲಿಗೆ ಕೃಷಿ ಬಜೆಟ್ ಮಂಡಿಸಿ, ನಂತರ ಸಾಮಾನ್ಯ ಬಜೆಟ್ ಮಂಡನೆಯಲ್ಲಿ ತೊಡಗಿದ್ದಾರೆ. ದಿನಗೂಲಿ ನೌಕರರ ಸಂಬಳ ಹೆಚ್ಚಳ ತಿಂಗಳಿಗೆ ಸಾವಿರ ರೂ ಹೆಚ್ಚಳ ಮಾಡಿದ್ದಾರೆ.
ಏರಿಕೆ:
* ಸಿಗರೇಟ್
* ಬೀಡಿ
* ಬೀರ್
* ಕಲ್ಯಾಣ ಮಂಟಪಗಳ ಬಾಡಿಗೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ
ಇಳಿಕೆ:
* ಕಪ್ಪು ಹಲಗೆ
* ಫರ್ನೇಸ್ ಆಯಿಲ್
* ರೆಡಿಮೇಡ್ ಉಡುಪು
* ಡೀಸೆಲ್ ತೆರಿಗೆ ಇಳಿಕೆ
* ಬಂಗಾರ, ಆಭರಣ, ಲೋಹ ಇಳಿಕೆ.
* ಫ್ರೂಟ್ ವೈನ್
* ಕಚ್ಚಾ ಹತ್ತಿ
* ಸರ್ಜಿಕಲ್ ಪಾದರಕ್ಷೆ
* ಮುದ್ರಾಂಕ ಶುಲ್ಕ
* ಒಣ ಮೆಣಸಿನಕಾಯಿ
* ಭತ್ತ ಅಕ್ಕಿ ಬೇಳೆಕಾಳು
ಹಿಂದುಳಿದ ಸಮಾಜದವರಿಗೆ ಕೋಟಿ ಕೋಟಿ ಅನುದಾನ
ಮುಂಗಡಪತ್ರದಲ್ಲಿ ಹಿಂದುಳಿದ ಸಮಾಜದವರಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಇದರ ಜತೆಗೆ ಹಲವು ದೇಗುಲಗಳಿಗೂ ಲಕ್ಷಗಟ್ಟಲೆ ಅನುದಾನ ನೀಡಲಾಗಿದೆ.
ಅನುದಾನಗಳ ವಿವರ:
1. ರಾಣೆಬೆನ್ನೂರಿನ ಸಿದ್ದಾರೂಢ ಸ್ವಾಮಿ ಟ್ರಸ್ಟ್‌ಗೆ 1 ಕೋಟಿ ರೂ.
2. ಹೊಸದುರ್ಗದ ಉಪ್ಪಾರ ಸಮಾಜಕ್ಕೆ 1 ಕೋಟಿ ರೂ.
3. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ.
4. ವಿಶ್ವಗಾಣಿಗ ಸಮುದಾಯ ಟ್ರಸ್ಟ್ 1 ಕೋಟಿ ರೂ.
5. ಬಲಿಜ ಸಮಾಜಕ್ಕೆ 1 ಕೋಟಿ ರೂ.
6. ತಿಗಳ ಸಮಾಜಕ್ಕೆ 1 ಕೋಟಿ ರೂ.
7. ಧಾರವಾಡದಲ್ಲಿ ಕನಕ ಅಧ್ಯಯನ ಪೀಠ ಸ್ತಾಪನೆಗೆ 1 ಕೋಟಿ ರೂ.
8. ಬೆಂಗಳೂರಿನ ತೊಗಟವೀರ ಕ್ಷತ್ರಿಯ ಸಮಾಜಕ್ಕೆ 50 ಲಕ್ಷ ರೂ.
9. ಸೋಲೂರಿನ ಆರ್ಯ ಈಡಿಗ ಸಮಾಜಕ್ಕೆ 1 ಕೋಟಿ ರೂ.
10. ಮಡಿವಾಳ ಸಂಘಕ್ಕೆ 50 ಲಕ್ಷ ರೂ.
11. ಹಿಂದುಳಿದ ವರ್ಗಗಳ ಒಕ್ಕೂಟವು ದಶಮಾನೋತ್ಸವ ಆಚರಿಸಲು 50 ಲಕ್ಷ ರೂ
12. ಕೊರಟಗೆರೆ ಅನ್ನಪೂರ್ಣ ದೇವಸ್ಥಾನಕ್ಕೆ 25 ಲಕ್ಷ ರೂ
13. ಸಫಾಯಿ ಕರ್ಮಚಾರಿ ಆಯೋಗ ರಚನೆ
14. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ
15. ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದ ಮೂಲಸ್ಥಳದಲ್ಲಿ ಜೀರ್ಣೋದ್ದಾರಕ್ಕೆ 2 ಕೋಟಿ ರೂ
16. ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ ಶೃಂಗೇರಿ, ಇವರಿಂದ ಮೈಸೂರಿನಲ್ಲಿ ಸಂದೇಶ ಭವನ ನಿರ್ಮಿಸಲು 2 ಕೋಟಿ ರೂ
17. ಅಂಬಿಗರ ಚೌಡಯ್ಯ ಸ್ಮಾರಕ ಅಭಿವೃದ್ಧಿಗೆ 1 ಕೋಟಿ
ಇನ್ನೂ ಹಲವು ಹಿಂದುಳಿದ ಜಾತಿ, ಸಮುದಾಯಗಳಿಗೆ ಕೋಟಿ ರೂಗಳ ಅನುದಾನ ನೀಡಲಾಗಿದೆ.
ಬೆಂಗಳೂರು ಮೂಲ ಸೌಕರ್ಯಕ್ಕೆ ರೂ. 5500 ಕೋಟಿ
2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
* ಮೆಟ್ರೊ ಕಾಮಗಾರಿಗೆ ರೂ. 500 ಕೋಟಿ.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಗೆ ರೂ. 426 ಕೋಟಿ.
* ರಸ್ತೆ ಕಾಮಗಾರಿಗೆ ರೂ. 200 ಕೋಟಿ.
* ಟೆಂಡರ್ ಶೂರ್ ಡಿಸೈನ್ ನಾರ್ಮ್ಸ್ ರಸ್ತೆ ಕಾಮಗಾರಿ.
* ನಗರದ ಎಂಟು ಕಡೆ ವಾಹನ ನಿಲುಗಡೆ ಸಮುಚ್ಛಯ.
* ಘನ ತ್ಯಾಜ್ಯ ನಿರ್ವಹಣೆಗೆ ರೂ. 200 ಕೋಟಿ.
* ಬಿಬಿಎಂಪಿ ಪ್ರಮುಖ ಯೋಜನೆಗಳಿಗೆ ಅನುದಾನ.
* ರಸ್ತೆ, ಪಾರ್ಕ್, ಘನ ತ್ಯಾಜ್ಯ ನಿರ್ವಹಣೆಗೆ ಅನುದಾನ
* ಬಿಬಿಎಂಪಿಗೆ ರೂ. 1000 ಕೋಟಿ ಅನುದಾನ.
* ಒಳಚರಂಡಿ, ಸಂಸ್ಕರಣಾ ಘಟಕಗಳಿಗೆ ಅನುದಾನ.
* ಕೆರೆ ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕಾಗಿ ರೂ. 50 ಕೋಟಿ.
* ಬೆಂಗಳೂರು ಮೂಲ ಸೌಕರ್ಯಕ್ಕೆ ರೂ. 5500 ಕೋಟಿ.
1 ಲಕ್ಷ ಕೋಟಿ ರು ರಾಜ್ಯ ಬಜೆಟ್ ಮುಖ್ಯಾಂಶಗಳು
ಕೃಷಿ, ಮೀನುಗಾರಿಕೆ, ನೀರಾವರಿ, ಹೈನುಗಾರಿಕೆಗೆ ಆದ್ಯತೆನೀಡಲಾಗಿದೆ. 6 ಬಾರಿ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರು ಜಾರಿಗೆ ಬಂದ ಕೃಷಿ ಬಜೆಟ್ ಅನ್ನು ಸದಾನಂದ ಗೌಡರು ಮುಂದುವರೆಸಿಕೊಂಡು ಬಂದಿದ್ದಾರೆ.
1.05: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ 126 ಕೋಟಿ ರು ಅನುದಾನ
* ಭಾರತೀಯ ವಿಜ್ಞಾನ ಸಂಸ್ಥೆಯ ಚಳ್ಳಕೆರೆ ಕ್ಯಾಂಪಸ್‌ನಲ್ಲಿ ಸೌರಶಕ್ತಿ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ 10 ಕೋಟಿ ರು ಅನುದಾನ.
* ಪತ್ರಕರ್ತರಿಗೆ ಸಂಬಂಧಿಸಿದ ವಿವಿಧ ಕಲ್ಯಾಣ ಚಟುವಟಿಕೆಗಳಿಗಾಗಿ ಒಂದು ಕೋಟಿ ರೂಪಾಯಿಗಳ ಅವಕಾಶವನ್ನು ಮಾಡಲಾಗುವುದು.
* ಮಂಡ್ಯದಲ್ಲಿ ಅಂಕೇಗೌಡ ವಾಚನಾಲಯಕ್ಕೆ 50ಲಕ್ಷ ರೂ. ಅನುದಾನ ನೀಡಲಾಗುವುದು.
* ಬೆಂಗಳೂರಿನ ಟೆಲಿವಿಜನ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ
12.50: ಕನ್ನಡ ಮತ್ತು ಸಂಸ್ಕೃತಿ ಕಲೆ ಹಾಗೂ ಸಾಹಿತ್ಯ, ನೆಲ-ಜಲದ ಸಂರಕ್ಷಣೆ
* ಪ್ರತಿವರ್ಷ ನವೆಂಬರ್ 1 ರಂದು ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ.
* ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 269 ಕೋಟಿ ರು.
* ಮೈಸೂರು ಅರಮನೆಯು 100 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅರಮನೆಯ ಉದ್ಯಾನವನಗಳನ್ನು ಉನ್ನತ ದರ್ಜೆಗೇರಿಸಲು ಹಾಗೂ ಪ್ರವಾಸಿಗರಿಗೆ ಹೆಚ್ಚಿನ
ಅನುಕೂಲ ಒದಗಿಸಲು 25 ಕೋಟಿ ರು.
* ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರು.ಗಳ ಅನುದಾನ
* ಬೆಂಗಳೂರಿನ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮತ್ತು ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು 2 ಕೋಟಿ ರು
* ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಕಂಬಳ ಉತ್ಸವವನ್ನು ಆಚರಿಸಲು 1 ಕೋಟಿ ರು ನೆರವು
* ರಾಜ್ಯ ಶಿಲ್ಪಕಲಾ ಅಕಾಡೆಮಿ ಮೂಲಕ ಶಿಲ್ಪಿಗಳ ತರಬೇತಿಗೆ 3 ಕೋಟಿ ರು.
* ಸರ್ಕಾರವು ಈಗಾಗಲೇ ಘೋಷಿಸಿರುವ 6 ಪಾರಂಪರಿಕ ಪ್ರದೇಶಗಳ ಜೊತೆಗೆ 14 ಹೊಸ ಪ್ರದೇಶಗಳನ್ನು ಪಾರಂಪರಿಕ ನಗರಗಳೆಂದು ಘೋಷಿಸುವ
ಕುರಿತು 1 ಕೋಟಿ ರೂ. ಗಳ ಅನುದಾನ.
* ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು 5 ಕೋಟಿ ರು ಅನುದಾನ.
* ದಕ್ಷಿಣ ಕನ್ನಡದ ಉಳ್ಳಾಲದಲ್ಲಿ 2 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣ.
* ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಕಾಸರಗೋಡು ಇವರಿಗೆ 50 ಲಕ್ಷ ರು.
12.45: ಬ್ರೇಲ್ ಕೈಗಡಿಯಾರಗಳನ್ನು ತೆರಿಗೆಯಿಂದ ವಿನಾಯಿತಿ.
* ಫರ್ನೇಸ್ ಆಯಿಲ್ ಮೇಲಿನ ತೆರಿಗೆಯನ್ನು ಶೇ. 14 ರಿಂದ ಶೇ. 5 ಕ್ಕೆ ಇಳಿಕೆ
* ಕಪ್ಪು ಹಲಗೆಗಳ ಮೇಲಿನ ತೆರಿಗೆಯನ್ನು ಶೇ.14 ರಿಂದ ಶೇ.5 ಕ್ಕೆ ಇಳಿಕೆ.
12.30: ಬಿಬಿಎಂಪಿ ಗೆ 1,000 ಕೋಟಿ ಅನುದಾನ
* ಸಿಗ್ನಲ್ ಮುಕ್ತ ಕಾರಿಡಾರ್ ಗೆ 426 ಕೋಟಿ ರು
* ಘನತ್ಯಾಜ್ಯ ನಿರ್ವಹಣಾಗೆ 200 ಕೋಟಿ
* ಬೆಂಗಳೂರಿನಲ್ಲಿ ನೀರು ಸರಬರಾಜು ಮಂಡಳಿಗೆ 1 ಸಾವಿರ ಕೋಟಿ
* ಬೆಂಗಳೂರಿನ 8 ವಾಹನ ನಿಲುಗಡೆ ಸಮುಚ್ಚಯ
* ಬೆಂಗಳೂರು ಮೂಲ ಸೌಕರ್ಯಕ್ಕೆ 5500 ಕೋಟಿ ರು
12.15: ವಿವಿಧ ಇಲಾಖೆಗೆ ಅನುದಾನ, ಮೀಸಲು
* ಲೋಕೋಪಯೋಗಿ ಇಲಾಖೆ 5,110 ಕೋಟಿ
* ಜಲಸಂಪನ್ಮೂಲ ಇಲಾಖೆ: 8,101 ಕೋಟಿ
* ಆರೋಗ್ಯ : 4,620 ಕೋಟಿ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 6,896 ಕೋಟಿ
* ಸಮಾಜ ಕಲ್ಯಾಣ ಇಲಾಖೆ 3,993 ಕೋಟಿ
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 2883 ಕೋಟಿ
* ಕಂದಾಯ 3,061 ಕೋಟಿ
* ವಸತಿ 1,439 ಕೋಟಿ
* ಶಿಕ್ಷಣ ಇಲಾಖೆ 15,071 ಕೋಟಿ
* ವಾಣಿಜ್ಯ ಮತ್ತು ಕೈಗಾರಿಕೆ 1,508 ಕೋಟಿ
* ಮೆಟ್ರೋ ರೈಲು 500 ಕೋಟಿ
* ರಸ್ತೆ ಕಾಮಗಾರಿ 200 ಕೋಟಿ
* ಕೃಷಿ ಮತ್ತು ತೋಟಗಾರಿಕೆಗೆ 4,096 ಕೋಟಿ
* ಪಶುಸಂಗೋಪಣೆಗೆ 1,209 ಕೋಟಿ
* ಒಳಾಡಳಿತ ಮತ್ತು ಸಾರಿಗೆ 4,288 ಕೋಟಿ
12.10: ಬೀಡಿಗಳ ಮೇಲೆ ಶೇ 5 ರಷ್ಟು ಮೌಲ್ಯ ವರ್ಧಿತ ತೆರಿಗೆ.
* ರೆಡಿಮೇಡ್ ಉಡುಪು ಶೇ 14 ರಿಂದ ಶೇ. 5 ಕ್ಕೆ ಇಳಿಕೆ.
* ಬಂಗಾರ, ಆಭರಣ, ಲೋಹಗಳ ಮೇಲಿನ ಶೇ 2 ರಿಂದ 1 ಕ್ಕೆ ಇಳಿಕೆ.
* ತಾತ್ಕಾಲಿಕ ಕಲ್ಯಾಣ ಮಂಟಪಗಳ ಮೇಲೆ ಶೇ 8 ರಷ್ಟು ತೆರಿಗೆ.
* ಸಿಗರೇಟ್, ಶೇ 15 ರಿಂದ 17ಕ್ಕೇ ಏರಿಕೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ
* ಡೀಸೆಲ್ ತೆರಿಗೆ ಇಳಿಕೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ
* ಬೀರ್ ಮೇಲಿನ ತೆರಿಗೆ ಶೇ 7.5 ಸುಂಕ
* ಫ್ರೂಟ್ ವೈನ್ ಶೇ .50 ರಷ್ಟು ತೆರಿಗೆ ಕಡಿತ
* ಕಚ್ಚಾಹತ್ತಿ ಶೇ 5 ರಿಂದ ಶೇ 2 ಕ್ಕೆ ಇಳಿಕೆ
* ಸರ್ಜಿಕಲ್ ಪಾದರಕ್ಷೆ ತೆರಿಗೆ ಶೇ 14 ರಿಂದ ಶೇ 5ಕ್ಕೆ ಇಳಿಕೆ
* ಮುದ್ರಾಂಕ ಶುಲ್ಕ ಶೇ 6ರಿಂದ ಶೇ5ಕ್ಕೆ ಇಳಿಕೆ
* ಬಾಂಡ್ ಸಂಬಂಧಿತ ಶೇ .೦5 ಇಳಿಕೆ
* ದಿನಗೂಲಿ ನೌಕರರ ಸಂಬಳ ಹೆಚ್ಚಳ ತಿಂಗಳಿಗೆ ಸಾವಿರ ರೂ ಹೆಚಳ
* ಒಣ ಮೆಣಸಿನಕಾಯಿ ತೆರಿಗೆ ಶೆ 14 ರಿಂದ ಶೇ 5ಕ್ಕೆ ಇಳಿಕೆ.
* ಭತ್ತ ಅಕ್ಕಿ ಬೇಳೆಕಾಳು ತೆರಿಗೆ ಹೆಚ್ಚಳ ಇಲ್ಲ.
12:00: ದೇಗುಲ, ಮಠಗಳಿಗೆ ಅನುದಾನ
* ವಿಶ್ವಕರ್ಮ ಸಮುದಾಯ ಟ್ರಸ್ಟ್ ಗೆ 1 ಕೋಟಿ ರು
* ಬಲಿಜ ಸಮುದಾಯ ಅಭಿವೃದ್ಧಿಗೆ 1 ಕೋಟಿ ರು
* ಹಿಂದುಳಿಕ ವರ್ಗಗಳ ಒಕ್ಕೂಟದ ದಶಮಾನೋತ್ಸವಕ್ಕೆ 50 ಲಕ್ಷ ರು
* ಗುಲ್ಬರ್ಗಾ ವಿವಿ ಹಡಪದ ಅಧ್ಯಯನ ಪೀಠಕ್ಕೆ 1 ಕೋಟಿ
* ಹೊಸದುರ್ಗದ ಉಪ್ಪಾರ ಜನಾಂಗ ಅಭಿವೃದ್ಧಿಗೆ 1 ಕೋಟಿ ರು
* ಕ್ಷತ್ರಿಯ ಸಮಾಜದ ಅಂಬಾಭವಾನಿನಿಲಯಕ್ಕೆ 2 ಕೋಟಿ
* ವಿಶ್ವಗಾಣಿಗರ ಕೇಂದ್ರಕ್ಕೆ 1 ಕೋಟಿ
* ಬೆಂಗಳೂರಿನ ಕನಕ ಸ್ಮಾರಕ ಭವನಕ್ಕೆ 1 ಕೋಟಿ
* ಹೇಮಾ ವೇಮಾ ಸದ್ಭಾವನಾ ಪೀಠ ಹಿರೇ ಹೊಸಹಳ್ಳಿ ಭವನಕ್ಕೆ 1 ಕೋಟಿ
* ಕೊರಟಗೆರೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇಗುಲ 1 ಕೋಟಿ
* ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ 2 ಕೋಟಿ ರು
* ಅಂಬಿಗರ ಚೌಡಯ್ಯ ಭವನಕ್ಕೆ 1ಕೋಟಿ
* ಜೇವರ್ಗಿ ಮರುಳ ಶಂಕರ ಪೀಠಕ್ಕೆ 1 ಕೋಟಿ
* ಮೈಸೂರು ಸಂದೇಶ ಭವನಕ್ಕೆ 2 ಕೋಟಿ
* ಬೆಂಗಳೂರಿನ ಭಗಿರಥ ಸಮಾಜಕ್ಕೆ 1 ಕೋಟಿ
* ನೆಲಮಂಗಲದ ಮಹಾಲಕ್ಷ್ಮಿ ಟ್ರಸ್ಟ್ ಗೆ 1 ಕೋಟಿ
* ತಿಗಳ ಸಮಾಜ ಅಭಿವೃದ್ಧಿಗೆ ಕ್ಕೆ 1 ಕೋಟಿ ರು
* ಸೊಮವಂಶ ಆರ್ಯ ಕ್ಷತ್ರೀಯ ವಿದ್ಯಾರ್ಥಿ ಭವನಕ್ಕೆ 50 ಲಕ್ಷ ರು
* ತೊಗಟವೀರ ಕ್ಷತ್ರಿಯ ಸಂಘಟನೆಗೆ 1 ಕೋಟಿ
* ಆರ್ಯ ಈಡಿಗ ಸಂಸ್ಥಾನ ಸೋಲೂರು 1 ಕೋಟಿ
* ರಾಜ್ಯ ಮಡಿವಾಳ ಸಮಾಜಕ್ಕೆ 1 ಕೋಟಿ
* ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂ.ಗಳ ಅನುದಾನ
* ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ 2 ಕೋಟಿ
* ತಿಪಟೂರು ತಾಲ್ಲೂಕಿನ ಕಾಡಸಿದ್ಧೇಶ್ವರ ಶ್ರೀ ಮಠಕ್ಕೆ 1 ಕೋಟಿ ರು
* ಬೆಂಗಳೂರಿನ ಕೆಂಗೇರಿ ಬಳಿ ಇರುವ ರಾಮೋಹಳ್ಳಿ ಶ್ರೀ ಸಿದ್ದಾರೂಢ ಪೀಠಕ್ಕೆ 2 ಕೋಟಿ ರು
* ಹೊರರಾಜ್ಯದ ಛತ್ರಗಳ ನಿರ್ವಹಣೆಗಾಗಿ 10 ಕೋಟಿ ರು.
* ರುದ್ರಭೂಮಿ ನಿರ್ವಹಣೆಗಾಗಿ 10 ಕೋಟಿ ರು.
11:50: ಕಾಗಿನೆಲೆಗೆ 6 ಕೋಟಿ, ಕನಕ ಭವನಕ್ಕೆ 1 ಕೋಟಿ
* ಕನಕ ಅಧ್ಯಯನ ಪೀಠಕ್ಕೆ 1 ಕೋಟಿ
* ಕೃಷಿ ವಿದ್ಯಾರ್ಥಿಗಳಿಗೆ 1,500 ಸಹಾಯ ಧನ
* ಬಾಗಲಕೋಟೆಯಲ್ಲಿ ದಾಳಿಂಬೆ ಅಭಿವೃದ್ಧಿ ಕೇಂದ್ರ
* ಚಪಾತಿ, ಪರೋಟ ಮೇಲಿನ ತೆರಿಗೆ ಶೇ 14 ರಿಂದ 7ಕ್ಕೆ ಇಳಿಕೆ.
* ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆಗೆ 400 ಕೋಟಿ ರು
* ತುಮಕೂರಿನಲ್ಲಿ ಪುಷ್ಪ ಹರಾಜು ಕೇಂದ್ರ
* ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಿಕೆ ಹೆಚ್ಚಳ
* ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್, 6ನೇ ವೇತನ ಆಯೋಗದ ಶಿಫಾರಸ್ಸಿಗೆ ಅಸ್ತು
* ಸಾವಯವ ಕೃಷಿಗೆ 200 ಕೋಟಿ
* ಮಂಡ್ಯದ ಮೈಶುಗರ್ ಅಭಿವೃದ್ಧಿಗೆ 30 ಕೋಟಿ
* ಜೈವಿಕ ಇಂಧನ ಅಭಿವೃದ್ಧಿಗೆ 50 ಕೋಟಿ
* ಕೃಷಿ ಇಲಾಖೆಗೆ 2921 ಕೋಟಿ ಅನುದಾನ
* ಬೆಳಗಾವಿ, ಬಾಗಲಕೋಟೆ, ಕೋಲಾರದಲ್ಲಿ ಮಾವು ಅಭಿವೃದ್ಧಿ ಕೇಂದ್ರ
* ನೀರಾವರಿ ವಲಯಕ್ಕೆ 10,500 ಕೋಟಿ
* ಸಬ್ಸಿಡಿ ದರದಲ್ಲಿ ಬೀಜ ಉತ್ಪಾದನೆಗೆ 100 ಕೋಟಿ
* ಕೃಷಿ ವಿದ್ಯುತ್ ಗಾಗಿ 4,600 ಕೋಟಿ ರು. ಅನುದಾನ.
* ಹೊಸ ಪಶು ವೈದ್ಯಕೀಯ ಕಾಲೇಜಿಗೆ 60 ಕೋಟಿ ರು ಅನುದಾನ
* ರಾಣೆಬೆನ್ನೂರಿನಲ್ಲಿ ಮೆಕ್ಕೆ ಜೋಳ ಟೆಕ್ನಾಲಜಿ ಕೇಂದ್ರ
* ತಿಪಟೂರಿನಲ್ಲಿ ತೆಂಗಿನಕಾಯಿ ಟೆಕ್ನಾಲಜಿ ಪಾರ್ಕ್
* ಕೋನೇನಹಳ್ಳಿಯಲ್ಲಿ ಕೃಷಿ ಪಾಲಿಟೆಕ್ನಿಟ್ ಕಾಲೇಜು
* ರೇಷ್ಮೆ ಇಲಾಖೆಗೆ 293 ಕೋಟಿ
* 123 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ
* 10 HP ಪಂಪ್ ಸೆಟ್ ತನಕ ಉಚಿತ ವಿದ್ಯುತ್ ಪೂರೈಕೆಗೆ
* ಸ್ವಸಹಾಯ ಸಂಘಗಳಿಗೆ ಶೇ 4 ರಂತೆ ಬಡ್ಡಿದರದಂತೆ ಸಾಲ ಸೌಲಭ್ಯ
* ಗುಲ್ಬರ್ಗಾದಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್
* ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್
* ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರಕ್ಕೆ ಅನುಕೂಲ.
ಮೌಲ್ಯವರ್ಧಿತ ತೆರಿಗೆ ಇಳಿಕೆ
1) ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು ಹಾಗೂ ಅಕ್ಕಿ ಮತ್ತು ಗೋಧಿಯ ಪದಾರ್ಥಗಳ ಮೇಲಿನ ತೆರಿಗೆ ವಿನಾಯಿತಿಯನ್ನು 2012ರ ಏಪ್ರಿಲ್‌ನಿಂದ ಮತ್ತೊಂದು ವರ್ಷದವರೆಗೆ ಮುಂದುವರಿಸಲಾಗುವುದು.
2) ಬೇಯಿಸಲು ತಯಾರಿರುವ ಚಪಾತಿ ಮತ್ತು ಪರೋಟಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.
3) ಕಚ್ಛಾ ಹತ್ತಿ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಲಾಗುವುದು.
4) ಒಣಮೆಣಸಿನಕಾಯಿ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಲಾಗುವುದು. ಇದಲ್ಲದೆ, ಅವುಗಳ ಅಂತರರಾಜ್ಯ ಮಾರಾಟ ಮೇಲಿನ ಕೇಂದ್ರ ಮಾರಾಟ ತೆರಿಗೆಯನ್ನು ಶೇ.1ರಿಂದ ಶೇ.2ಕ್ಕೆ
ಏರಿಸಲಾಗುವುದು.
5) ಸರ್ಜಿಕಲ್ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.
6) ಬ್ರೇಲ್ ಕೈಗಡಿಯಾರಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗುವುದು.
7) ಕಪ್ಪು ಹಲಗೆಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.
8) ಬಂಗಾರ ಮತ್ತಿತರೆ ಬೆಲೆಬಾಳುವ ಲೋಹಗಳ ಆಭರಣಗಳು ಮತ್ತು ವಸ್ತುಗಳು ಹಾಗೂ ಅಮೂಲ್ಯ ಮತ್ತು ಅರೆ-ಅಮೂಲ್ಯ ಹರಳುಗಳ ಮೇಲಿನ ತೆರಿಗೆಯನ್ನು ಶೇ.2ರಿಂದ ಶೇ.1ಕ್ಕೆ ಇಳಿಸಲಾಗುವುದು.
9) ಸಿದ್ಧಪಡಿಸಿದ ಉಡುಪುಗಳ ತಯಾರಿಕೆ ಮತ್ತು ಕಸೂತಿ ಕೆಲಸಗಳ ಗುತ್ತಿಗೆ ಕಾಮಗಾರಿಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.
10) ಹೊರದೇಶಕ್ಕೆ ಪ್ರಯಾಣ ಮಾಡುವ ಹಡಗುಗಳಿಗೆ ಮಾರಾಟ ಮಾಡುವ ಫರ್ನೇಸ್ ಆಯಿಲ್ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.
11) ನಾಫ್ತಾ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.
ಸಂಪನ್ಮೂಲ ಕ್ರೋಢೀಕರಣ ಕ್ರಮಗಳು
1) ಬೀಡಿಗಳ ಮೇಲೆ ಶೇ.5ರ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುವುದು.
2) ಸಿಗರೇಟುಗಳು ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.15ರಿಂದ ಶೇ.17ಕ್ಕೆ ಏರಿಸಲಾಗುವುದು.
3) ಪ್ಲಾಸ್ಟಿಕ್‌ನಿಂದ ನೇಯ್ದ ಬಟ್ಟೆಗಳ ಮೇಲೆ ಶೇ.5ರ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುವುದು.
ಮಾರಾಟ ತೆರಿಗೆ
1) ಡೀಸೆಲ್ ಮೇಲಿನ ತೆರಿಗೆಯನ್ನು ಶೇ.1.25ರಷ್ಟು ಇಳಿಸಲಾಗಿದ್ದು, ತೆರಿಗೆ ಶೇ.18ರಿಂದ ಶೇ.16.75ಕ್ಕೆ ಇಳಿಯುತ್ತದೆ.
2) ಹೊರದೇಶಗಳಿಗೆ ಪ್ರಯಾಣ ಮಾಡುತ್ತಿರುವ ಹಡಗುಗಳಿಗೆ ಮಾರಾಟ ಮಾಡುವ ಹೈ ಫ್ಲಾಶ್ ಹೈ ಸ್ಪೀಡ್ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.18ರಿಂದ ಶೇ.1ಕ್ಕೆ ಇಳಿಕೆ.
ವಿಲಾಸ ತೆರಿಗೆ
1) ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಸಲಾಗುತ್ತಿರುವ ಕಲ್ಯಾಣ ಮಂಟಪಗಳ ಮೇಲೆ ಶೇ.10ರಷ್ಟು ತೆರಿಗೆ.
2) ವಿಚಾರ ಸಂಕಿರಣ ಸಭಾಂಗಣ, ಸಮ್ಮೇಳನ ಸಭಾಂಗಣ ಮತ್ತು ಅಂತಹವುಗಳ ಮೇಲೆ ಶೇ.10ರಷ್ಟು ತೆರಿಗೆ.
ಕನ್ನಡ ಬಾವುಟ ಹಾರಿಸುವುದು ಕಡ್ಡಾಯ
ಚೊಚ್ಚಲ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಗೆದ್ದಿದ್ದಾರೋ, ಬಿದ್ದಿದ್ದಾರೋ ಕಾಲವೇ ನಿರ್ಧರಿಸಲಿದೆ. ಆದರೆ, ಕರುನಾಡಿನ ಹುಟ್ಟುಹಬ್ಬ, ನವೆಂಬರ್ 1ರಂದು ಕರ್ನಾಟಕದಾದ್ಯಂತ ಕನ್ನಡ ಬಾವುಟವನ್ನು ಹಾರಿಸುವುದನ್ನು ಕಡ್ಡಾಯ ಮಾಡಿರುವುದು ಮಾತ್ರ ಪಂಚಕೋಟಿ ಕನ್ನಡಿಗರ ಮನವನ್ನು ಖಂಡಿತವಾಗಿ ಗೆದ್ದಿದೆ.
ಪ್ರತಿ ನವೆಂಬರ್ 1, ಕನ್ನಡ ರಾಜ್ಯೋತ್ಸವದಂದು ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಮೇಲೆ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಬೇಕೆಂದು ಸದಾನಂದ ಗೌಡರು ಆಜ್ಞೆ ಹೊರಡಿಸಿದ್ದಾರೆ. ಸರಕಾರಿ ಕಚೇರಿ ಮಾತ್ರವಲ್ಲ ಇಲ್ಲಿರುವ ಎಲ್ಲ ಖಾಸಗಿ ಕಚೇರಿಗಳ ಮೇಲೆಯೂ ಕನ್ನಡ ಬಾವುಟ ಹಾರಿಸುವುದು ಕಡ್ಡಾಯ ಮಾಡಿದ್ದರೆ ಇನ್ನೂ ಚೆಂದಾಗಿರುತ್ತಿತ್ತು.
ಇದಲ್ಲದೆ, ಕನ್ನಡ ನಾಡಿನಲ್ಲಿ ಕನ್ನಡಮಯ ವಾತಾವರಣವನ್ನು ಸೃಷ್ಟಿಸುವ ಮತ್ತು ಚಟುವಟಿಕೆ ಗಳನ್ನು ಹೆಚ್ಚಿಸುವ ಉದ್ದೇಶದಿಂದ ಅನೇಕ ಅನುದಾನಗಳನ್ನು ಸದಾನಂದ ಗೌಡರು ಹರಿಯಬಿಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದುದೆಂದರೆ, ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 269 ಕೋಟಿ ರು. ಅನುದಾನ ನೀಡಲಾಗಿದೆ.
ಕರ್ನಾಟಕದ ಹೆಮ್ಮೆಯ ಮೈಸೂರು ಅರಮನೆ 100 ವರ್ಷ ಪೂರೈಸಿರುವ ಸಂದರ್ಭದಲ್ಲಿ ಅಲ್ಲಿನ ವಾಸ್ತುಶಿಲ್ಪವನ್ನು ನವೀಕರಿಸುವ ಮತ್ತು ಉದ್ಯಾನವನವನ್ನು ಉನ್ನತ ದರ್ಜೆಗೆ ಏರಿಸಿ, ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಉದ್ದೇಶದಿಂದ 25 ಕೋಟಿ ರು. ಅನುದಾನ ನೀಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರು. ಅನುದಾನ ಬಜೆಟ್ಟಿನಲ್ಲಿ ನೀಡಲಾಗಿದೆ.
ಹಾಗೆಯೆ, ಕರ್ನಾಟಕದ ಕರಾವಳಿಯ ಅತ್ಯಂತ ಜನಪ್ರಿಯ ಕ್ರೀಡೆ ಕಂಬಳವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ, ಆ ಆಚರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಾಖಲಿಸಲು ನಿರ್ಧರಿಸಲಾಗಿದ್ದು, ಆಚರಣೆಗಾಗಿ 1 ಕೋಟಿ ರು. ಮೊತ್ತವನ್ನು ಸದಾನಂದ ಗೌಡರು ಬಜೆಟ್ಟಿನಲ್ಲಿ ಒದಗಿಸಿದ್ದಾರೆ.
0 comments:
Post a Comment