: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಇವರ ವತಿಯಿಂದ ಮಹಿಳಾ ಮತ್ತು ಮಕ್ಕಳ ಸಾಗಾಟ ಹಾಗೂ ಬಾಲ್ಯ ವೇಶ್ಯಾ ಪದ್ಧತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ನೀಡಲು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾದ ಸಮಿತಿ ಸದಸ್ಯರಿಗೆ ಏರ್ಪಡಿಸಲಾದ ೨ ದಿನಗಳ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಉದ್ಘಾಟಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಫೆ. ೩ ರಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ಅನಿಷ್ಠ ಪದ್ಧತಿಯನ್ನು ತಡೆಗಟ್ಟಿ ಜನರಿಗೆ ಜಾಗೃತಿ ಮೂಡಿಸಲು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಕಾರ್ಮಿಕ ಅಧಿಕಾರಿ ಮುಸಿಯಪ್ಪ ಮಾತನಾಡಿ ಅಧಿಕಾರಿಗಳು ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ಮತ್ತು ಬಾಲ್ಯ ವೇಶ್ಯಾ ಪದ್ಧತಿ ನಿವಾರಣೆಯಲ್ಲಿ ಶ್ರಮಿಸಲು ಕರೆ ನೀಡಿದರು. ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ ಇವರು ಮಹಿಳ ಮತ್ತು ಮಕ್ಕಳ ಸಾಗಾಟದ ಕಾರಣಗಳನ್ನು ವಿವರಿಸಿ ತಡೆಗಟ್ಟಲು ತಿಳಿಸಿದರು.
ಯುನಿಸೆಫ್ ತರಬೇತಿ ಸಂಯೋಜಕ ಹರಿಶ್ ಜೋಗಿ ಹಾಗೂ ಸಹಾಯಕ ತರಬೇತಿ ಸಂಯೋಜಕ ಶಿವರಾಮ ಪವರ್ ಪಾಯಿಂಟ್ ಮೂಲಕ ವಿಶೇಷ ತರಬೇತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಸರೋಜಾ ಬೆಂಗಳೂರು ಚಿಗುರು ಸಂಸ್ಥೆ ನಿರ್ದೇಶಕರಾದ ಸರೋಜ, ಹಾಗೂ ಮೈಸೂರಿನ ಧನಂಜಯ ಅವರು ಮಹಿಳಾ ಮತ್ತು ಮಕ್ಕಳ ಸಾಗಾಟ ಕಾರಣಗಳು ಕಾಯ್ದೆ ಕಾನೂನುಗಳು ತಡೆ ವಿಧಾನ ಬಗ್ಗೆ ವಿವರ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ. ವೆಂಕಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹನುಮಕ್ಕ ಪ್ರಾರ್ಥಿಸಿದರು, ಸರೋಜಾ ಬಾಕಳೆ ಇವರು ಕಾರ್ಯಕ್ರಮ ನಿರೂಪಿಸಿದರು ಗೀತಾ ಹಿರೇಮನಿ ವಂದಿಸಿದರು.
0 comments:
Post a Comment