PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಫೆ.೨೩: ದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಂದ ಹೊರಬಂದು ಆರ್ಥಿಕ ಸ್ವಾಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ದೇವರಾಜ ಕರೆ ನೀಡಿದರು.
ಅವರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ದೇವದಾಸಿ ಪುನರ್ವಸತಿ ಯೋಜನೆಯ ಆಶ್ರಯದಲ್ಲಿ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಹಾಗೂ ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆ ಇವರ ವತಿಯಿಂದ ಫೆ. ೨೧ ಹಾಗೂ ೨೨ ರಂದು ಕೊಪ್ಪಳ ತಾಲೂಕಿನ ಸಿಂದೋಗಿ ಮತ್ತು ಕುಷ್ಟಗಿ ತಾಲೂಕಿನ ನವಲಳ್ಳಿ ಗ್ರಾಮದಲ್ಲಿ ಶ್ರೀ ಮರುಳ ಸಿದ್ಧೇಶ್ವರ ಹಾಗೂ ಶ್ರೀ ದುರ್ಗಾ ದೇವಿ ಜಾತ್ರಾ ನಿಮಿತ್ಯ ಸಾಮಾಜಿಕ ಅನಿಷ್ಠ ದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಹಮ್ಮಿಕೊಂಡಿದ್ದ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಕಾರ್ಯಕ್ರಮವನ್ನು ಅವರು ಕಂಜರಿ ನುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಲ ತಲಾಂತರದಿಂದ ಆಚರಣೆಯಯಲ್ಲಿರುವ ಸಾಮಾಜಿಕ ಅನಿಷ್ಠ ಪದ್ದತಿ ತೊಲಗಬೇಕು. ೨೧ನೆ ಶತಮಾನದಲ್ಲಿ ಬಾಳುತ್ತಿರುವ ನಾವು ಎಚ್ಚತ್ತುಕೊಂಡು ಈ ಪದ್ದತಿ ನಿರ್ಮೂಲನೆಗಾಗಿ ಸರಕಾರದೊಂದಿಗೆ ಕೈಜೋಡಿಸಬೇಕು ಎಂದರು. 
ದೇವದಾಸಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಭಿಗಳಾಗಿ ಸಮಾಜಿದ ಮುಖ್ಯವಾಹಿನಿಗೆ ಬರುಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೌಶಲ್ಯ ತರಬೇತಿ ಪಡೆಯುವ ಮೂಲಕ ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ದೇವದಾಸಿಯರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಸರಕಾರಿ ಸೇವೆಗಳಲ್ಲಿ ಆದ್ಯತೆ, ಪ್ರತಿಭಾವಂತರಿಗೆ ಉನ್ನತ ವ್ಯಾಸಂಗಕ್ಕೆ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೈ. ಬಿ. ಜೂಡಿ ಅವರ ನಿರ್ದೆಶನದಲ್ಲಿ ಕಲಾವಿದರಾದ ಶಂಕರಪ್ಪ ಹಡಪದ, ಲಲಿತಾ ಪೂಜಾರ, ಹನುಮಕ್ಕ ಮಾಲಿಪಾಟೀಲ, ಪ್ರಕಾಶ ಬೋಚನಳ್ಳಿ, ಮಂಜನಾಥ ಬಿ. ಗೊಂಡಬಾಳ ಹಾಗೂ ಶರಣಯ್ಯ ಇವರು ’ಹುಡುಗಾಟ ಹುಡುಕಾಟ’ ಎನ್ನುವ ಬೀದಿ ನಾಟಕ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ಅಭಿನಯಿಸಿದರು.

Advertisement

0 comments:

Post a Comment

 
Top