PLEASE LOGIN TO KANNADANET.COM FOR REGULAR NEWS-UPDATES


  ಜಿಲ್ಲಾ ಪಂಚಾಯತಿ ಇರಕಲ್ಲಗಡ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಸ್ತೂರಮ್ಮ ಬಸನಗೌಡ ಪಾಟೀಲ್ ಅವರು ೩೭೩ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
  ಕೊಪ್ಪಳದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕಸ್ತೂರಮ್ಮ ಬಸನಗೌಡ ಪಾಟೀಲ್ ಅವರು ೯೩೮೮ ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ರೇಣುಕಾ ಗುಮಗೇರಿ ೯೦೧೫ ಮತ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ರೇಣುಕಮ್ಮ ನಿಂಗಪ್ಪ ಕುಷ್ಟಗಿ ಅವರು ಕೇವಲ ೫೯೫ ಮತಗಳನ್ನು ಪಡೆದರು.  ಇದರಿಂದಾಗಿ ಬಿಜೆಪಿಯ ಕಸ್ತೂರಮ್ಮ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಗುಮಗೇರಿ ಅವರಿಗಿಂತ ೩೭೩ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.  ಈ ಉಪಚುನಾವಣೆಯಲ್ಲಿ ೨೫೨೨೬ ಮತದಾರರ ಪೈಕಿ ಪುರುಷ-೯೭೬೩, ಹಾಗೂ ಮಹಿಳೆ-೯೨೩೫ ಜನ ಮತ ಚಲಾವಣೆ ಮಾಡಿದ್ದರು.  ಚುನಾವಣೆಯ ಮತ ಎಣಿಕೆಗಾಗಿ ಒಟ್ಟು ೩ ಟೇಬಲ್‌ಗಳನ್ನು ವ್ಯವಸ್ಥೆಗೊಳಿಸಿ, ಒಟ್ಟು ೧೧ ಸುತ್ತಿನ ಮತ ಎಣಿಕೆ ನಡೆಸಲಾಯಿತು ಎಂದು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top