PLEASE LOGIN TO KANNADANET.COM FOR REGULAR NEWS-UPDATES


Veeranna Madiwalarಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೯೩ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪಡೆದ ವೀರಣ್ಣ ಮಡಿವಾಳರನ್ನು ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು. ವೀರಣ್ಣ ಮಡಿವಾಳರ ಕಾವ್ಯ ಬರವಣಿಗೆ ಕುರಿತು ಸಿರಾಜ್ ಬಿಸರಳ್ಳಿ, ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿದರು. ನಮ್ಮ ಕೊಪ್ಪಳದಲ್ಲಿಯೇ ಬರವಣಿಗೆ ಆರಂಭಿಸಿ ಇಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪಡೆಯುವ ಹಂತ ತಲುಪಿರುವ ವೀರಣ್ಣ ಮಡಿವಾಳರ ಕಾವ್ಯದ ಶೈಲಿಯ ಬಗ್ಗೆ ಚರ್ಚಿಸಲಾಯಿತು. 
ಇದಕ್ಕೂ ಮೊದಲು ಮಹೇಶ ಬಳ್ಳಾರಿಯವರ 'ಕತ್ತಲು' ಕಥಾವಾಚನ ಮಾಡಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ವಾಸುದೇವ ಕುಲಕರ್ಣಿ-ಬಿಸಿಲ ಧಗೆ, ಕುರುವತ್ತಿಗೌಡ್ರ- ವಿಶ್ವಶಾಂತಿ, ಬಸು ಚೌಡಕಿ-ಚುಟುಕು,ಓಕುಳಿ, ಶಾಂತಾದೇವಿ ಹಿರೇಮಠ- ತುಂಗಾ ಪಾನ, ಲಲಿತಾ ಭಾವಿಕಟ್ಟಿ- ಮರಭೂಮಿಗೆ ತಂಪನೆರೆದವರು, ನಟರಾಜ ಸವಡಿ-ಆಶಯ, ಒಲಿವನುಲಿ, ಶಾಂತು ಬಡಿಗೇರ- ಜೀವನಾಡಿ, ಕಂಬಾಳಿ ಮಠ- ೩೭೧ನೇ ಕಲಂ, ಡಾ.ರೇಣುಕಾ ಕರಿಗಾರ- ಹೂವು. ಭ್ರಮೆಗಳು, ಬಸವರಾಜ ಸಂಕನಗೌಡರ-ಜಡೆ,ಗಾಂಧಿ , ವಿಠ್ಠಪ್ಪ ಗೋರಂಟ್ಲಿ- ಕವಿಸತ್ತು ಕವಿತೆ ಉಳಿಯಬೇಕು ಕವನಗಳನ್ನು ವಾಚನ ಮಾಡಿದರು. ನಂತರ ವಾಚನ ಮಾಡಿದ ಕವಿತೆಗಳ ಕುರಿತು ಲಲಿತಾ ಭಾವಿಕಟ್ಟಿ ಮಾತನಾಡಿದರು.  
ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ವೀರಣ್ಣ ಹುರಕಡ್ಲಿ, ಬಸವರಾಜ ಶೀಲವಂತರ, ಶರಣಪ್ಪ ಕೊತಬಾಳ  ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಬಸವರಾಜ ಚೌಡಕಿ, ವಂದನಾರ್ಪಣೆಯನ್ನು ಶಾಂತು ಬಡಿಗೇರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರು. 

Advertisement

0 comments:

Post a Comment

 
Top