PLEASE LOGIN TO KANNADANET.COM FOR REGULAR NEWS-UPDATES







  ಕೊಪ್ಪಳ : ಯಾವುದೇ ಸಮಾಜವು ಸಂಘಟನೆಯಾಗುವುದು ವ್ಯವಸ್ಥೆಯ ವಿಭಜನೆಯಲ್ಲ, ಅದು ಆ ಸಮಾಜ ಹಾಗೂ ಇತರೆ ಸಮಾಜಗಳಲ್ಲಿರುವ ಶೋಷಿತರ ಕಲ್ಯಾಣಕ್ಕೆ ಸಹಕಾರಿಯಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
    ರೆಡ್ಡಿ ಕ್ಷೇಮಾಭಿವೃದ್ದಿ ಸಂಗವು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
     ರೆಡ್ಡಿ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಮೂಲತಃ ಶ್ರಮಿಕರಾಗಿರುವ ಅವರು ಕಷ್ಟ ಸಹಿಷ್ಣುಗಳು. ಈ ಕಾರಣಕ್ಕಾಗಿ ಅವರ ಮೂಲ ಉದ್ಯೋಗ ಕೃಷಿಪ್ರಧಾನವಾಗಿದೆ. ಅವರು ಎಂದಿಗೂ ಕೈ ಚಾಚುವ ಜಾಯಮಾನದವರಲ್ಲ. ದುಡಿದು ಇತರರಿಗೂ ಹಂಚುವ ಮನೋಧರ್ಮದವರು. ಅವರು ಎಲ್ಲಿಯೇ ಇರಲಿ, ಕಷ್ಟಪಟ್ಟು ಜೀವನವನ್ನು ಕಟ್ಟಿಕೊಳ್ಳುತ್ತಾರೆ ಎಂದರು.
       ಇಂಥ ಅವರ ಶ್ರಮಿಕಜೀವನ ಇತರೆ ಸಮಾಜಕ್ಕೆ ಮಾದರಿ. ರೆಡ್ಡಿ ಸಮಾಜ ಬಾಂಧವರು ಬದುಕನ್ನು ಇತರೆ ಸಮಾಜವು ಅನುಸರಿಸಿದರೆ ಬೇಗನೇ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಇದನ್ನೇ ಐತಿಹಾಸಿಕವಾಗಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಾಽಸಿ ತೋರಿಸಿದ್ದಾರೆ. ಶ್ರೀ ಹೇಮರಡ್ಡಿ ಮಲ್ಲಮ್ಮ ನಿಜಕ್ಕೂ ಸಾಽ. ಅವರು ಆರಾಧ್ಯದೈವ ಸಮಾನರು. ಇನ್ನು ಯೋಗಿ ವೇಮನರಂತು  ಮಹಾಮಹೀಮಾ ಪುರುಷ. ಎಲ್ಲವನ್ನೂ ತ್ಯಜಿಸಿದ ತ್ಯಾಗಮಯಿ ಜೀವನ ಸಾಗಿಸುವುದರೊಂದಿಗೆ ಯೋಗಿಯಾಗಿ ನಾಡಿಗೆ ಅನೇಕ ಸಂದೇಶಗಳನ್ನು ನೀಡಿದ ಅವರೊಬ್ಬ ಮಹಾಆಧ್ಯಾತ್ಮ ದೇವರು. ಅವರು ನೀಡಿದ ಸಂದೇಶಗಳು ಮನುಕುಲಕ್ಕೆ  ಮಾರ್ಗದರ್ಶಿಯಾಗಿವೆ ಎಂದು ಸೋಮನ್ಣ ಬಣ್ಣಿಸಿದರು.
       ಸಮಾಜದ ಸಂಘಟನೆಯ ವಿಷಯದಲ್ಲಿ ಎಲ್ಲರೂ ಪಕ್ಷ ಬೇಧ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ಸಮಾಜದ ಪ್ರಗತಿ ಸಾದ್ಯ ಎಂದು ಅವರು ಹೇಳಿದರು.
       ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಮಾತನಾಡಿ, ಸಮಾಜ ಸಂಘಟನೆ ನೆಪದಲ್ಲಿ ಇಡೀ ವ್ಯವಸ್ಥೆಯ ವಿಘಟನೆಯಾಗಬಾರದು. ಇಡೀ ವೀರಶೈವ ಸಮಾಜ ಐಕ್ಯತೆಯನ್ನು ಮೆರೆಯುವ ಮೂಲಕ ಉಪಪಂಗಡಗಳ ಭಿನ್ನಬೇಧಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಎಲ್ಲ ಮಹಾನ್ ಪುರುಷರ, ಶರಣರ ತತ್ವ, ಆದರ್ಶಗಳನ್ನು ಜಾರಿಮಾಡಲು ಶ್ರೀಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
          ರಾಜಕೀಯ ನಾಯಕರು ಇಂದು ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸ್ವಾರ್ಥಕ್ಕಾಗಿ ಸಮಾಜಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ. ಇದನ್ನು ತಿದ್ದಿ ಹೇಳುವ ಕೆಲಸಗಳನ್ನು ಸ್ವಾಮಿಜೀಗಳಾದವರು ಮಾಡುವ ಮೂಲಕ ಸಮಾಜದಲ್ಲಿ ಐಕ್ಯತೆಯನ್ನು ಕಾಪಾಡುವ ತುರ್ತು ಸ್ಥಿತಿ ಈಗಿದೆ. ಅದನ್ನು ಗವಿಮಠದ ಶ್ರೀಗಳು ಸೇರಿದಂತೆ ಶ್ರೇಷ್ಠಾತೀಶ್ರೇಷ್ಠ ಶ್ರೀಗಳು ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ.ಕೆ.ಪಾಟೀಲ್ ಮಾತನಾಡಿ, ಶ್ರೀ ಶಿವಶರಣೆ ಹೇಮರಡ್ಡಿ  ಮಲ್ಲಮ್ಮ ಹಾಗೂ ವೇಮನ ಬೇರೆ ಬೇರೆಯಲ್ಲ. ಅವರನ್ನು ಅನುಸರಿಸುವವರೂ ಬೇರೆ ಬೇರೆ ಪಂಗಡಗಳಿಗೆ ಸೇರಿದವರು ಅಲ್ಲ. ಅವರಿಬ್ಬರೂ ಒಂದೇಯಾಗಿರುವುದರಿಂದ ಅವರ ಅನುಯಾಯಿಗಳು ಒಂದಾಗುವ ಅಗತ್ಯವಿದೆ. ಕೆಲವೇ ಕೆಲವರು ಇದನ್ನು ತಪ್ಪಾಗೊ ಅರ್ಥೈಸಿದ್ದಾರೆ. ಇದು ಸರಿಯಲ್ಲ ಎಂದರು.
      ಕೌಟುಂಬಿಕ ಸಾಮರಸ್ಯದ ಬದುಕಿಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಬದುಕು ಅತ್ಯತ್ತಮ ಉದಾಹರಣೆ. ವಿಶ್ವಕ್ಕೆ ಕೌಟುಂಬಿಕ ಪ್ರೀತಿ, ವಿಶ್ವಾಸದ ಸಂದೇಶವನ್ನು ಸಾರಿದ ಏಕೈಕ ಮಹಾನ್ ಸಾಽ ಮಹಿಳೆ ಮಲ್ಲಮ್ಮ. ಇದಕ್ಕಾಗಿಯೇ ಆಕೆ ಪ್ರತಿಯೊಬ್ಬರ ಆರಾಧ್ಯದೈವ. ಇನ್ನು ವೇಮನ ಕುರಿತು ಬಣ್ಣಿಸುವುದು ಅಸಾಧ್ಯ. ಆತ ಮಹಾನ್ ಮೇಧಾವಿ. ಇವರಿಬ್ಬರ ಕುರಿತು ಇನ್ನೂ ಸತ್ಯಾನ್ವೇಷಣೆ ನಡೆಯುವ ಅಗತ್ಯವಿದೆ ಎಂದು ಹೇಳಿದರು.  
         ವಿಧಾನ ಪರಿಷತ್ ಸದಸ್ಯ ಎಸ್.ತಿಪ್ಪಣ್ಣ ಪುಸ್ತಕ ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಶಾಸಕ ಸಂಗಣ್ಣ ಕರಡಿ, ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಶಾಸಕ ಅಮರೇಗೌಡ ಬಯ್ಯಾಪುರ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಆರ.ಎಸ್.ಪಾಟೀಲ್,  ಡಿ.ಆರ್.ಪಾಟೀಲ್, ಸಿ.ಎಸ್.ಪಾಟೀಲ್,  ಎಸ್.ಆರ್.ಪಾಟೀಲ್,  ಜಿ.ವೀರಪ್ಪ,  ವೈ.ಜಿ.ಆಲೂರು, ಶೇಖರಗೌಡ ಮಾಲೀಪಾಟೀಲ್, ಎಚ್.ಗೀರೇಗೌಡ, ಎಂ.ಆರ್.ಪಾಟೀಲ್, ಸಂಸದ ಶಿವರಾಮೇಗೌಡ, ನವೀನ್ ಗುಳಗಣ್ಣವರ್,  ವಿರುಪಣ್ಣ ಅಗಡಿ, ಜ್ಯೋತಿ ಬಿಲ್ಗಾರ್, ಕೆ.ಬಸವರಾಜ ಹಿಟ್ನಾಳ, ಡಾ.ಸೀತಾ ಗೂಳಪ್ಪ ಹಲಗೆರಿ, ಸುರೇಶ ದೇಸಾಯಿ, ಅಪ್ಪಣ್ಣ ಪದಕಿ, ಡಾ.ಅಮಾತೆಪ್ಪನವರ್, ಹನುಮಂತಪ್ಪ ಅಂಗಡಿ, ಅಂದಾನಪ್ಪ ಅಗಡಿ, ಮಲ್ಲಣ್ಣ ಅಗಡಿ, ಈಶಪ್ಪ ಬಳ್ಳೊಳ್ಳಿ ಸೇರಿದಂತೆ ಮತ್ತಿತರರು ಇದ್ದರು.
        ಸಿ.ವಿ.ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಭೂಮರೆಡ್ಡಿ ಸ್ವಾಗತಿಸಿದರು. ಸದಾಶಿವ ಪಾಟೀಲ್ ಪ್ರಾರ್ಥಿಸಿದರು. ಸೋಮರೆಡ್ಡಿ ಅಳವಂಡಿ ನಿರೂಪಿಸಿದರು. ಎಚ್.ಎಲ್.ಹಿರೇಗೌಡರ್ ವಂದಿಸಿದರು.
----------------------------

Advertisement

0 comments:

Post a Comment

 
Top